ಜನಪ್ರಿಯ ಜಾಗತಿಕ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಮೊದಲ ಸ್ಥಾನವನ್ನು ಗಳಿಸಿಕೊಂಡಿದ್ದು, ಈ ಬಾರಿ ಶೇ.76ರಷ್ಟು ಅನುಮೋದನೆಯ ರೇಟಿಂಗ್ ಪಡೆದುಕೊಂಡಿದ್ದಾರೆ ಎಂದು ಮಾರ್ನಿಂಗ್ ಕನ್ಸಲ್ಟ್‌ನ ಸಮೀಕ್ಷೆ ತಿಳಿಸಿದೆ.
ನವದೆಹಲಿ: ಜನಪ್ರಿಯ ಜಾಗತಿಕ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಮೊದಲ ಸ್ಥಾನವನ್ನು ಗಳಿಸಿಕೊಂಡಿದ್ದು, ಈ ಬಾರಿ ಶೇ.76ರಷ್ಟು ಅನುಮೋದನೆಯ ರೇಟಿಂಗ್ ಪಡೆದುಕೊಂಡಿದ್ದಾರೆ ಎಂದು ಮಾರ್ನಿಂಗ್ ಕನ್ಸಲ್ಟ್‌ನ ಸಮೀಕ್ಷೆ ತಿಳಿಸಿದೆ. ಅಮೆರಿಕ ಮೂಲದ ಈ ಸಂಸ್ಥೆ ಪ್ರತಿ ತಿಂಗಳು ಸಮೀಕ್ಷೆ ನಡೆಸುತ್ತಿದ್ದು, ಜೂನ್ ತಿಂಗಳಲ್ಲೂ ಪ್ರಧಾನಿ ಮೋದಿ ಜನಪ್ರಿಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಶೇ.59ರಷ್ಟು ರೇಟಿಂಗ್ ಪಡೆದುಕೊಂಡಿರುವ ಮೆಕ್ಸಿಕೋ ಅಧ್ಯಕ್ಷ ಆ್ಯಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಓಬ್ರಡಾರ್ ಅವರು 2ನೇ ಹಾಗೂ ಶೇ.53ರಷ್ಟು ರೇಟಿಂಗ್ ಹೊಂದಿರುವ ಆಸ್ಪ್ರೇಲಿಯಾದ ಪ್ರಧಾನಿ ಅಂಥೋನಿ ಆಲ್ಬನೀಸ್ 3ನೇ ಸ್ಥಾನದಲ್ಲಿದ್ದಾರೆ. ಶೇ.40ರಷ್ಟು ರೇಟಿಂಗ್ ಪಡೆದುಕೊಂಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ 6ನೇ ಹಾಗೂ ಶೇ.32ರಷ್ಟುರೇಟಿಂಗ್ ಪಡೆದುಕೊಂಡಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್ 9ನೇ ಸ್ಥಾನದಲ್ಲಿದ್ದಾರೆ.
GE-HAL Landmark Deal: ಭಾರತದ ವಾಯುಸೇನೆಯ ಫೈಟರ್ ಜೆಟ್‌ಗೆ ಅಮೆರಿಕದ ಇಂಜಿನ್!
