Asianet Suvarna News Asianet Suvarna News

ಒಬ್ಬ ಐಎಎಸ್‌ ಅಧಿಕಾರಿಗಾಗಿ ಮೋದಿ ಸರ್ಕಾರದ ಸುಗ್ರೀವಾಜ್ಞೆ, ಇಡಿ ನಿರ್ದೇಶಕ ಸಂಜಯ್‌ ಕುಮಾರ್‌ ಅವಧಿ ವಿಸ್ತರಣೆ!

ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೆ ಮೋದಿ ಸರ್ಕಾರದಲ್ಲಿ ಯಾವ ರೀತಿಯ ಮನ್ನಣೆ ಇರುತ್ತದೆ ಎನ್ನುವುದಕ್ಕೆ ಇದೇ ಉದಾಹರಣೆ. ಪ್ರಖ್ಯಾತ ರಾಜಕಾರಣಗಳ ವಿರುದ್ಧ ಯಾವ ಹಿತಾಸಕ್ತಿಯೂ ಇಲ್ಲದೆ ದಾಳಿ ಆದೇಶ ನೀಡಿದ್ದ ಜಾರಿ ನಿರ್ದೇಶನಾಲಯದ ನಿರ್ದೇಶಕ ಸಂಜಯ್‌ ಕುಮಾರ್‌ ಮಿಶ್ರಾ ಅವರ ಅವಧಿಯಲ್ಲಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಬಳಸಿ ವಿಸ್ತರಣೆ ಮಾಡಿದೆ.

Modi Government brought ordinance ED Director Sanjay Kumar Mishra Tenure Extended san
Author
First Published Nov 19, 2022, 9:11 PM IST

ನವದೆಹಲಿ (ನ.19):  ದೇಶದಲ್ಲಿ ಇಡಿ ದಾಳಿಗಳ ಬಗ್ಗೆ ಮಾತನಾಡುವಾಗಲೆಲ್ಲಾ ನಗದು ಮತ್ತು ಚಿನ್ನ ಮತ್ತು ಬೆಳ್ಳಿಯನ್ನು ಭಾರಿ ಪ್ರಮಾಣದಲ್ಲಿ ವಶಪಡಿಸಿಕೊಳ್ಳುವ ಸುದ್ದಿ ಕೇಳಿಯೇ ಕೇಳಿರುತ್ತೀರಿ. ಇಂಥ ಜಾರಿ ನಿರ್ದೇಶನಾಲಯ ಅಥವಾ ಇಡಿಯ ನಿರ್ದೇಶಕರಾಗಿದ್ದ ಎಸ್‌ಕೆ ಮಿಶ್ರಾ ಅವರ ಅಧಿಕಾರವಧಿಯಲ್ಲಿ ಕೇಂದ್ರ ಸರ್ಕಾರ ಮೂರನೇ ಬಾರಿಗೆ ವಿಸ್ತರಣೆ ಮಾಡಿದೆ. 60 ವರ್ಷದ ಸಂಜಯ್‌ ಕುಮಾರ್‌ ಮಿಶ್ರಾ ಅವರ ಅವಧಿಯಲ್ಲಿ ಮೋದಿ ಸರ್ಕಾರ ಇನ್ನೊಂದು ವರ್ಷ ಅಂದರೆ 2023ರ ನವೆಂಬರ್‌ವರೆಗೆ ವಿಸ್ತರಣೆ ಮಾಡಿದೆ. ಇಡಿ ನಿರ್ದೇಶಕರ ಅವಧಿ ವಿಸ್ತರಣೆ ನಿಯಮಗಳಿಗೆ ವಿರುದ್ಧ ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದರೂ, ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಅಧಿಕಾರವಧಿಯನ್ನು ಮತ್ತೆ ಒಂದು ವರ್ಷ ವಿಸ್ತರಣೆ ಮಾಡಿದೆ. 1984 ರ ಬ್ಯಾಚ್‌ನ ಆದಾಯ ತೆರಿಗೆ ಕೇಡರ್ ಅಧಿಕಾರಿ ಎಸ್‌ಕೆ ಮಿಶ್ರಾ ಅವರ ಕಾಲದ ಅತ್ಯಂತ ಕಿರಿಯ ಅಧಿಕಾರಿ ಅಗಿದ್ದರು. ಇವರನ್ನು 2018ರ ನವೆಂಬರ್‌ 19 ರಂದು ಇಡಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು.  ನಿಯಮಗಳ ಪ್ರಕಾರ, ಇಡಿ ನಿರ್ದೇಶಕರ ಅಧಿಕಾರಾವಧಿಯನ್ನು ಎರಡು ವರ್ಷಗಳಿಗೆ ಸೀಮಿತ ಮಾಡಲಾಗಿದೆ. ಇದರಿಂದಾಗಿ 2020ರ ನವೆಂಬರ್‌ 19 ರಂದು ಅವರ ಅವಧಿ ಮುಕ್ತಾಯಗೊಳ್ಳಬೇಕಿತ್ತು. ಆದರೆ, ಸರ್ಕಾರವು 2020ರ ನವೆಂಬರ್‌ 13 ರಂದು ಒಂದು ವರ್ಷದ ವಿಸ್ತರಣೆಯನ್ನು ಅವರಿಗೆ ನೀಡಿತ್ತು. ಇಡಿಯಲ್ಲಿ ಅವಧಿ ವಿಸ್ತರಣೆ ಪಡೆದ ಮೊಟ್ಟಮೊದಲ ನಿರ್ದೇಶಕ ಎನ್ನುವ ಹಿರಿಮೆಯೂ ಇವರದಾಗಿದೆ.

