Asianet Suvarna News Asianet Suvarna News

ಬೀದಿ ಬದಿ ವ್ಯಾಪಾರಿಗಳಿಗೆ ಮೋದಿ ಸರ್ಕಾರದ ಮತ್ತೊಂದು ಗಿಫ್ಟ್, ಸ್ವನಿಧಿ ಹಣಕಾಸು ಯೋಜನೆ ವಿಸ್ತರಣೆ!

ಬೀದಿ ಬದಿ ವ್ಯಾಪಾರಿಗಳಿಗೆ ನೆರವಾಗಲು ಈಗಾಗಲೇ ಕೇಂದ್ರ ಸರ್ಕಾರ ಆತ್ಮನಿರ್ಭರ್ ನಿಧಿ ಮೂಲಕ ಹಣಕಾಸಿನ ನೆರವು ನೀಡುತ್ತಿದೆ. ಇದರ ಜೊತೆಗೆ ಮೂರನೇ ಸೌಲಭ್ಯವನ್ನು ಸೇರಿಸಲಾಗಿದೆ. ನೂತನ ಘೋಷಣೆ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

Modi Govt Street Vendor PM SVANidhi Scheme extended till December 2024 with 3rd loan of upto Rs 50000 ckm
Author
First Published Dec 9, 2022, 12:17 PM IST

ನವದೆಹಲಿ(ಡಿ.09): ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ಬೀದಿ ಬದಿ ವ್ಯಾಪಾರಿಗಳನ್ನು ಸಶಕ್ತೀಕರಣಕ್ಕೆ ಹಲವು ಯೋಜನೆಗಳನ್ನು ನೀಡಲಾಗಿದೆ. ಇದೀಗ ಈ ಯೋಜನೆಗಳ ಪೈಕಿ ಆತ್ಮನಿರ್ಭರ್ ನಿಧಿ(ಸ್ವನಿಧಿ) ಹಣಕಾಸು ನೆರವು ಯೋಜನೆಯನ್ನು ವಿಸ್ತರಿಸಲಾಗಿದೆ. ಇದರ ಜೊತೆಗೆ ಮೊದಲ ಮತ್ತು ಎರಡನೇ ಸಾಲ ಸೌಲಭ್ಯದ ಜೊತೆಗೆ ಮೂರನೇ ಸೌಲ ಸೌಲಭ್ಯ ಯೋಜನೆಯನ್ನು ಸೇರಿಸಲಾಗಿದೆ. ಮೊದಲ ಸಾಲ ಸೌಲಭ್ಯದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ 10,000 ರೂಪಾಯಿ ನೀಡಲಾಗುತ್ತಿತ್ತು. ಎರಡನೇ ಸೌಲಭ್ಯದಲ್ಲಿ 20,000 ರೂಪಾಯಿ ನೀಡಲಾಗುತ್ತಿದೆ. ಇದೀಗ ಮೂರನೇ ಸೌಲಭ್ಯದಲ್ಲಿ 50,000 ರೂಪಾಯಿ ಸಾಲ ನೀಡಲಾಗುತ್ತಿದೆ. ಈ ಯೋಜನೆಯನ್ನು ಡಿಸೆಂಬರ್ 2024ರ ವರೆಗೆ ವಿಸ್ತರಿಸಲಾಗಿದೆ. 

ಕೆಲ ನಿಬಂಧನೆಗಳೊಂದಿಗೆ ಬೀದಿ ಬದಿ ವ್ಯಾಪಾರಿಗಳಿಗಾಗಿ ನೀಡುವ ಸ್ವನಿಧಿ ಹಣಕಾಸು ನೆರವು ಯೋಜನೆಯನ್ನು ವಿಸ್ತರಿಸಲಾಗಿದೆ.   ಸಾಲ ನೀಡುವ ಅವಧಿಯನ್ನು ಡಿಸೆಂಬರ್ 2024 ರವರೆಗೆ ವಿಸ್ತರಿಸಲಾಗಿದೆ. ಇನ್ನು 0,000 ರೂಪಾಯಿ ಮೊದಲ ಮತ್ತು 20,000 ರೂಪಾಯಿ 2ನೇ ಸಾಲಗಳ ಜೊತೆಗೆ  50,000 ವರೆಗಿನ ಮೂರನೇ ಸಾಲ ಸೌಲಭ್ಯದ ಪರಿಚಯಿಸಲಾಗಿದೆ. ಇದರ ಜೊತೆಗೆ ದೇಶಾದ್ಯಂತ ʻಪಿಎಂ ಸ್ವನಿಧಿʼ ಯೋಜನೆಯ ಎಲ್ಲ ಫಲಾನುಭವಿಗಳಿಗೆ  ಸ್ವನಿಧಿ ಸೇ ಸಮೃದ್ಧಿ' ಯೋಜನೆಯನ್ನು ವಿಸ್ತರಿಸಲಾಗಿದೆ.

