ಇಂದಿನಿಂದ ಪ್ರಧಾನಿ ಮೋದಿ 2 ದಿನ ಈಜಿಪ್ಟ್ ಪ್ರವಾಸ: 1000 ವರ್ಷ ಹಳೆಯ ಮಸೀದಿಗೆ ಭೇಟಿ
ಇಮಾಮ್ ಅಲ್ ಹಕೀಮಿ ಬಿ ಅಮರ್ ಅಲ್ಲಾ ಮಸೀದಿ ಸುಮಾರು 1 ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದ್ದು, ಈಜಿಪ್ಟ್ ರಾಜಧಾನಿ ಕೈರೋದ ಹೃದಯಭಾಗದಲ್ಲಿದೆ.
ನವದೆಹಲಿ (ಜೂನ್ 24, 2023): 4 ದಿನಗಳ ಅಮೆರಿಕ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ 2 ದಿನಗಳ ಈಜಿಪ್ಟ್ ಪ್ರವಾಸಕ್ಕಾಗಿ ಶುಕ್ರವಾರ ತೆರಳಲಿದ್ದಾರೆ. ಈ ಭೇಟಿಯ ವೇಳೆ ಅವರು 1000 ವರ್ಷ ಹಳೆಯ ಅಲ್ ಹಕೀಮಿ ಮಸೀದಿಗೆ ಭೇಟಿ ನೀಡಲಿದ್ದು, ಅಧ್ಯಕ್ಷ ಅಬ್ದೆಲ್ ಫತ್ತಾ ಅಲ್ ಸಿಸಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಕಾರ್ಯಕ್ರಮವಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ಇಮಾಮ್ ಅಲ್ ಹಕೀಮಿ ಬಿ ಅಮರ್ ಅಲ್ಲಾ ಮಸೀದಿ ಸುಮಾರು 1 ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದ್ದು, ಈಜಿಪ್ಟ್ ರಾಜಧಾನಿ ಕೈರೋದ ಹೃದಯಭಾಗದಲ್ಲಿದೆ. ಭಾರತದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿರುವ ದಾವೂದಿ ಬೊಹ್ರಾ ಮುಸ್ಲಿಂ ಸಮುದಾಯದ ಸಹಾಯದೊಂದಿಗೆ ಈ ಮಸೀದಿಯನ್ನು ಇತ್ತೀಚೆಗೆ ಮರು ನಿರ್ಮಾಣ ಮಾಡಲಾಗಿದೆ. ಬೊಹ್ರಾ ಸಮುದಾಯ ಮುಸ್ಲಿಂ ವ್ಯಾಪಾರಿ ಸಮುದಾಯವಾಗಿದ್ದು, ಭಾರತದಲ್ಲೂ ವಾಸವಿದ್ದಾರೆ. ಇವರೊಂದಿಗೆ ಪ್ರಧಾನಿ ಮೋದಿ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.
ಇದನ್ನು ಓದಿ: ಅಮೆರಿಕ ಸಂಸದರ ಹೊಗಳಿ ರಾಹುಲ್ ಕಾಲೆಳೆದ ಮೋದಿ: ವಿದೇಶಗಳಲ್ಲಿ ಭಾರತವನ್ನು ಟೀಕಿಸುವ ವರ್ತನೆಗೆ ಚಾಟಿ
ಬಳಿಕ ಹೆಲಿಪೊಲಿಸ್‌ನಲ್ಲಿರುವ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿರುವ ಮೋದಿ, 1ನೇ ವಿಶ್ವಯುದ್ಧದ ಸಮಯದಲ್ಲಿ ಮಡಿದ ಭಾರತೀಯ ಯೋಧರಿಗೆ ಗೌರವ ಸಲ್ಲಿಸಲಿದ್ದಾರೆ. ಇದಾದ ಬಳಿಕ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಅಲ್ ಫತ್ತಾ ಅಲ್ ಸಿಸಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಜೂನ್ 25ರಂದು ಪ್ರಧಾನಿ ಮೋದಿ ಭಾರತಕ್ಕೆ ಹಿಂದಿರುಗಲಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ಮೋದಿಗೆ ಇಂದ್ರದೇವನ ಆಶೀರ್ವಾದ: ಮಳೆಯ ಆರ್ಭಟದ ನಡುವೆಯೂ ರಾಷ್ಟ್ರಗೀತೆಗೆ ‘ನಮೋ’ ಗೌರವ