2021ರಲ್ಲಿ ಇವರ ಅವಧಿ ಮುಕ್ತಾಯಗೊಂಡಾಗ ಕೂಡ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯನ್ನು ಬಳಸಿ ಅಧಿಕಾರ ವಿಸ್ತರಣೆ ಮಾಡಿತ್ತು. ಸುಗ್ರೀವಾಜ್ಞೆಯ ಮೂಲಕ ಸಿಬಿಐ ಹಾಗೂ ಇಡಿ ನಿರ್ದೇಶಕರ ಅವಧಿಯಲ್ಲಿ ಎರಡು ವರ್ಷಗಳ ನಂತರವೂ ಮುಂದಿನ ಮೂರು ವರ್ಷಗಳವರೆಗೆ ವಿಸ್ತರಣೆ ಮಾಡಬಹುದಾಗಿತ್ತು. ಈ ವಿಸ್ತರಣೆ ನವೆಂಬರ್‌ 18ಕ್ಕೆ ಕೊನೆಯಾಗಿತ್ತು. ಈಗ ಕೇಂದ್ರ ಸರ್ಕಾರ ಮತ್ತೊಮ್ಮೆ ಅವರಿಗೆ ಸುಗ್ರೀವಾಜ್ಞೆ ಮಾರ್ಗದ ಮೂಲಕವೇ ವಿಸ್ತರಣೆ ನೀಡಿದೆ.

ಸಂಪುಟದ ನೇಮಕಾತಿ ಸಮಿತಿಯು ಸಂಜಯ್ ಕುಮಾರ್ ಮಿಶ್ರಾ ಅವರ ಇಡಿ ನಿರ್ದೇಶಕರಾಗಿ ಒಂದು ವರ್ಷದ ಅವಧಿಯನ್ನು ಅನುಮೋದಿಸಿದೆ ಅಂದರೆ 18 ನವೆಂಬರ್ 2023 ರವರೆಗೆ ವಿಸ್ತರಣೆಯನ್ನು ಅನುಮೋದಿಸಲಾಗಿದೆ. ಇತ್ತೀಚಿನ ವಿಸ್ತರಣೆಯನ್ನು ಒಳಗೊಂಡಂತೆ, ಮಿಶ್ರಾ ಈಗ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ. ಕೇಂದ್ರೀಯ ಸಂಸ್ಥೆಗಳ ಮುಖ್ಯಸ್ಥರ ಅಧಿಕಾರಾವಧಿಯನ್ನು 2 ರಿಂದ 5 ವರ್ಷಗಳಿಗೆ ಹೆಚ್ಚಿಸಲು ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ ಎಂದು ನವೆಂಬರ್‌ 17 ರಂದು ಪ್ರಕಟಿಸಿದ ಸುಗ್ರೀವಾಜ್ಞೆಯಲ್ಲಿ ಹೇಳಲಾಗಿದೆ.

