ಮೋದಿ ಹೊಸ ಟೀಂ ರೆಡಿ: ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಸಚಿವರಿವರು!
* ಮೋದಿ ಹೊಸ ತಂಡ ರೆಡಿ
* ಕೇಂದ್ರ ಸಚಿವ ಸಂಪುಟ ಸೇರಲು ಸಜ್ಜಾದ ಸಂಸದರು
* ಇತ್ತ ರಾಜೀನಾಮೆ ನೀಡಲಾರಮಭಿಸಿದ ಕೆಲ ಹಾಲಿ ಸಚಿವರು
ನವದೆಹಲಿ(ಜು.07): ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟದ ವಿಸ್ತರಣೆ/ ಪುನಾರಚನೆ ಕಾರ್ಯಕ್ರಮ ಬುಧವಾರ ಸಂಜೆ 6 ಗಂಟೆಗೆ ನಿಗದಿಯಾಗಿದೆ. ಹೀಗಿರುವಾಗ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಏಷ್ಯಾನೆಟ್ ನ್ಯೂಸ್‌ಗೆ ಲಭ್ಯವಾದ ಮಾಹಿತಿ ಅನ್ವಯ ಮೋದಿ ಸಚಿವ ಸಂಪುಟದಲ್ಲಿ ಈಗಿರುವ 7 ರಾಜ್ಯ ಸಚಿವರು ಕ್ಯಾಬಿನೆಟ್ ಸಚಿವರಾಗಿ ಬಡ್ತಿ ಪಡೆಯಲಿದ್ದು, 25 ಹೊಸ ಸದಸ್ಯರು ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ಹೀಗಿರುವಾಗ ಅನೇಕ ಹಾಲಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮೋದಿ ಕ್ಯಾಬಿನೆಟ್‌ಗೆ ಹೊಸ ಮುಖ: ಇಲ್ಲಿದೆ ಸಂಭಾವ್ಯರ ಲೇಟೆಸ್ಟ್ ಪಟ್ಟಿ!
ರಾಜೀನಾಮೆ ನೀಡಿದ ಸಚಿವರ ಪಟ್ಟಿ:
* ರಮೇಶ್ ಪೋಖ್ರಿಯಾಲ್
* ಡಾ. ಹರ್ಷವರ್ಧನ್
* ನಿಶಾಂಕ್
* ಸಂತೋಷ್ ಗಂಗ್ವಾರ್
* ಸದಾನಂದ ಗೌಡ
* ಸಂಜಯ್ ಧೋತ್ರೆ
* ಪ್ರತಾಪ್ ಚಂದ್ರ ಸಾರಂಗಿ
* ದೇಬೋಶ್ರೀ ಚೌಧರಿ
* ಅಶ್ವಿನಿ ಚೌಬೆ
* ರತನ್ ಲಾಲ್ ಕಟಾರಿಯಾ
* ರಾವ್ ಸಾಹೇಬ್ ಧನ್ವೆ ಪಾಟೀಲ್
ಕೋವಿಡ್ ನಿರ್ವಹಣೆಯಲ್ಲಿ ಭಾರತ ವಿಫಲವಾಗಿರುವುದು ಹೌದೆಂದು ಒಪ್ಪಿಕೊಂಡ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಅವರು ಹರ್ಷವರ್ಧನ್‌ರಿಂದ ರಾಜೀನಾಮೆ ಪಡೆದಿದ್ದಾರೆ.
ಇನ್ನು ಇತ್ತ ತಾವರ್‌ಚಂದ್ ಗೆಹ್ಲೋಟ್ ಈಗಾಗಲೇ ಕರ್ನಾಟಕ ರಾಜ್ಯಪಾಲರಾಗಿ ನೇಮಕಗೊಂಡಿರುವ ಹಿನ್ನೆಲೆ ರಾಜೀನಾಮೆ ನೀಡಿದ್ದಾರೆ. ಪೋಖ್ರಿಯಾಲ್ ಆರೋಗ್ಯ ಸಂಬಂಧಿತ ಕಾರಣಗಳಿಂದಾಗಿ ಸಚಿವ ಸ್ಥಾನ ಬಿಟ್ಟಿದ್ದಾರೆ.
