ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದ "ವಿಕಸಿತ ಭಾರತ್" (ಅಭಿವೃದ್ಧಿ ಹೊಂದಿದ ಭಾರತ) ಕಾರ್ಯಸೂಚಿಯನ್ನು ರೂಪಿಸಲು ಸಲಹೆಗಳನ್ನು ಕೇಳುತ್ತಿದ್ದು, ಈ ಕುರಿತಾದ ವಾಟ್ಸಾಪ್‌ ಸಂದೇಶಗಳು ವೈಯಕ್ತಿಕವಾಗಿ ಬರುತ್ತಿವೆ.

ನವದೆಹಲಿ (ಮಾ.17): ಪ್ರಧಾನಿ ನರೇಂದ್ರ ಮೋದಿಯವರ ಪತ್ರದೊಂದಿಗೆ ದೇಶದ ಜನರಿಂದ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಕೋರಿ ‘ವಿಕಸಿತ ಭಾರತ್ ಸಂಪರ್ಕ್’ ವಾಟ್ಸಾಪ್ ಸಂದೇಶವು ವಿವಾದವನ್ನು ಹುಟ್ಟುಹಾಕಿದೆ, ವಿರೋಧ ಪಕ್ಷದ ನಾಯಕರು ರಾಜಕೀಯ ಪ್ರಚಾರಕ್ಕಾಗಿ ಸರ್ಕಾರಿ ಡೇಟಾಬೇಸ್ ಮತ್ತು ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಕುರಿತಾಗಿ ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ ಮಾಡಿರುವ ಕೇರಳ ಕಾಂಗ್ರೆಸ್‌ನ ಘಟಕ, ವಾಟ್ಸಾಪ್‌ ಸಂದೇಶವನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸುತ್ತಿರುವುದಕ್ಕೆ ವಾಟ್ಸಾಪ್‌ನ ಮಾತೃಸಂಸ್ಥೆ ಮೆಟಾವನ್ನು ಟ್ಯಾಗ್‌ ಮಾಡಿ ಪ್ರಶ್ನೆ ಮಾಡಿದೆ. ವಿಕಸಿತ ಭಾರತ ಸಂಪರ್ಕ ಎನ್ನು ವೆರಿಫೈಡ್‌ ಬ್ಯುಸಿನೆಟ್‌ ಅಕೌಂಟ್‌ನಿಂದ ಸ್ವಯಂಚಾಲಿನ ಮೆಸೇಜ್‌ಗಳು ಬಂದಿರುವ ಬಗ್ಗೆ ಅವರು ತಗಾದೆ ಎತ್ತಿದ್ದಾರೆ. ಈ ಸಂದೇಶದಲ್ಲಿ ನಾಗರೀಕರ ಪ್ರತಿಕ್ರಿಯೆಯನ್ನು ಪಡೆಯುವ ಬಗ್ಗೆ ತಿಳಿಸುತ್ತದೆ. ಅದರೊಂದಿಗೆ ಲಗತ್ತಿಸಲಾದ ಪಿಡಿಎಫ್‌ ರಾಜಕೀಯ ಪ್ರಚಾರವಲ್ಲದೆ ಬೇರೇನೂ ಅಲ್ಲ ಎಂದು ಕೇರಳ ಕಾಂಗ್ರೆಸ್‌ ಪೋಸ್ಟ್‌ ಮಾಡಿದೆ.

"ಪ್ರತಿಕ್ರಿಯೆಯ ಸೋಗಿನಲ್ಲಿ, ಮುಂಬರುವ ಸಾರ್ವತ್ರಿಕ ಚುನಾವಣೆಗಳ ಪ್ರಚಾರದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ಬಗ್ಗೆ ಇದರಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಸರ್ಕಾರದ ಡೇಟಾಬೇಸ್ ಅನ್ನು ರಾಜಕೀಯ ಪ್ರಚಾರಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಪತ್ರವು ಹೇಳಿದೆ ಹೊರತು ಬೇರೇನೂ ಅಲ್ಲ' ಎಂದು ಆರೋಪಿಸಿದೆ. ಇದು ವಾಟ್ಸಾಪ್‌ಅನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುವ ಉದ್ದೇಶ ಮಾತ್ರ ಕಾಣುತ್ತಿದೆ ಎಂದು ಹೇಳಿದೆ.

