Asianet Suvarna News Asianet Suvarna News

ಮೋದಿ ಸರ್ಕಾರದ ಕೊನೆಯ ಅಧಿವೇಶನ ಮುಕ್ತಾಯ: ಇದು ಹೆಚ್ಚು ಯುವ, ಹೆಚ್ಚು ಸುಶಿಕ್ಷಿತ ಲೋಕಸಭೆ!

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗಿರುವ ರಾಮಮಂದಿರ ಮೇಲಿನ ಚರ್ಚೆಯೊಂದಿಗೆ 17ನೇ ಲೋಕಸಭೆಯ ಕೊನೆಯ ಅಧಿವೇಶನ ಶನಿವಾರ ಅಂತ್ಯವಾಗಿದೆ. 17ನೇ ಲೋಕಸಭೆಯ ಕೊನೆಯ ಅಧಿವೇಶ ಜ.31ರಂದು ಆರಂಭವಾಗಿ 9 ದಿನಗಳ ಬಳಿಕ ಮುಕ್ತಾಯಗೊಂಡಿತು.

Modi Govt's Last Session Ends: this is the more Younger, More Educated Lok Sabha akb
Author
First Published Feb 11, 2024, 7:32 AM IST

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗಿರುವ ರಾಮಮಂದಿರ ಮೇಲಿನ ಚರ್ಚೆಯೊಂದಿಗೆ 17ನೇ ಲೋಕಸಭೆಯ ಕೊನೆಯ ಅಧಿವೇಶನ ಶನಿವಾರ ಅಂತ್ಯವಾಗಿದೆ. 17ನೇ ಲೋಕಸಭೆಯ ಕೊನೆಯ ಅಧಿವೇಶ ಜ.31ರಂದು ಆರಂಭವಾಗಿ 9 ದಿನಗಳ ಬಳಿಕ ಮುಕ್ತಾಯಗೊಂಡಿತು.

370ನೇ ವಿಧಿ ರದ್ದತಿ, ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ, ಹೊಸ ಸಂಸತ್‌ ಭವನ ಉದ್ಘಾನೆ ಈ ಲೋಕಸಭೆಯ ಅವಧಿಯಲ್ಲಿ ಘಟಿಸಿದ ಪ್ರಮುಖ ಅಂಶಗಳಾಗಿವೆ. ಇದಲ್ಲದೇ 100ಕ್ಕೂ ಹೆಚ್ಚು ಸಂಸದರ ಅಮಾನತು, ಸಂಸತ್ತಿನಲ್ಲಿ ಭದ್ರತಾ ಲೋಪ, ಪೌರತ್ವ ತಿದ್ದುಪಡಿ ಕಾಯ್ದೆ, 3 ರೈತ ಮಸೂದೆ, ಕೋವಿಡ್‌ ಸಾಂಕ್ರಾಮಿಕ ಸೇರಿದಂತೆ ಹಲವು ಘಟನೆಗಳಿಗೂ ಈ ಲೋಕಸಭೆ ಸಾಕ್ಷಿಯಾಯಿತು.

12 ಮಸೂದೆ ಪಾಸ್‌:

ಇದೇ ವೇಳೆ ಪ್ರಸ್ತುತ ಅಧಿವೇಶನದ ಬಗ್ಗೆ ಮಾಹಿತಿ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ, ಬಜೆಟ್‌ ಅಧಿವೇಶನದ 10 ದಿನದ ಅವಧಿಯಲ್ಲಿ ಒಟ್ಟು 12 ಮಸೂದೆಗಳನ್ನು ಉಭಯ ಸದನಗಳಲ್ಲಿ ಅಂಗೀಕರಿಸಲಾಗಿದೆ ಎಂದು ತಿಳಿಸಿದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ‘ಹದಿನೇಳನೇ ಲೋಕಸಭೆಯ ಐದು ವರ್ಷಗಳ ಅವಧಿಯಲ್ಲಿ 221 ಮಸೂದೆಗಳನ್ನು ಅಂಗೀಕರಿಸಲಾಗಿದೆ. ಪ್ರಮುಖವಾಗಿ 370ನೇ ವಿಧಿ ರದ್ದು, ಹೊಸ ಕ್ರಿಮಿನಲ್‌ ಮಸೂದೆಗಳು, ನಾರಿಶಕ್ತಿ, ತ್ರಿವಳಿ ತಲಾಖ್‌ ನಿಷೇಧದಂತಹ ಮಹತ್ವದ ಮಸೂದೆಗಳು ಸದನದಲ್ಲಿ ಅಂಗೀಕಾರವಾಗಿದೆ. ಜೊತೆಗೆ ಕಡೆಯ ಬಜೆಟ್‌ ಅಧಿವೇಶನದಲ್ಲಿ ಯುಪಿಎ ಸರ್ಕಾರದ ಆರ್ಥಿಕತೆಯ ಕುರಿತು ಶ್ವೇತಪತ್ರ ಹೊರತಂದಿದ್ದೇವೆ’ ಎಂದು ತಿಳಿಸಿದರು.

