ನವದೆಹಲಿ(ಆ.16): ಮಹಿಳೆಯರ ಕನಿಷ್ಠ ವಿವಾಹ ವಯಸ್ಸಿನಲ್ಲಿ ಬದಲಾವಣೆಯಾಗುವ ಲಕ್ಷಣಗಳು ಕಂಡುಬಂದಿವೆ.

ಮದುವೆಯಾಗಲು ಮಹಿಳೆಯರಿಗೆ ಕನಿಷ್ಠ ಎಷ್ಟುವಯಸ್ಸು ಆಗಿರಬೇಕು ಎಂಬ ಬಗ್ಗೆ ಸರ್ಕಾರವು ಈಗ ಚರ್ಚಿಸುತ್ತಿದೆ. ಈ ಸಂಬಂಧ ಸಮಿತಿಯೊಂದನ್ನು ರಚಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರೇಪ್ ಮಾಡಿ ಸೆಕ್ಸ್ ಸಿಡಿ ಲೈಬ್ರರಿ ಸಿದ್ಧಮಾಡಿದ್ದ 'ದೇವಮಾನವ'!

74ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಮಾತನಾಡಿದ ಅವರು, ‘ನಮ್ಮ ಪುತ್ರಿಯರ ಮದುವೆಯ ಕನಿಷ್ಠ ವಯಸ್ಸು ನಿರ್ಧರಿಸುವ ಬಗ್ಗೆ ಚರ್ಚಿಸಲು ನಾವು ಸಮಿತಿ ರಚಿಸಿದ್ದೇವೆ. ಸಮಿತಿ ನೀಡುವ ವರದಿ ಆಧರಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದೇವೆ’ ಎಂದರು.

ನಗುತ್ತಿರುವ ಮಾತ್ರಕ್ಕೆ ಖಿನ್ನತೆ ಇಲ್ಲ ಎಂದಲ್ಲ...

ಬದಲಾವಣೆ ಚಿಂತನೆಗೆ ಕಾರಣ ಏನು?:

ಪ್ರಸಕ್ತ ಮಹಿಳೆಯರಿಗೆ ಮದುವೆಯ ಕನಿಷ್ಠ ವಯಸ್ಸು ಮಿತಿ 18 ಇದ್ದರೆ ಪುರುಷರಿಗೆ 21 ಇದೆ. ಆದರೆ 18 ವಯಸ್ಸಿಗೇ ಮಹಿಳೆಯರು ತಾಯ್ತನಕ್ಕೆ ಶಕ್ತರಾಗಿರುತ್ತಾರಾ ಎಂಬುದು ಪ್ರಶ್ನೆಯಾಗಿದೆ. ಅಲ್ಲದೆ, 18ಕ್ಕೆ ಮದುವೆಯಾದ ಕೂಡಲೇ ಮಕ್ಕಳನ್ನುಹೆತ್ತರೆ ಆ ಮಗುವಿನ ಆರೋಗ್ಯ ಚೆನ್ನಾಗಿರುತ್ತಾ ಎಂಬುದೂ ಇನ್ನೊಂದು ಪ್ರಶ್ನೆ. ಈ ಕಾರಣಕ್ಕೇ ಸಮತಾ ಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿ ನೇತೃತ್ವದ ಸಮಿತಿಯನ್ನು ಜೂನ್‌ನಲ್ಲಿ ಸರ್ಕಾರ ರಚಿಸಿತ್ತು. ಜುಲೈ 31ರೊಳಗೆ ವರದಿ ನೀಡುವಂತೆ ಸಮಿತಿಗೆ ಸೂಚಿಸಿತ್ತಾದರೂ, ವರದಿ ಇನ್ನೂ ಸಲ್ಲಿಕೆ ಆಗಿಲ್ಲ.