* ಮೋದಿ ಕ್ಯಾಬಿನೆಟ್‌ ನೂತನ ರೈಲ್ವೇ ಸಚಿವರ ಸರಳ ನಡೆ* ಇಂಜಿನಿಯರ್‌ ಅಪ್ಪಿಕೊಂಡು ಹೀಗೊಂದು ಮಾತು* ವೈರಲ್ ಆಯ್ತು ಅಶ್ವಿನಿ ವೈಷ್ಣವ್ ವಿಡಿಯೋ

ನವದೆಹಲಿ(ಜು.10): ಯಶಸ್ಸಿನ ಉತ್ತುಗಂದಲ್ಲಿರುವಾಗ ಯಾರು ತನ್ನವರನ್ನು ಮರೆಯುವುದಿಲ್ಲವೋ, ಅಂತಹವರು ಜನರ ಮನಸ್ಸು ಗೆಲ್ಲುತ್ತಾರೆ. ಸದ್ಯ ಮೋದಿ ಟೀಂನ ನೂತನ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಕೂಡಾ ಈ ಮಾತನ್ನು ನಿಜವೆಂದು ತೋರಿಸಿಕೊಟ್ಟಿದ್ದಾರೆ. ಹೌದು ಮೋದಿ ಮಂತ್ರಿಮಂಡಲದ ಸಚಿವರ ಕಾರ್ಯವೈಖರಿ ಹಾಗೂ ನಡೆ ಜನರಿಗೆ ಬಹಳಷ್ಟು ಹಿಡಿಸಲಾರಂಭಿಸಿದೆ. ಸದ್ಯ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ ಅವರ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಅವರು ಇಂಜಿನಿಯರ್‌ ಒಬ್ಬರನ್ನು ಅಪ್ಪಿಕೊಳ್ಳುತ್ತಿರುವ ದೃಶ್ಯವಿದೆ. ವಿಶೇಷವೆಂದರೆ ಈ ಇಂಜಿನಿಯರ್ ವೈಷ್ಣವ್ ಕಲಿತ ಕಾಲೇಜಿನ ಜೂನಿಯರ್ ಆಗಿದ್ದಾರೆ.

ಜೂನಿಯರ್‌ನ್ನು ಅಪ್ಪಿಕೊಂಡ ಸಚಿವ

Scroll to load tweet…

ಸಚಿವ ಸ್ಥಾನ ಪಡೆದು ಖಾತೆ ಪಡೆದ ಬಳಿಕ ಸದ್ಯ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ರವರು ಅಧಿಕಾರಿ ಹಾಗೂ ಉದ್ಯೋಗಿಗಳನ್ನು ಭೇಟಿಯಾಗುತ್ತಿದ್ದಾರೆ. ಹೀಗಿರುವಾಗ ಇಂಜಿನಿಯರ್ ಒಬ್ಬರು ವೈಷ್ಣವ್ ಅವರ ಬಳಿ ತಾನು ನೀವು ಕಲಿತ ಕಾಲೇಜಿನಲ್ಲೇ ವ್ಯಾಸಂಗ ಪಡೆದಿದ್ದೇನೆ ಎಂದು ಹೇಳಿದ್ದಾರೆ. ಇದನ್ನು ತಿಳಿದ ಸಚಿವರು ಕೂಡಲೇ ತನ್ನ ಜೂನಿಯರ್‌ನ್ನು ಅಪ್ಪಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಕಾಲೇಜಿನ ಜೂನಿಯರ್ಸ್‌ ಸೀನಿಯರ್ಸ್‌ನ್ನು ಯಾವತ್ತೂ ಸರ್‌ ಎಂದು ಕರೆಯಬಾರದು, ಬಾಸ್‌ ಅನ್ನಬೇಕು ಎಂದು ಎಲ್ಲರನ್ನೂ ನಗಿಸಿದ್ದಾರೆ. 

