1947ರಲ್ಲಿ ಪ್ರಧಾನಿ ನೆಹರೂಗೆ ಸೆಂಗೋಲ್ ಹಸ್ತಾಂತರಿಸಿದ್ದ ಅಧೀನಮ್ ಮಠದ ಈಗಿನ ಸ್ವಾಮೀಜಿಗಳು 2024ರಲ್ಲೂ ಮೋದಿಯೇ ಪ್ರಧಾನಿಯಾಗಬೇಕು ಎಂದಿದ್ದಾರೆ. ನೂತನ ಸಂಸತ್ ಭವನ ಉದ್ಘಾಟನೆ ವೇಳೆ ಪ್ರಧಾನಿ ಮೋದಿಗೆ ಸ್ವಾಮೀಜಿ ಇದೇ ಐತಿಹಾಸಿಕ ಸೆಂಗೋಲ್ ಹಸ್ತಾಂತರಿಸಲಿದ್ದಾರೆ. 

ನವದೆಹಲಿ(ಮೇ.26) ನೂತನ ಸಂಸತ್ ಭವನದಲ್ಲಿ ಐತಿಹಾಸಿಕ ಸೆಂಗೋಲ್ ಪ್ರತಿಷ್ಟಾಪನೆಯಾಗಲಿದೆ. 1947ರಲ್ಲಿ ಬ್ರಿಟೀಷರಿಂದ ಅಧಿಕಾರ ಹಸ್ತಾಂತರ ವೇಳೆ ಪ್ರಧಾನಿ ನೆಹರೂಗೆ ನೀಡಿದ್ದ ಇದೇ ಸೆಂಗೋಲ್ ಇದೀಗ ಹೊಸ ಭವನದಲ್ಲಿ ವಿರಾಜಮಾನವಾಗಲಿದೆ. ಸದ್ಯ ಮ್ಯೂಸಿಂಯನಲ್ಲಿರುವ ಈ ಸೆಂಗೋಲನ್ನು 1947ರಲ್ಲಿ ಸೆಂಗೋಲ್ ನೀಡಿದ್ದ ಮಠದ ಈಗಿನ ಸ್ವಾಮೀಜಿಗಳು ಪ್ರಧಾನಿ ಮೋದಿಗೆ ಹಸ್ತಾಂತರಿಸಲಿದ್ದಾರೆ. ಇದರ ಹಿನ್ನಲೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಸ್ವಾಮೀಜಿ ಶ್ರೀ ಹರಿಹರ ದೆಸಿಕಾ ಸ್ವಾಮಿಂಗಳ್, 2024ರಲ್ಲೂ ನರೇಂದ್ರ ಮೋದಿಯೇ ಪ್ರಧಾನಿಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಧಾನಿ ಮೋದಿ ವಿಶ್ವ ಮೆಚ್ಚಿದ ನಾಯಕ. ಮೋದಿ ಭಾರತದ ಚಿತ್ರಣ ಬದಲಿಸಿದ್ದಾರೆ. ವಿಶ್ವದ ನಾಯಕರು ಮೋದಿ ಕುರಿತು ಆಡುತ್ತಿರುವ ಮಾತುಗಳನ್ನು ಕೇಳಿ ನಮಗೆ ಹೆಮ್ಮೆಯಾಗುತ್ತಿದೆ. ಭಾರತದಲ್ಲಿ ಜನರ ಜೀವನ ಮಟ್ಟ ಸುಧಾರಣೆಗೆ ಎಲ್ಲಾ ಕಾರ್ಯಗಳನ್ನು ಮಾಡುತ್ತಿದ್ದಾರೆ. 2024ರಲ್ಲೂ ಮೋದಿಯೇ ಮತ್ತೆ ಪ್ರಧಾನಿಯಾಗಬೇಕು ಎಂದು ಮಧುರೈ ಅಧೀನಮ್ ಮಠದ ಸ್ವಾಮೀಜಿ ಶ್ರೀ ಹರಿಹರ ದೆಸಿಕಾ ಹೇಳಿದ್ದಾರೆ. 

ನೂತನ ಸಂಸತ್ ಭವನ ಉದ್ಘಾಟನೆ, 75 ರೂ ವಿಷೇಷ ನಾಣ್ಯ ಬಿಡುಗಡೆ ಮಾಡಲಿದೆ ಕೇಂದ್ರ ಸರ್ಕಾರ!

ನೂತನ ಸಂಸತ್ ಭವನ ಉದ್ಘಾಟನೆ ವೇಳೆ ಶ್ರೀ ಹರಿಹರ ದೆಸಿಕಾ ಸ್ವಾಮೀಜಿ, ಪ್ರಧಾನಿ ನರೇಂದ್ರ ಮೋದಿಗೆ ಶ್ರೀ ಹರಿಹರ ದೆಸಿಕಾ ಸ್ವಾಮೀಜಿ ಐತಿಹಾಸಿಕ ಸೆಂಗೋಲ್ ಹಸ್ತಾಂತರಿಸಲಿದ್ದಾರೆ. ಸದ್ಯ ಮ್ಯೂಸಿಂಯನಲ್ಲಿರುವ ಈ ಸೆಂಗೋಲನ್ನು ಸ್ವಾಮೀಜಿ ಮೋದಿಗೆ ಹಸ್ತಾಂತರಿಸಲಿದ್ದಾರೆ. ಪ್ರಧಾನಿ ಮೋದಿ ಈ ಸೆಂಗೋಲನ್ನು ನೂತನ ಸಂಸತ್ ಭವನದಲ್ಲಿ ಪ್ರತಿಷ್ಠಾಪನೆ ಮಾಡಲಿದ್ದಾರೆ.