ಅಮೆರಿಕದ ಮೈಕ್ರಾನ್‌ನಿಂದ ಗುಜರಾತ್‌ನಲ್ಲಿ ಚಿಪ್ ಘಟಕ
ನವದೆಹಲಿ: ಭಾರತದಲ್ಲಿ ಸೆಮಿಕಂಡಕ್ಟರ್ ಘಟಕ ಆರಂಭಿಸುವಂತೆ ಪ್ರಧಾನಿ ನರೇಂದ್ರ ಮೋದಿ ವಾಷಿಂಗ್ಟನ್‌ನಲ್ಲಿ ಆಹ್ವಾನ ನೀಡಿದ ಬೆನ್ನಲ್ಲೇ, ಗುಜರಾತ್‌ನಲ್ಲಿ ಸೆಮಿಕಂಡಕ್ಟರ್ (ಚಿಪ್) ಜೋಡಣಾ ಮತ್ತು ಪರೀಕ್ಷಾ ಘಟಕ ಆರಂಭಿಸುವುದಾಗಿ ಅಮೆರಿಕ ಮೂಲದ ಮೈಕ್ರಾನ್ ಟೆಕ್ನಾಲಜಿ ಘೋಷಿಸಿದೆ. ಭಾರತದಲ್ಲಿ ನಾವು ಎರಡು ಹಂತದಲ್ಲಿ ಬಂಡವಾಳ ಹೂಡಿಕೆ ಮಾಡಲಿದ್ದೇವೆ. ಮೊದಲ ಹಂತದ ಯೋಜನೆ 2023ರಲ್ಲಿ ಆರಂಭವಾಗಿ, 2024ರ ವೇಳೆಗೆ ಕಾರ್ಯಾರಂಭ ಮಾಡಲಿದೆ. ಇದಕ್ಕಾಗಿ 5 ಲಕ್ಷ ಚದರಡಿ ಜಾಗ ಬಳಕೆಯಾಗಲಿದೆ. ಈ ಘಟಕಗಳೂ 5000 ನೇರ ಉದ್ಯೋಗ ಮತ್ತು 15000 ಸಮುದಾಯ ಉದ್ಯೋಗವನ್ನು ಸೃಷ್ಟಿಸಲಿದೆ. ನಮ್ಮ ಹೊಸ ಘಟಕವು ಮೊಬೈಲ್, ಟೀವಿ, ಕಂಪ್ಯೂಟರ್, ವಾಹನಗಳಿಗೆ ತೀರಾ ಅಗತ್ಯವಾದ ಸೆಮಿಕಂಡಕ್ಟರ್ ಚಿಪ್ ಜೋಡಣೆ ಮತ್ತು ಪರೀಕ್ಷೆಯನ್ನು ಒಳಗೊಂಡಿರಲಿದೆ. ಇದು ದೇಶೀಯ ಮತ್ತು ಅಂತಾರಾಷ್ಟ್ರೀಯ ಬೇಡಿಕೆಯನ್ನು ಪೂರೈಸಲು ನೆರವಾಗಲಿದೆ ಎಂದು ಕಂಪನಿ ಪ್ರಕಟಣೆ ನೀಡಿದೆ.
ಭಾರತ-ಅಮೆರಿಕ ನಡುವೆ ಮಹಾ ಒಪ್ಪಂದ: ಬಾಹ್ಯಾಕಾಶ, ರಕ್ಷಣೆ ಸೇರಿ ಹಲವು ಕ್ಷೇತ್ರಗಳಲ್ಲಿ ಸಹಭಾಗಿತ್ವ
ಮೈಕ್ರಾನ್ ಕಂಪನಿಯು ಸರ್ಕಾರದ ಎಟಿಎಂಪಿ (ಮಾಡಿಫೈಡ್ ಅಸೆಂಬ್ಲಿ, ಟೆಸ್ಟಿಂಗ್, ಮಾರ್ಕಿಂಗ್ ಮತ್ತು ಪ್ಯಾಕೇಜಿಂಗ್) ಯೋಜನೆಯಡಿ ಜಾರಿಯಾಗಲಿದೆ. ಇದರನ್ವಯ ಒಟ್ಟು ಯೋಜನಾ ವೆಚ್ಚದಲ್ಲಿ ಶೇ.50ರಷ್ಟನ್ನು ಕೇಂದ್ರ ಸರ್ಕಾರ ನೀಡಲಿದೆ ಮತ್ತು ಒಟ್ಟು ಯೋಜನೆಯಲ್ಲಿ ಶೇ.20ರಷ್ಟು ಹಣವನ್ನು ಗುಜರಾತ್ ಸರ್ಕಾರ ಪ್ರೋತ್ಸಾಹಧನದ ರೂಪದಲ್ಲಿ ನೀಡಲಿದೆ.