ನೂತನ ರೈಲ್ವೇ ಸಚಿವರ ಬಗ್ಗೆ ಒಂದಷ್ಟು ಮಾಹಿತಿ

ಅಷ್ಟಕ್ಕೂ 50 ವರ್ಷದ ಅಶ್ವಿನಿ ವೈಷ್ಣವ್‌ಗೆ ಮೋದಿ ಸರ್ಕಾರ ಇಷ್ಟು ಮಹತ್ವದ ಜವಾಬ್ದಾರಿ ಏಕಾಏಕಿ ನೀಡಿದ್ದಲ್ಲ. ಎರಡು ವರ್ಷದ ಹಿಂದೆಯೇ ಈ ವಿಚಾರವಾಗಿ ಲೆಕ್ಕಾಚಾರ ನಡೆದಿತ್ತು. ಇನ್ನು ಶಿಕ್ಷಣದ ವಿಚಾರದಲ್ಲೂ ಬಹುತೇಕ ಸಚಿವರಿಗಿಂತ ಹೆಚ್ಚು ಶಿಕ್ಷಿತರಾಗಿರುವ ಅಶ್ವಿನಿ ವೈಷ್ಣವ್ ಎಂಜಿನಿಯರಿಂಗ್ ಪದವಿಯಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದಾರೆ. ಅಲ್ಲದೇ ಐಐಟಿ ಕಾನ್ಪುರದಿಂದ ಎಂಟೆಕ್ ಪದವಿ ಗಳಿಸಿದ್ದಾರೆ. ಇವೆಲ್ಲಕ್ಕೂ ಮಿಗಿಲಾಗಿ 1994ರಲ್ಲಿ ಅವರು ಐಎಎಸ್ ಮಾಡಿರುವ ಅಶ್ವಿನಿ ವೈಷ್ಣವ್ 27 ಶ್ರೇಣಿಯಲ್ಲಿ ಪಾಸಾಗಿ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ಸಮೃದ್ಧ, ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ಪಣ; 43 ನೂತನ ಸಚಿವರಿಗೆ ಪ್ರಧಾನಿ ಮೋದಿ ಕಿವಿಮಾತು!

ಐಎಎಸ್​ ಪಾಸಾದ ಅಶ್ವಿನಿ ವೈಷ್ಣವ್ ಒಡಿಶಾದ ಬಲಾಸೋರ್ ಮತ್ತು ಕಟಕ್​ನಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಬಳಿಕ 1999ರಲ್ಲಿ ಒಡಿಶಾಗೆ ಸೂಪರ್ ಸೈಕ್ಲೋನ್ ಅಪ್ಪಳಿಸಿದ್ದ ವೇಳೆ ಅಶ್ವಿನಿ ವೈಷ್ಣವ್ ಕಾರ್ಯ ವೈಖರಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಅಮೆರಿಕದ ನೇವಿ ವೆಬ್​ಸೈಟ್​ನಲ್ಲಿ ಚಂಡಮಾರುತವನ್ನು ನಿರಂತರವಾಗಿ ತಾವೇ ಖುದ್ದಾಗಿ ಟ್ರ್ಯಾಕ್ ಮಾಡಿ, ಒಡಿಶಾ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪ್ರತೀ ತಾಸಿಗೊಮ್ಮೆ ಮಾಹಿತಿ ನೀಡುತ್ತಿದ್ದರು. ಇವರು ಕೊಟ್ಟ ಮಾಹಿತಿಯಿಂದ ಒಡಿಶಾ ಸರ್ಕಾರ ಚಂಡಮಾರುತವನ್ನು ಸಮರ್ಥವಾಗಿ ಎದುರಿಸಿತ್ತು. ಇವರ ಪ್ರಾಮಾಣಿ ಹಾಗೂ ಕಾರ್ಯ ವೈಖರಿಗೆ ಸ್ವತಃ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಪ್ರಶಂಸೆ ವ್ಯಕ್ತಪಡಿಸಿತ್ತು.

ಬಳಿಕ 2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರಾವಧಿಯಲ್ಲಿ ಪ್ರಧಾನಿ ಕಾರ್ಯಾಲಯಕ್ಕೆ ಉಪ ಕಾರ್ಯದರ್ಶಿಯಾದರು. ಈ ಅವಧಿಯಲ್ಲಿ ಸರ್ಕಾರ ಮೂಲಭೂತ ಸೌಕರ್ಯ ಯೋಜನೆಗಳಿಗಾಗಿ ರೂಪಿಸಿದ ಪಿಪಿಪಿ ಮಾದರಿ ಪ್ಲಾನ್‌ ಹಿಂದೆ ಅಶ್ವಿನಿ ವೈಷ್ಣವ್‌ರದ್ದೇ ಎನ್ನಲಾಗಿದೆ. ಬಳಿಕ ವಾಜಪೇಯಿ ಅವರಿಗೆ ಪಿಎ ಆಗಿ ಎರಡು ವರ್ಷ ಆಗಿ ಸೇವೆ ಸಲ್ಲಿಸಿದರು.