ಮಧುರೈನ ಅಧೀನಮ್ ಮಠ 1947ರಲ್ಲಿ ಪ್ರಧಾನಿ ಜವಾಹರ್ ಲಾಲ್ ನೆಹರೂಗೆ ಈ ಸೆಂಗೋಲ್ ನೀಡಿದ್ದರು. ಬ್ರಿಟಿಷರಿಂದ ಅಧಿಕಾರ ಹಸ್ತಾಂತರ ರೂಪವಾಗಿ ಈ ಸೆಂಗೋಲ್ ನೀಡಲಾಗಿತ್ತು. ಬಳಿಕ ಈ ಸೆಂಗೋಲ್ ಮ್ಯೂಸಿಯಂ ಸೇರಿತ್ತು. ಇದೀಗ ಅದೆ ಸೆಂಗೋಲನ್ನು ಅದೇ ಮಠದ ಈಗಿನ ಸ್ವಾಮಿಜಿಗಳು ಪ್ರಧಾನಿ ಮೋದಿಗೆ ಹಸ್ತಾಂತರಿಸಲಿದ್ದಾರೆ. 

‘1947ರಲ್ಲಿ ಭಾರತದಲ್ಲಿನ ಬ್ರಿಟಿಷರ ಕಡೆಯ ವೈಸ್‌ರಾಯ್‌ ಅವರಿಂದ ಭಾರತದ ಮೊದಲ ಪ್ರಧಾನಿ ಜವಾಹರ ಲಾಲ್‌ ನೆಹರು ಈ ರಾಜದಂಡ ಸ್ವೀಕರಿಸಿದ್ದರು. ಅದನ್ನೇ ಇದೀಗ ಹೊಸ ಕಟ್ಟಡದಲ್ಲಿ ಅಳವಡಿಲಾಗುತ್ತಿದೆ. ಭಾರತಕ್ಕೆ ಸ್ವಾತಂತ್ರ್ಯ ನೀಡುವುದು ಖಚಿತವಾದ ಮೇಲೆ ನೆಹರು ಅವರನ್ನು ಭೇಟಿಯಾಗಿದ್ದ ಬ್ರಿಟಿಷ್‌ ವೈಸ್‌ರಾಯ್‌ ಲಾರ್ಡ್‌ ಮೌಂಟ್‌ಬ್ಯಾಟನ್‌, ಅಧಿಕಾರ ಹಸ್ತಾಂತರ ಪ್ರಕ್ರಿಯೆ ಅಥವಾ ಕಾರ್ಯಕ್ರಮ ಹೇಗಿರಬೇಕು ಎಂದು ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ನೆಹರು ಅವರು ಸಿ.ರಾಜಗೋಪಾಲಚಾರಿ (ರಾಜಾಜಿ) ಅವರನ್ನು ಸಂಪರ್ಕಿಸಿದ್ದರು. ಈ ವೇಳೆ ಅಧಿಕಾರ ಹಸ್ತಾಂತರಕ್ಕಾಗಿ ಚೋಳ ವಂಶದಲ್ಲಿ ಒಬ್ಬ ರಾಜ ಇನ್ನೊಬ್ಬ ರಾಜನಿಗೆ ಸೆಂಗೋಲ್‌ (ರಾಜದಂಡ) ನೀಡುವ ಪದ್ಧತಿಯನ್ನು ಅನುಸರಿಸಬಹುದು ಎಂದು ರಾಜಾಜಿ ಅವರು ನೆಹರುಗೆ ಸಲಹೆ ನೀಡಿದ್ದರು.

ಐತಿಹಾಸಿಕ ಸೆಂಗೋಲ್‌ಅನ್ನು ನೆಹರು ಅವರ 'ಚಿನ್ನದ ಊರುಗೋಲು' ಮಾಡಿದ್ಯಾರು? ಕಾಂಗ್ರೆಸ್‌ಗೆ ಬಿಜೆಪಿ ಪ್ರಶ್ನೆ!

ಇದಕ್ಕೆ ನೆಹರು ಒಪ್ಪಿದ ಹಿನ್ನೆಲೆಯಲ್ಲಿ ರಾಜಾಜಿ ಅವರು ತಂಜಾವೂರು ಜಿಲ್ಲೆಯ ತಿರುವಾವಾದುತುರೈ ಅಧೀನಂ ಮಠವನ್ನು ಸಂಪರ್ಕಿಸಿದ್ದರು. ಮಠದ ಮುಖ್ಯಸ್ಥರು ಚೆನ್ನೈನಲ್ಲಿದ್ದ ವುಮ್ಮಿಡಿ ಬಂಗಾರು ಚೆಟ್ಟಿಅವರನ್ನು ಕರೆಸಿ 5 ಅಡಿ ಉದ್ದದ ಸೆಂಗೋಲ್‌ ತಯಾರಿಸಲು ಸೂಚಿಸಿದ್ದರು. ಅದರಂತೆ ಬಂಗಾರದಲ್ಲಿ ಸಿಂಗೋಲ್‌ ತಯಾರಿಸಲಾಗಿತ್ತು.