ಎಸ್ ಕೆ ಮಿಶ್ರಾ ಅವರು ಭಾರತೀಯ ಕಂದಾಯ ಸೇವೆಯಲ್ಲಿ ಅಂದರೆ ಐಆರ್ ಎಸ್ ಗೆ 1984ರಲ್ಲಿ ಆಯ್ಕೆಯಾಗಿದ್ದರು. ಸುಮಾರು 34 ವರ್ಷಗಳ ಕಾಲ ಆದಾಯ ತೆರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ, ಅವರು ವಿದೇಶದಲ್ಲಿ ಹಣವನ್ನು ಬಚ್ಚಿಟ್ಟ ಭಾರತೀಯರ ಪ್ರಕರಣಗಳನ್ನು ವ್ಯವಹರಿಸುವ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ಅಂದರೆ CBDT ಯ ವಿದೇಶಿ ತೆರಿಗೆ ಇಲಾಖೆಯಲ್ಲಿಯೂ ಕೆಲಸ ಮಾಡಿದ್ದಾರೆ. ಈ ಪ್ರಕರಣಗಳ ಹೊರತಾಗಿ, ನೆಹರು-ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ನ್ಯಾಷನಲ್ ಹೆರಾಲ್ಡ್ ಪ್ರಕರಣ ಸೇರಿದಂತೆ ಯೆಸ್ ಬ್ಯಾಂಕ್‌ನ ರಾಣಾ ಕಪೂರ್, ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್ ಅವರ ಪತಿ ದೀಪಕ್ ಕೊಚ್ಚರ್ ಅವರ ಪ್ರಕರಣದ ತನಿಖೆಯನ್ನೂ ನೇತೃತ್ವವನ್ನೂ ವಹಿಸಿದ್ದರು.

National Herald PMLA case: 3 ತಾಸು ಇ.ಡಿ. ವಿಚಾರಣೆ ಎದುರಿಸಿದ ಡಿ.ಕೆ.ಶಿವಕುಮಾರ್‌

ಮಿಶ್ರಾ ವಿಸ್ತರಣೆಗೆ ಕಾಂಗ್ರೆಸ್-ತೃಣಮೂಲ ವಿರೋಧ: ಇಡಿ ಮತ್ತು ಸಿಬಿಐ ನಿರ್ದೇಶಕರ ಅವಧಿಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ ತಂದಿರುವ ತಿದ್ದುಪಡಿಗೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. 2020ರಲ್ಲಿ ಈ ಕುರಿತಾಗಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲಾಗಿತ್ತು. ಆದರೆ. ಕೋರ್ಟ್‌ ಮಧ್ಯಪ್ರವೇಶಿಸಲು ನಿರಾಕರಿಸಿತ್ತು. 2021 ರಲ್ಲಿ ಮಿಶ್ರಾ ಅವರಿಗೆ ಎರಡನೇ ಬಾರಿಗೆ ವಿಸ್ತರಣೆಯನ್ನು ನೀಡಿದ ನಂತರ, ಕಾಮನ್ ಕಾಸ್ ಹೆಸರಿನ ಎನ್‌ಜಿಒ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿತು. ವಿಚಾರಣೆಯ ಸಂದರ್ಭದಲ್ಲಿ, ಈ ಏಜೆನ್ಸಿಯ ಎಲ್ಲಾ ಪ್ರಮುಖ ಪ್ರಕರಣಗಳ ತನಿಖೆ ಪೂರ್ಣಗೊಳ್ಳುವವರೆಗೆ ಸರ್ಕಾರವು ಇಡಿ ಮುಖ್ಯಸ್ಥರ ಅಧಿಕಾರಾವಧಿಯನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಇದಾದ ನಂತರ ಸರ್ಕಾರ ಸುಗ್ರೀವಾಜ್ಞೆ ತರುವ ಮೂಲಕ ಮಿಶ್ರಾ ಅವರ ಅಧಿಕಾರಾವಧಿಯನ್ನು ವಿಸ್ತರಿಸಿತ್ತು.

ವಂಚನೆ ಪ್ರಕರಣ ಈವರೆಗೂ ಜಾಕ್ವೆಲಿನ್‌ ಬಂಧನ ಏಕಿಲ್ಲ?: ಕೋರ್ಟ್ ಪ್ರಶ್ನೆ

ಕಾಂಗ್ರೆಸ್ ನಾಯಕ ಮತ್ತು ಸಂಸದ ಕಾರ್ತಿ ಚಿದಂಬರಂ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸೇರಿದಂತೆ ಹಲವರು ಸುಪ್ರೀಂ ಕೋರ್ಟ್‌ನಲ್ಲಿ ಈ ಕುರಿತಾಗಿ ಅರ್ಜಿ ಸಲ್ಲಿಸಿದ್ದರು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಇಡಿ ದಾಳಿಗಳು 26 ಪಟ್ಟು ಹೆಚ್ಚಾಗಿದೆ, ಆದರೆ ಶಿಕ್ಷೆಯ ಪ್ರಮಾಣ ತುಂಬಾ ಕಡಿಮೆಯಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಕಳೆದ 8 ವರ್ಷಗಳಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ 3010 ಗೆರಿಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹಣಕಾಸು ಸಚಿವಾಲಯ ರಾಜ್ಯಸಭೆಯಲ್ಲಿಯೂ ಮಾಹಿತಿ ನೀಡಿತ್ತು. ಈ ಪೈಕಿ 23 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ.

Follow Us:
Download App:
  • android
  • ios