ಇದು ಹೆಚ್ಚು ಯುವ, ಹೆಚ್ಚು ಸುಶಿಕ್ಷಿತ ಲೋಕಸಭೆ!

ನವದೆಹಲಿ: ಪ್ರಸ್ತುತ ಅಸ್ತಿತ್ವದಲ್ಲಿರುವ 17ನೇ ಲೋಕಸಭೆ ಅತಿ ಹೆಚ್ಚು ಯುವ ಸಮೂಹ, ಉತ್ತಮ ವಿದ್ಯಾರ್ಹತೆ ಹೊಂದಿರುವ ಸಂಸದರನ್ನು ಹೊಂದಿರುವ ಲೋಕಸಭೆಯಾಗಿದೆ. ಅಲ್ಲದೇ ಈ ಬಾರಿ ಲಿಂಗಾನುಪಾತವೂ ಸಹ ಉತ್ತಮಗೊಂಡಿದೆ. 

2019ರಲ್ಲಿ ಲೋಕಸಭೆ ರಚನೆಯಾದಾಗ 303 ಸಂಸದರನ್ನು ಹೊಂದುವ ಮೂಲಕ ಬಿಜೆಪಿ ಅತಿದೊಡ್ಡ ಪಕ್ಷವಾಗಿತ್ತು. ವಿಧಾನಸಭೆ ಚುನಾವಣೆ ಕಾರಣಕ್ಕೆ ಒಂದಷ್ಟು ಸಂಸದರು ರಾಜೀನಾಮೆ ಸಲ್ಲಿಸಿದ ಕಾರಣ ಬಿಜೆಪಿಯ ಸ್ಥಾನ 290ಕ್ಕೆ ಕುಸಿದಿದೆ. 2019ರಲ್ಲಿ 397 ಮಂದಿ ಸಂಸದರು ಮರು ಆಯ್ಕೆಗೊಂಡಿದ್ದಾರೆ. 17ನೇ ಲೋಕಸಭೆಯಲ್ಲಿ 70 ವರ್ಷ ಮೀರಿದವರ ಸಂಖ್ಯೆ ಕಡಿಮೆ ಇದ್ದು, 40 ವರ್ಷಕ್ಕಿಂತ ಚಿಕ್ಕವರ ಸಂಖ್ಯೆ ಹೆಚ್ಚಿದೆ. ಸಂಸದರ ಸರಾಸರಿ ವಯೋಮಾನ 54 ವರ್ಷ.

ಕಿಯೋಂಜಾರ್ ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಡಿಯ ಚಂದ್ರಾಣಿ ಮುರ್ಮು (25) ಅತ್ಯಂತ ಕಿರಿಯ ಸಂಸದೆಯಾಗಿದ್ದಾರೆ. ಸಂಭಲ್‌ ಕ್ಷೇತ್ರದಿಂದ ಗೆದ್ದಿರುವ ಸಮಾಜವಾದಿ ಪಕ್ಷದ ಶಫೀಕರ್‌ ರಹಮಾನ್‌ ಬಾರ್ಕ್‌ (89) ಹಿರಿಯ ಸಂಸದ.  400 ಮಂದಿ ಸಂಸದರು ಕನಿಷ್ಠ ಪಕ್ಷ ಪದವಿ ಶಿಕ್ಷಣ ಪಡೆದಿದ್ದಾರೆ. 78 ಮಹಿಳಾ ಸಂಸದರು ಆಯ್ಕೆಯಾಗಿದ್ದು, ಇದು ಸಾರ್ವಕಾಲಿಕ ಗರಿಷ್ಠವಾಗಿದೆ.
 

Follow Us:
Download App:
  • android
  • ios