ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠ ದಶಕಗಳ ಕಾಲ ನಡೆದ ಚರ್ಚೆಯ ವಿಚಾರವನ್ನು ಮತ್ತೆ ತೆರೆದಿದೆ. ದೇಶದಲ್ಲಿ ಮರಣದಂಡನೆ ಶಿಕ್ಷೆಯನ್ನು ಜಾರಿ ಮಾಡಲು ಹೆಚ್ಚು ಮಾನವೀಯ ಹಾಗೂ ಗೌರವಾನ್ವಿಯ ಮಾರ್ಗಗಳು ಯಾವುದಿದೆ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದೆ. 

ನವದೆಹಲಿ (ಮಾ.21): ಕುತ್ತಿಗೆಗೆ ನೇಣು ಹಾಕುವ ಮೂಲಕ ಮರಣದಂಡನೆ ಶಿಕ್ಷೆಯನ್ನು ಜಾರಿ ಮಾಡುವ ಕಾನೂನಿನ ಬಗ್ಗೆ ಸುಪ್ರೀಂ ಕೋರ್ಟ್‌ ಮತ್ತೆ ಕೇಂದ್ರ ಸರ್ಕಾರದಿಂದ ಮಾಹಿತಿ ಹೇಳಿದೆ. ಈ ಹಿಂದೆ ಸಾಕಷ್ಟು ಬಾರಿ ದೇಶದಲ್ಲಿ ಮರಣದಂಡನೆ ಶಿಕ್ಷೆಯ ಕುರಿತಾಗ ಚರ್ಚೆಗಳು ನಡೆದಿದ್ದವು. ಆದರೆ, ಕೇಂದ್ರ ಮಾತ್ರ ಇಂಥದ್ದೊಂದು ಶಿಕ್ಷೆ ಇರುವುದು ಅಗತ್ಯ ಎಂದು ವಾದಿಸಿತ್ತು. ಆ ಬಳಿಕ ನೇಣು ಹಾಕುವ ಮೂಲಕ ಕ್ರೂರವಾಗಿ ಶಿಕ್ಷೆಯನ್ನು ಜಾರಿ ಮಾಡುವ ಬದಲು ಬೇರೆ ವಿಧಾನಗಳನ್ನು ಬಳಸಬಹುದು ಎಂದೂ ಹೇಳಲಾಗಿತ್ತು. ಈ ಗ ಈ ಚರ್ಚೆಗೆ ಸುಪ್ರೀಂ ಕೋರ್ಟ್‌ ಮತ್ತೆ ಚಾಲನೆ ನೀಡಿದೆ. ಕೋರ್ಟ್‌ನಲ್ಲಿ ಮರಣದಂಡನೆಯ ಶಿಕ್ಷೆಯ ರೂಪದ ಕಾನೂನನ್ನು ಡಿಫೆಂಡ್‌ ಮಾಡಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಹೇಳಿದೆ. ಈ ವೇಳೆ ಭಾರತದ ಅಟಾರ್ನಿ ಜನರಲ್ (ಎಜಿ) ಎ ಆರ್ ವೆಂಕಟರಮಣಿ ಅವರು ನ್ಯಾಯಾಲಯವು ಸಮಸ್ಯೆಯನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವ ಮೊದಲು ಸರ್ಕಾರದಿಂದ ಸೂಚನೆಗಳನ್ನು ಪಡೆಯಲು ಒಪ್ಪಿಕೊಂಡರು. 2017 ರಲ್ಲಿ, ರಿಷಿ ಮಲ್ಹೋತ್ರಾ ಎಂಬ ವಕೀಲರು, ಮರಣದಂಡನೆ ಶಿಕ್ಷೆಯನ್ನು ಜಾರಿ ಮಾಡಲು ಹೆಚ್ಚು ಘನತೆಯ ಮಾರ್ಗವನ್ನು ಬಳಸಿಕೊಳ್ಳಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಅನ್ನು ಸಲ್ಲಿಕೆ ಮಾಡಿದ್ದರು. ಮರಣದಂಡನೆ ಶಿಕ್ಷೆಯ ಮೂಲಕ ಅಪರಾಧಿಯ ಜೀವನ ಕೊನೆಯಾಗುತ್ತದೆ. ಇಂಥ ಶಿಕ್ಷೆಯನ್ನು ನೇಣು ಹಾಕುವ ಮೂಲಕ ಜಾರಿ ಮಾಡಿದರೆ, ಅಪರಾಧಿಗೆ ನೋವು ಕೊಟ್ಟಂತೆ ಆಗುತ್ತದೆ. ಹಾಗಾಗಿ ಗಲ್ಲು ಶಿಕ್ಷೆಯನ್ನು ಇನ್ನಷ್ಟು ಘನತೆಯ ಮಾರ್ಗದಲ್ಲಿ ಜಾರಿ ಮಾಡಬೇಕು ಎಂದು ಅರ್ಜಿಯಲ್ಲಿ ಕೇಳಿದ್ದರು.

