ಮೋದಿ ಸರ್ಕಾರ ದೇಶವನ್ನು ಒಡೆಯುತ್ತಿದೆ: ಸೋನಿಯಾ ವಾಗ್ದಾಳಿ!
CAB ವಿರುದ್ಧ ಧ್ವನಿ ಎತ್ತಿದ ಕಾಂಗ್ರೆಸ್ ಅಧಿನಾಯಕಿ| ‘ಮೋದಿ ಸರ್ಕಾರ ದೇಶವನ್ನು ಧರ್ಮದ ಆಧಾರದಲ್ಲಿ ಒಡೆಯುತ್ತಿದೆ’| ಭಾರತ್ ಬಚಾವೋ ಆಂದೋಲನದಲ್ಲಿ ಘರ್ಜಿಸಿದ ಸೋನಿಯಾ ಗಾಂಧಿ| ‘ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ಆತ್ಮ ಒಡೆದು ಚೂರಾಗಿದೆ’| ‘ಮೋದಿ ಸರ್ಕಾರದಿಂದ ಸಂವಿಧಾನದ ಮೇಲೆ ನೇರ ದಾಳಿ’| ಪ್ರಾಣ ತೆತ್ತಾದರೂ ಸಂವಿಧಾನವನ್ನು ಉಳಿಸುತ್ತೇವೆ ಎಂದ ಸೋನಿಯಾ|
ನವದೆಹಲಿ(ಡಿ.14): ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಮೋದಿ ಸರ್ಕಾರ ದೇಶವನ್ನು ಧರ್ಮದ ಆಧಾರದಲ್ಲಿ ಒಡೆಯುತ್ತಿದೆ ಎಂದು ಹರಿಹಾಯ್ದಿದ್ದಾರೆ.
ಇಂದು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಭಾರತ್ ಬಚಾವೋ ಸಮಾವೇಶ ಉದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ, ಮೋದಿ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತದ ಆತ್ಮ ಚೂರುಚೂರಾಗಿದೆ ಎಂದು ಕಿಡಿಕಾರಿದರು.
ಮೋದಿ ಸರ್ಕಾರ ಸಂಸತ್ತಿಗೆ ಮತ್ತು ಸಂವಿಧಾನಾತ್ಮಕ ಸಂಸ್ಥೆಗಳಿಗೆ ಯಾವುದೇ ಗೌರವ ನೀಡುತ್ತಿಲ್ಲ. ಸಮಾಜ ಒಡೆಯುವುದು ಮತ್ತು ಜನ ಪರಸ್ಪರ ಬಡಿದಾಡಿಕೊಳ್ಳುವಂತೆ ಮಾಡುವುದೇ ಬಿಜೆಪಿ ಅಜೆಂಡಾ ಎಂದು ಸೋನಿಯಾ ವಾಗ್ದಾಳಿ ನಡೆಸಿದರು.
ಸ್ವಾತಂತ್ರ್ಯ ಹೋರಾಟಗಾರರು ಈ ದೇಶಕ್ಕಾಗಿ ಮತ್ತು ಸಂವಿಧಾನಕ್ಕಾಗಿ ಬಲಿದಾನ ಮಾಡಿದ್ದಾರೆ. ಆದರೆ ಮೋದಿ ಸರ್ಕಾರ ಸಂವಿಧಾನವನ್ನೇ ನಾಶಮಾಡಲು ಹೊರಟಿದೆ ಎಂದು ಸೋನಿಯಾ ಕಿಡಿಕಾರಿದರು.
ಕ್ಷಮೆ ಕೇಳಲು ನಾನು ರಾಹುಲ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ’!