ಮೋದಿ ಕ್ಯಾಬಿನೆಟ್‌ಗೆ ಅಚ್ಚರಿಯ ಹೆಸರು: ಶೋಭಾ ಕರಂದ್ಲಾಜೆಗೆ ಸಚಿವ ಸ್ಥಾನ?
ಅತ್ಯಂತ ಯುವ ಸಚಿವ ಸಂಪುಟ
ಸಂಭಾವ್ಯರ ಪಟ್ಟಿ ಹಾಗೂ ಉನ್ನತ ಮೂಲಗಳಿಂದ ಲಭಿಸಿದ ಮಾಹಿತಿ ಅನ್ವಯ ಪಿಎಂ ಮೋದಿ ನೇತೃತ್ವದ ಈ ಕೇಂದ್ರ ಸಚಿವ ಸಂಪುಟ ಅತ್ಯಂತ ಯುವ ಕ್ಯಾಬಿನೆಟ್ ಆಗಲಿದೆ. 14 ಸಚಿವರು 50 ವರ್ಷಕ್ಕಿಂತ ಕಿರಿಯರಾಗಿದ್ದಾರೆ. ನೂತನ ಸಚಿವರು ಹೆಚ್ಚು ವಿದ್ಯಾವಂತರಾಗಿದ್ದಾರೆ. ಕೆಲವರು ಡಾಕ್ಟರೇಟ್ ಪದವಿ ಗಳಿಸಿದ್ದರೆ, ಇನ್ನು ಕೆಲವರು ಎಂಬಿಎ, ಸ್ನಾತಕೋತ್ತರ ಹಾಗೂ ವೃತ್ತಿಪರರಾಗಿದ್ದಾರೆ. ಸಂಪುಟದಲ್ಲಿ 11 ಮಹಿಳೆಯರಿಗೂ ಸ್ಥಾನ ನೀಡಲಾಗುತ್ತಿದೆ. ಒಟ್ಟಾರೆಯಾಗಿ ಕ್ಯಾಬಿನೆಟ್‌ನಲ್ಲಿ ಆಡಳಿತಾತ್ಮಕ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತಿದೆ.
ಹೀಗಿರಬಹುದು ಮೋದಿ ಹೊಸ ತಂಡ
* ಒಬಿಸಿ ಸಮುದಾಯದ 27 ಮಂತ್ರಿಗಳು, ಅದರಲ್ಲೂ ಐವರಿಗೆ ಕ್ಯಾಬಿನೆಟ್ ಸ್ಥಾನಮಾನ
* ಅಲ್ಪಸಂಖ್ಯಾತ ಸಮುದಾಯದ 5 ಮಂತ್ರಿಗಳು
* ಮೋದಿಯ ತಂಡದಲ್ಲಿ 11 ಮಹಿಳೆಯರು
* ಎಸ್‌ಸಿ ಸಮುದಾಯದ 23 ಮಂತ್ರಿಗಳು
* ಎಸ್ಟಿ ಸಮುದಾಯದ 8 ಮಂತ್ರಿಗಳು
* ಇತರ ಸಮುದಾಯಗಳ 29 ಮಂತ್ರಿಗಳು
* 50 ವರ್ಷಕ್ಕಿಂತ ಕಡಿಮೆ ವಯಸ್ಸಿನ 14 ಮಂತ್ರಿಗಳು
* ಸಂಪುಟದಲ್ಲಿ 5 ಮಾಜಿ ಸಿಎಂಗಳು
ಹೊಸ ಸಚಿವರ ಫೈನಲ್ ಪಟ್ಟಿ ಇಲ್ಲಿದೆ