ಲೈಂಗಿಕ ದೌರ್ಜನ್ಯ ಆರೋಪ: ಸಿಸಿಟೀವಿ ದೃಶ್ಯ ತೋರಿಸಿದ ಬಂಗಾಳ ಗೌರ್ನರ್
ತಮ್ಮ ವಿರುದ್ಧ ರಾಜಭವನದ ಗುತ್ತಿಗೆ ಸಿಬ್ಬಂದಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ದೌರ್ಜನ್ಯ ನಡೆದಿದೆ ಎನ್ನಲಾದ ದಿನದ ಸಿಸಿಟೀವಿ ದೃಶ್ಯವನ್ನು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಗುರುವಾರ ಜನಸಾಮಾನ್ಯರ ಎದುರು ಪ್ರದರ್ಶಿಸಿದರು.
ಕೋಲ್ಕತಾ (ಮೇ.10): ತಮ್ಮ ವಿರುದ್ಧ ರಾಜಭವನದ ಗುತ್ತಿಗೆ ಸಿಬ್ಬಂದಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ದೌರ್ಜನ್ಯ ನಡೆದಿದೆ ಎನ್ನಲಾದ ದಿನದ ಸಿಸಿಟೀವಿ ದೃಶ್ಯವನ್ನು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಗುರುವಾರ ಜನಸಾಮಾನ್ಯರ ಎದುರು ಪ್ರದರ್ಶಿಸಿದರು.
ಮೇ 2ರ ಸಂಜೆ 5.30ರ ಆಸುಪಾಸಿನ ಒಂದು ತಾಸಿಗೂ ಹೆಚ್ಚು ಕಾಲಾವಧಿಯ ರಾಜಭವನದ ಮುಖ್ಯ ಗೇಟ್‌ನ ಸಿಸಿಟಿವಿ ವಿಡಿಯೋವನ್ನು ರಾಜಭವನದ ಸೆಂಟ್ರಲ್ ಹಾಲ್‌ನಲ್ಲಿ ಕೆಲ ಸಾರ್ವಜನಿಕರಿಗೆ ರಾಜ್ಯಪಾಲರು ತೋರಿಸಿದರು. ಅದರಲ್ಲಿ ಮಹಿಳೆಯು ನೀಲಿ ಜೀನ್ಸ್ ಮತ್ತು ಟಾಪ್ ಧರಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಆಗಮನದ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸರ ಔಟ್‌ಪೋಸ್ಟ್‌ಗೆ ತೆರಳುವುದು ಕಾಣಿಸುತ್ತದೆ. ಅದನ್ನು ವೀಕ್ಷಿಸಿದ ಪ್ರೊ.ತುಷಾರ್ ಕಾಂತಿ ಮುಖರ್ಜಿ ಎಂಬುವರು, ‘ವಿಡಿಯೋದಲ್ಲಿರುವ ಮಹಿಳೆಯ ನಡತೆಯಲ್ಲಿ ನನಗೆ ಅಸಹಜ ಎಂಬಂತಹುದು ಏನೂ ಕಾಣಿಸಲಿಲ್ಲ’ ಎಂದು ಹೇಳಿದ್ದಾರೆ.
ನಮಗೆ ಬರೀ 15 ಸೆಕೆಂಡ್ ಸಾಕು: 100 ಕೋಟಿ ಹಿಂದೂಗಳ ಫಿನಿಷ್ ಎಂದಿದ್ದ ಒವೈಸಿಗೆ ನವನೀತ್ ಸವಾಲ್
ಏ.24 ಮತ್ತು ಮೇ 2ರಂದು ತಮ್ಮ ಮೇಲೆ ರಾಜ್ಯಪಾಲರು ಲೈಂಗಿಕ ದೌರ್ಜನ ನ್ಯಡೆಸಿದ್ದಾರೆ ಎಂದು ಮಹಿಳೆ ಇತ್ತೀಚೆಗೆ ಕೋಲ್ಕತಾ ಪೊಲೀಸರಿಗೆ ದೂರು ನೀಡಿದ್ದರು. ಅದನ್ನು ನಿರಾಕರಿಸಿದ್ದ ರಾಜ್ಯಪಾಲ, ‘ನಾನು ಮಮತಾ ಬ್ಯಾನರ್ಜಿ ಮತ್ತು ಅವರ ಪೊಲೀಸರನ್ನು ಬಿಟ್ಟು ಜನಸಾಮಾನ್ಯರಿಗೆ ಸಿಸಿಟಿವಿ ವಿಡಿಯೋ ತೋರಿಸುತ್ತೇನೆ’ ಎಂದಿದ್ದರು. ಅದರಂತೆ 92 ಜನರು ವಿಡಿಯೋ ವೀಕ್ಷಿಸಲು ಆಸಕ್ತಿ ವ್ಯಕ್ತಪಡಿಸಿ ಕರೆ ಮಾಡಿದ್ದು, ಗುರುವಾರ ಕೆಲವರು ಮಾತ್ರ ಆಗಮಿಸಿದ್ದರು ಎಂದು ರಾಜಭವನದ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.