ಬೀದಿಬದಿ ವ್ಯಾಪಾರಸ್ಥರಿಗೆ ಹಣಕಾಸಿನ ನೆರವು: CM Basavaraj Bommai

ನವೆಂಬರ್ 30, 2022ರವರೆಗೆ, 31.73 ಲಕ್ಷ ಮಂದಿ ಬೀದಿ ಬದಿ ವ್ಯಾಪಾರಿಗಳು 10,000 ರೂಪಾಯಿ ಮೊತ್ತದ ಮೊದಲ ಸಾಲದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಈ ಪೈಕಿ 5.81 ಲಕ್ಷ ಜನರು 20,000 ರೂಪಾಯಿ ಸಾಲದ ಎರಡನೇ ಸಾಲದ ಪ್ರಯೋಜನ ಪಡೆದಿದ್ದಾರೆ. 2ನೇ ಸಾಲ ಪಡೆದವರಲ್ಲಿ 6,926 ಬೀದಿ ಬದಿ ವ್ಯಾಪಾರಿಗಳು 50,000 ರೂಪಾಯಿ ಮೂರನೇ ಸಾಲದ ಪ್ರಯೋಜನ ಪಡೆದಿದ್ದಾರೆ. 

ಮಾರಾಟ ವಲಯ ರಚನೆಗೆ ಸಂಬಂಧಿಸಿದ ವಿಷಯವು ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯದ ರಕ್ಷಣೆ ಮತ್ತು ಬೀದಿ ಮಾರಾಟದ ನಿಯಂತ್ರಣ) ಕಾಯ್ದೆ-2014ʼರ ವ್ಯಾಪ್ತಿಗೆ ಬರುತ್ತದೆ, ಇದನ್ನು ಆಯಾ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.  ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವರದಿ ಮಾಡಿರುವಂತೆ, ಇಲ್ಲಿಯವರೆಗೆ ಒಟ್ಟು 13,403 ಮಾರಾಟ ವಲಯಗಳನ್ನು ಗುರುತಿಸಲಾಗಿದೆ. 

2024ರ ಡಿಸೆಂಬರ್ ವೇಳೆಗೆ 42 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ʻಪಿಎಂ ಸ್ವನಿಧಿʼ ಯೋಜನೆಯಡಿ ಪ್ರಯೋಜನಗಳನ್ನು ಒದಗಿಸಲಾಗುವುದು. 
ವಸತಿ ಮತ್ತು ನಗರ ವ್ಯವಹಾರಗಳ ಸಹಾಯಕ ಸಚಿವರಾದ ಶ್ರೀ ಕೌಶಲ್ ಕಿಶೋರ್ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದರು. 

Bengaluru News: ಬೀದಿ ಬದಿ ವ್ಯಾಪಾರಿಗಳಿಂದ ಹೋರಾಟದ ಎಚ್ಚರಿಕೆ

ಬೀದಿಬದಿ ವ್ಯಾಪಾರಿಗಳ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಪಿಎಂ ಸ್ವನಿಧಿ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಡೇ- ನಲ್ಮ್‌ ಅಡಿ ಕೇಂದ್ರ ಸರ್ಕಾರದ ಪಿಎಂ ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಹ ನೋಂದಾಯಿತ ಬೀದಿಬದಿ ವ್ಯಾಪಾರಿಗಳು ಮೂಲ ದಾಖಲೆಗಳೊಂದಿಗೆ ಡಿ. 17 ರೊಳಗಾಗಿ ಹತ್ತಿದ ಅಧಿಕೃತ ಕೇಂದ್ರಗಳಿಗೆ ತೆರಳಿ ಅಥವಾ ಪುರಸಭೆ ಕಾರ್ಯಾಲಯದ ಸಂಪರ್ಕಿಸಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.
 

Follow Us:
Download App:
  • android
  • ios