ಪಿಐಎಲ್‌ನ ಮನವಿಯು ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC), 1973 ರ ಸೆಕ್ಷನ್ 354(5) ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದೆ. ಈ ನಿಯಮವು, 'ಯಾವುದೇ ವ್ಯಕ್ತಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿದರೆ, ಆತನ ಕುತ್ತಿಗೆಗೆ ನೇಣು ಹಾಕುವ ಮೂಲಕ ಆತ ಸಾಯುವವರೆಗೂ ನೇಣುಗಂಬದಲ್ಲಿ ಇರಬೇಕು' ಎಂದು ಹೇಳುತ್ತದೆ.

1982ರ ಬಚ್ಚನ್‌ ಸಿಂಗ್‌ ವರ್ಸಸ್‌ ಸ್ಟೇಟ್‌ ಆಫ್‌ ಪಂಜಾಬ್‌ ಕೇಸ್‌ನಲ್ಲಿ ಐವರು ಸದಸ್ಯರ ಸುಪ್ರೀಂ ಕೋರ್ಟ್‌ ನ್ಯಾಯಪೀಠ, 4:1 ಬಹುಮತದ ತೀರ್ಪಿನ ಮೂಲಕ ಮರಣದಂಡನೆಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿತ್ತು. 2017ರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಲು ಸುಪ್ರೀಂ ಸಮ್ಮತಿಸಿದ್ದು, ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿತ್ತು. ನ್ಯಾಯಾಲಯದ ದಾಖಲೆಗಳು ಜನವರಿ 2018 ರಲ್ಲಿ ಪ್ರಸ್ತುತ ಕಾನೂನಿನ ಸ್ಥಾನವನ್ನು ಸಮರ್ಥಿಸುವ ಅಫಿಡವಿಟ್ ಅನ್ನು ಸಲ್ಲಿಸಿದೆ ಎಂದು ತೋರಿಸುತ್ತದೆ, ಆದರೆ ನಂತರ ಪ್ರಕರಣವನ್ನು ಪಟ್ಟಿ ಮಾಡಲಾಗಿರಲಿಲ್ಲ. ಪ್ರಕರಣದ ವಿಚಾರಣೆಗೆ ಒಪ್ಪಿಗೆ ಸೂಚಿಸಿದ ಅಂದಿನ ಸಿಜೆಐ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ (ನಿವೃತ್ತ) ಅವರೊಂದಿಗೆ ಸಿಜೆಐ ಚಂದ್ರಚೂಡ್ ಮೂವರು ನ್ಯಾಯಾಧೀಶರಲ್ಲಿ ಒಬ್ಬರಾಗಿದ್ದರು. ಈಗ ಐದು ವರ್ಷದ ಬಳಿಕ ಕೇಸ್‌ಅನ್ನು ಆಲಿಸಲು ಪಟ್ಟಿ ಮಾಡಿದೆ.

ಕೇಂದ್ರದ ನಿಲುವೇನು?: ಇನ್ನು 2018ರಲ್ಲಿ ಈ ಕುರಿತಾಗಿ ಅಫಿಡವಿಟ್‌ ಸಲ್ಲಿಸಿದ್ದ ಕೇಂದ್ರ ಸರ್ಕಾರ, ನೇಣು ಹಾಕುವ ಮೂಲಕ ಮರಣದಂಡನೆ ಜಾರಿ ಮಾಡುವುದು ಸರ್ಕಾರದ ಏಕೈಕ ಕಾರ್ಯಸಾಧ್ಯ ಆಯ್ಕೆಯಾಗಿತ್ತು. ಆದರೆ, ಇತರ ದೇಶಗಳಲ್ಲಿ ಇರುವ ವಿಧಾನಗಳನ್ನು ಪರಿಶೀಲಿಸಲು ಹೆಚ್ಚುವರಿ ಸಮಯ ಕೋರಿತ್ತು. 2003 ರಲ್ಲಿ ತನ್ನ 187 ನೇ ವರದಿಯಲ್ಲಿ, ಭಾರತದ ಕಾನೂನು ಆಯೋಗವು ಸಿಆರ್‌ಪಿಸಿ ಸೆಕ್ಷನ್ 354(5) ಅನ್ನು ತಿದ್ದುಪಡಿ ಮಾಡಬೇಕೆಂದು ಶಿಫಾರಸು ಮಾಡಿತು, "ಆರೋಪಿಯು ಸಾಯುವವರೆಗೂ ಮಾರಕ ಚುಚ್ಚುಮದ್ದು" ನೀಡುವ ಮರಣದಂಡನೆ ಜಾರಿಯ ಪರ್ಯಾಯ ವಿಧಾನವನ್ನು ತಿಳಿಸಿತ್ತು.

