ಮೋದಿ ಸರ್ಕಾರ ಯಾವ ಕಾರಣಕ್ಕೆ ಪಬ್ ಜಿ ಬ್ಯಾನ್ ಮಾಡಿಲ್ಲ/ ಕಾರಣ ಕೊಟ್ಟ ಕಾಂಗ್ರೆಸ್ ನಾಯಕ/ ಯುವಕರು ಉದ್ಯೋಗದ ಬಗ್ಗೆ ಪ್ರಶ್ನೆ ಮಾಡಿದರೆ ಏನು ಮಾಡಬೇಕು/ ಮೋದಿ ತೀರ್ಮಾನದ ಅಣಕವಾಡಿದ ಅಭಿಷೇಕ್ ಮನು ಸಿಂಘ್ವಿ

ಬೆಂಗಳೂರು(ಜು. 27) ಚೀನಾದ ಮೇಲೆ ಭಾರತ ಸರ್ಕಾರ ಡಿಜಿಟಲ್ ಸಮರವನ್ನು ಮುಂದುವರಿಸಿಕೊಂಡು ಬಂದಿದೆ. 59 ರ ನಂತರ 47 ಆಪ್ ಗಳನ್ನು ನಿಷೇಧ ಮಾಡಿದೆ. ಆದರೆ ಪಬ್ ಜಿ ಬಗ್ಗೆ ಸ್ಪಷ್ಟನೆ ಇಲ್ಲ.

ಇದೇ ವಿಚಾರವನ್ನು ಅಸ್ತ್ರವಾಗಿರಿಸಿಕೊಂಡ ಕಾಂಗ್ರೆಸ್ ಮಾತನಾಡಿದೆ. ಪಬ್ ಜಿ ಯನ್ನು ನಿಷೇಧ ಮಾಡುವ ಮನಸ್ಸು ಕೇಂದ್ರ ಸರ್ಕಾರಕ್ಕೆ ಇತ್ತು ಆದರೆ ಪಬ್ ಜಿ ಬಂದ್ ಮಾಡಿದರೆ ಯುವಕರು ನಿರುದ್ಯೋಗದ ಕುರಿತು ಪ್ರಶ್ನೆ ಮಾಡುತ್ತಾರೆ. ಈ ಕಾರಣಕ್ಕಾಗಿ ಕೇಂದ್ರ ಹಿಂದೆ ಸರಿದಿದೆ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.

ಅಷ್ಟಕ್ಕೂ ಪಬ್ ಜಿ ಬ್ಯಾನ್ ಆಗದೆ ಉಳಿದುಕೊಂಡಿದ್ದು ಹೇಗೆ?

ಈ ಬಗ್ಗೆ ಟ್ವಿಟ್ ಮಾಡಿರುವ ಸಿಂಘ್ವಿ , ಮೋದಿಯವರಿಗೆ ಪಬ್ ಜಿ ಬ್ಯಾನ್ ಮಾಡುವ ವಿಚಾರ ಇತ್ತು, ಕಲ್ಪನಾ ಲೋಕದಲ್ಲಿ ಸಂಚಾರ ಮಾಡುತ್ತಿರುವ ಯುವಜನತೆ ಎಲ್ಲಿ ವಾಸ್ತವದ ಪ್ರಶ್ನೆ ಕೇಳುತ್ತಾರೆ ಎಂಬ ಕಾರಣಕ್ಕೆ ಹಿಂದೆ ಸರಿದಿದ್ದಾರೆ ಎಂದು ವ್ಯಂಗ್ಯವಾಡುತ್ತ ಕಾರಣ ನೀಡಿದ್ದಾರೆ.

ಕೇಂದ್ರ ಸರ್ಕಾರ ಪಬ್ ಜಿ ಸೇರಿದಂತೆ 250 ಚೀನಾ ಆಪ್ ಗಳ ಪಟ್ಟಿ ಸಿದ್ಧಮಾಡಿಕೊಂಡಿತ್ತು. ಆದರೆ ಎರಡನೇ ಸಾರಿಯೂ ಪಬ್ ಜಿ ಬಚಾವಾಗಿದೆ. ಪಬ್ ಜಿ ದಕ್ಷಿಣ ಕೋರಿಯಾ ಮೂಲದ್ದೇ ಆದರೂ ಚೀನಾದ ದೊಡ್ಡ ಮಟ್ಟದ ಹೂಡಿಕೆ ಇದೆ. ಪಬ್ ಜಿ ಗೇಮ್ ಯುವಕರ ಮನಸ್ಸನ್ನು ಕದಡುತ್ತಿದೆ ಎಂಬ ಆರೋಪಗಳು ಮೇಲಿಂದ ಮೇಲೆ ಕೇಳಿಬಂದಿದ್ದವು. 

Scroll to load tweet…