ಕೇರಳ ಕಾಂಗ್ರೆಸ್‌ ಅದರೊಂದಿಗೆ ವಾಟ್ಸ್‌ಪ್‌ನ ನಿಯಮಗಳ ಸ್ಕ್ರೀನ್‌ ಶಾಟ್‌ಅನ್ನೂ ಪ್ರಕಟ ಮಾಡಿದೆ. ಇದರಲ್ಲಿ ವಾಟ್ಸ್‌ಆಪ್‌ನ ಬ್ಯುಸಿನೆಸ್‌ ಅಕೌಂಟ್‌ಗಳನ್ನು ಯಾವುದೇ ಕಾರಣಕ್ಕಾಗಿಯೂ ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುವಂತಿಲ್ಲ. ಕಂಪನಿಯು ರಾಜಕೀಯ ಪಕ್ಷಗಳು, ರಾಜಕಾರಣಿಗಳು, ರಾಜಕೀಯ ಅಭ್ಯರ್ಥಿಗಳು ಮತ್ತು ರಾಜಕೀಯ ಪ್ರಚಾರಗಳಂಥ ಸಂದೇಶಗಳನ್ನು ವಾಟ್ಸ್‌ಆಪ್‌ನ ಬ್ಯುಸಿನೆಸ್‌ ಅಕೌಂಟ್‌ಗಳಿಂದ ಕಳಿಸಬಾರದು ಇದಕ್ಕೆ ನಿಷೇಧವಿದೆ ಎನ್ನುವ ಅಂಶ ಇದರಲ್ಲಿದೆ.

ಇದು ನಿಮ್ಮ ನಿಯಮವಾಗಿದ್ದರೆ, ರಾಜಕೀಯ ನಾಯಕರೊಬ್ಬರು ನಿಮ್ಮ ವೇದಿಕೆಯನ್ನು ಪ್ರಚಾರಕ್ಕೆ ಬಳಸಿಕೊಳ್ಳಲು ಹೇಗೆ ಅನುವು ಮಾಡಿದ್ದೀರಿ? ಅಥವಾ ನೀವು ಬಿಜೆಪಿ ಪಕ್ಷಕ್ಕೆ ಬೇರೆಯದೇ ಆದ ನಿಯಮವನ್ನು ಹೊಂದಿದ್ದೀರಾ? ಎಂದು ಪ್ರಶ್ನೆ ಮಾಡಿದೆ.

ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಕಾಶ್ಮೀರದ ನಜೀಮ್, ಯುವಕನ ಸಾಧನೆಗೆ ಪ್ರಧಾನಿ ಮೆಚ್ಚುಗೆ!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಕೇಂದ್ರ ಸರ್ಕಾರದ "ವಿಕಸಿತ ಭಾರತ್" (ಅಭಿವೃದ್ಧಿ ಹೊಂದಿದ ಭಾರತ) ಕಾರ್ಯಸೂಚಿಯನ್ನು ರೂಪಿಸಲು ಜನರಿಂದ ಸಲಹೆಗಳನ್ನು ಕೇಳಿದ್ದಾರೆ. ಸಾರ್ವತ್ರಿಕ ಚುನಾವಣೆಯ ಘೋಷಣೆಯ ಮುನ್ನಾದಿನದಂದು ಹೊರಡಿಸಲಾದ ಪತ್ರದಲ್ಲಿ ಪ್ರಧಾನಮಂತ್ರಿ ಈ ಬಗ್ಗ ತಿಳಿಸಿದ್ದು, 'ವಿಕಸಿತ ಭಾರತವನ್ನು ನಿರ್ಮಿಸುವ ನನ್ನ ಸಂಕಲ್ಪವನ್ನು ಪೂರೈಸಲು ನಾವು ಕೆಲಸ ಮಾಡುವ ವೇಳೆ ನಿಮ್ಮ ಆಲೋಚನೆಗಳು, ಸಲಹೆಗಳು ಹಾಗೂ ಬೆಂಬಲ ಎದುರು ನೋಡುತ್ತಿದ್ದೇವೆ' ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.

ಸರ್ಕಾರದ ಅಭಿವೃದ್ಧಿ ಕಾರ್ಯಸೂಚಿ ಮತ್ತು 2047 ರ ವೇಳೆಗೆ ವಿಕಸಿತ ಭಾರತ್ ಭರವಸೆ ಬಿಜೆಪಿಯ ಪ್ರಮುಖ ಚುನಾವಣಾ ಯೋಜನೆಯಾಗಿದೆ. ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಅನರ್ಹರಾಗಿರುವ ಲೋಕಸಭೆಯ ಸಂಸದೆ ಮಹುವಾ ಮೊಯಿತ್ರಾ ಅವರು ಶನಿವಾರ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ ನಂತರ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ನಂತರ ತೆರಿಗೆದಾರರ ವೆಚ್ಚದಲ್ಲಿ ಪ್ರಧಾನಿ ಮೋದಿಯವರ ವಾಟ್ಸ್‌ಆಪ್‌ ಸಂದೇಶವನ್ನು ನೀಡುವ ಬಿಜೆಪಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

3ನೇ ಅವಧಿ ದೂರವಿಲ್ಲ, ರಾಜ್ಯಸಭೆಯಲ್ಲಿ ಮೋದಿ 3.O ಸರ್ಕಾರದ ವಿಷನ್ ಮುಂದಿಟ್ಟ ಪ್ರಧಾನಿ!