Asianet Suvarna News Asianet Suvarna News

ವಿದೇಶಗಳಲ್ಲೂ ಈಗ ಮೋದಿ ಗ್ಯಾರಂಟಿಯದ್ದೇ ಚರ್ಚೆ..!

ಕೇವಲ ಭಾರತದಲ್ಲಷ್ಟೇ ಅಲ್ಲದೇ ಇದೀಗ ವಿದೇಶಗಳಲ್ಲೂ ಸಹ ‘ಮೋದಿ ಗ್ಯಾರಂಟಿ’ಯದ್ದೇ ಚರ್ಚೆ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.

Modi guarantee is now being discussed abroad too Prime Minister narendra modi akb
Author
First Published Jan 9, 2024, 10:16 AM IST

ನವದೆಹಲಿ: ಕೇವಲ ಭಾರತದಲ್ಲಷ್ಟೇ ಅಲ್ಲದೇ ಇದೀಗ ವಿದೇಶಗಳಲ್ಲೂ ಸಹ ‘ಮೋದಿ ಗ್ಯಾರಂಟಿ’ಯದ್ದೇ ಚರ್ಚೆ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ಅಲ್ಲದೇ ಮೋದಿ ಗ್ಯಾರಂಟಿಯಿಂದ ಬಡವರು, ರೈತರು, ಮಹಿಳೆಯರು ಮತ್ತು ಯುವಕರು ಸದೃಢರಾಗಿದ್ದಾರೆ ಎಂದು ನುಡಿದಿದ್ದಾರೆ.

ವಿಕಸಿತ ಭಾರತ ಸಂಕಲ್ಪ ಯಾತ್ರೆ ಫಲಾನುಭವಿಗಳನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು, ‘ಮೋದಿಯ ಗ್ಯಾರಂಟಿ ವಾಹನ ಈಗ ದೇಶದ ಮೂಲೆ ಮೂಲೆಯನ್ನು ತಲುಪಿದೆ. ತನ್ಮೂಲಕ ಅಧಿಕಾರಿಗಳು ಮತ್ತು ರಾಜಕಾರಣಿಗಳು ಹಳ್ಳಿಗಳಲ್ಲಿರುವ ಜನರ ಮನೆ ಬಾಗಿಲಿಗೆ ತಲುಪಿದ್ದಾರೆ. . ಮಿಜೋರಂನ ಹಳ್ಳಿಯಿಂದ ಹಿಡಿದು ಮುಂಬೈವರೆಗೂ ಇಂದು ಮೋದಿ ಗ್ಯಾರಂಟಿಯದ್ದೇ ಮಾತು. ಕೇವಲ ದೇಶದಲ್ಲಷ್ಟೇ ಅಲ್ಲದೇ ವಿದೇಶಗಳಲ್ಲೂ ಸಹ ಮೋದಿ ಗ್ಯಾರಂಟಿಯದ್ದೇ ಚರ್ಚೆ ನಡೆಯುತ್ತಿದೆ’ ಎಂದರು.

ಪ್ರಧಾನಿ ಮೋದಿ ಗ್ಯಾರಂಟಿಯಿಂದ ಜನರಿಗೆ ಅನುಕೂಲ: ಕೇಂದ್ರ ಸಚಿವ ಕ್ರಿಶನ್ ಪಾಲ್

ಕೇಂದ್ರ ಸರ್ಕಾರದ ಅಭಿವೃದ್ಧಿಯ ರಥ, ಕುಗ್ರಾಮಗಳನ್ನೂ ಸಹ ತಲುಪಿದೆ. ಇದು ದೊರೆಯಬೇಕಾದವರಿಗೆ ಸರ್ಕಾರದ ಸೌಲಭ್ಯಗಳು ದೊರೆಯುವಂತೆ ಮಾಡಿದೆ. ಸಂಕಲ್ಪ ಯಾತ್ರೆ ಆರಂಭವಾದಾಗಿನಿಂದ ಇಲ್ಲಿಯವರೆಗೆ 12 ಲಕ್ಷ ಮಂದಿ ಹೊಸದಾಗಿ ಉಜ್ವಲಾ ಯೋಜನೆ ಪಡೆದುಕೊಂಡಿದ್ದಾರೆ. ಇದು ದೇಶದ ನಾಲ್ಕು ಜಾತಿಗಳಾದ ಬಡವರು, ರೈತರು, ಮಹಿಳೆಯರು ಮತ್ತು ಯುವಕರನ್ನು ಸಶಕ್ತರನ್ನಾಗಿಸಿದೆ ಎಂದು ಅವರು ಹೇಳಿದ್ದಾರೆ.

ಲೂಟಿ ಮಾಡಿದ ಪ್ರತಿ ಪೈಸೆಯೂ ವಾಪಸ್: ಇದು ಮೋದಿ ಗ್ಯಾರಂಟಿ; ಕಾಂಗ್ರೆಸ್‌ ಸಂಸದನ ಆಸ್ತಿ ಮೇಲಿನ ದಾಳಿಗೆ ಪ್ರಧಾನಿ ಪ್ರತಿಕ್ರಿಯೆ

Follow Us:
Download App:
  • android
  • ios