ಮೋದಿ ರ‍್ಯಾಲಿ ಟಾರ್ಗೆಟ್ ಮಾಡಿ ಭೋಪಾಲ್ ರೈಲು ಸ್ಫೋಟಿಸಿದ 7 ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ಪ್ರಕಟ!

ಬೇರೆ ದೇಶಗಳಲ್ಲಿ ಹೇಗಿದೆ ಮರಣದಂಡನೆ ಶಿಕ್ಷೆ: ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಎನ್‌ಜಿಓ ವರದಿಯ ಪ್ರಕಾರ, 55 ರಾಷ್ಟ್ರಗಳಲ್ಲಿ ಮರಣದಂಡನೆ ಅನ್ನೋದು ಕಾನೂನು ಪುಸ್ತಕದಲ್ಲಿದೆ. ಅದರಲ್ಲಿ ನೇಣು ಹಾಕುವ ಮಾರ್ಗವೇ ಹೆಚ್ಚಾಗಿ ಪ್ರಚಲಿತದಲ್ಲಿದೆ. ಅದರಲ್ಲೂ ಬ್ರಿಟಿಷ್‌ ವಸಹಾತುವಾಗಿರುವ ದೇಶಗಳನ್ನು ಇದೇ ಮಾರ್ಗವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದೆ. ಅಮೆರಿಕದಲ್ಲಿ, ಸಮೊವಾ ಸೇರಿದತೆ 27 ರಾಜ್ಯಗಳಲ್ಲಿ ಮಾರಕ ಇಂಜೆಕ್ಷನ್‌ ನೀಡುವ ಮೂಲಕ ಮರಣದಂಡನೆ ಜಾರಿ ಮಾಡಲಾಗುತ್ತದೆ. ಕೆಲವು ರಾಜ್ಯಗಳಲ್ಲಿ ಎಲೆಕ್ಟ್ರಿಕ್‌ ಶಾಕ್‌ ನೀಡುವ ಮಾಡುವ ಮಾರ್ಗವೂ ಇದೆ. ಚೀನಾದಲ್ಲಿ ಶೂಟ್‌ ಮಾಡುವ ಮೂಲಕ ಈ ಶಿಕ್ಷೆ ಜಾರಿ ಮಾಡಲಾಗುತ್ತದೆ. ಸೌದಿ ಅರೇಬಿಯಾದಲ್ಲಿ ಬೇರೆ ಮಾರ್ಗಗಳೂ ಇದ್ದರೂ, ಕುತ್ತಿಗೆ ಕತ್ತರಿಸುವ ಮಾರ್ಗವನ್ನು ಹೆಚ್ಚಾಗಿ ಬಳಕೆ ಮಾಡುತ್ತದೆ.

Gorakhnath Temple Attack: ಐಐಟಿ ಪದವೀಧರ ಅಹ್ಮದ್‌ ಮುರ್ತುಜಾಗೆ ಮರಣದಂಡನೆ!

ಭಾರತದಲ್ಲಿ, ಏರ್ ಫೋರ್ಸ್ ಆಕ್ಟ್, 1950, ದಿ ಆರ್ಮಿ ಆಕ್ಟ್ 1950, ಮತ್ತು ದಿ ನೇವಿ ಆಕ್ಟ್ 1957 ಮರಣದಂಡನೆಯನ್ನು ಸಾಯುವವರೆಗೂ ಕುತ್ತಿಗೆಯಿಂದ ನೇಣು ಹಾಕುವ ಮೂಲಕ ಅಥವಾ ಗುಂಡಿಕ್ಕಿ ಸಾಯಿಸುವ ಮೂಲಕ ಮರಣದಂಡನೆಯನ್ನು ಕೈಗೊಳ್ಳಬೇಕು ಎಂದು ಹೇಳುತ್ತದೆ.