Asianet Suvarna News Asianet Suvarna News

ಮಣಿಪುರದಲ್ಲಿ ಪರಿಸ್ಥಿತಿ ಉದ್ವಿಘ್ನ, ಇಂಟರ್ನೆಟ್ ಬಂದ್, ನಿಷೇಧಾಜ್ಞೆ ಜಾರಿ!

ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಕಾರಣ ಮಣಿಪುರ ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಮೊಬೈಲ್‌ ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ. 

Mobile internet service suspended 144 section imposed in Manipur after huge protest ckm
Author
Bengaluru, First Published Aug 8, 2022, 9:40 AM IST

ಇಂಫಾಲ್‌(ಆ.08): ಮಣಿಪುರದಲ್ಲಿ ಪರಿಸ್ಥಿತಿ ಉದ್ವಿಘ್ನಗೊಂಡಿದೆ.  ದೇಶದಲ್ಲಿ ಉಂಟಾಗಿರುವ ಅನಿಶ್ಚಿತ ಆರ್ಥಿಕ ಹಿಂಜರಿತವನ್ನು ವಿರೋಧಿಸಿ ವಿದ್ಯಾರ್ಥಿ ಸಂಘಟನೆಗಳು ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ವಾಹನಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಮಣಿಪುರ ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಮೊಬೈಲ್‌ ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ. ಬುಡಕಟ್ಟು ವಿದ್ಯಾರ್ಥಿಗಳ ಸಂಘಟನೆಗಳು ಇಂಫಾಲ್‌ ಮತ್ತು ದಿಮಾಪುರ್‌ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 2 ಹಾಗೂ ಇಂಫಾಲ್‌ ಮತ್ತು ಜರಿಬಾಮ್‌ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 39ನ್ನು ಮುಚ್ಚಿದ್ದ ಕಾರಣ ಭಾರಿ ಪ್ರಮಾಣದಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಅಲ್ಲದೇ ಅಸ್ಸಾಂನಿಂದ ಬರಬೇಕಿದ್ದ ಸರಕುಗಳು ರಾಜ್ಯವನ್ನು ತಲುಪದೇ ಭಾರಿ ತೊಂದರೆ ಉಂಟಾಯಿತು. ಪ್ರತಿಭಟನಾಕಾರರು ಕೆಲವು ಜಿಲ್ಲೆಗಳಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರಾಜ್ಯಾದ್ಯಂತ ಮೊಬೈಲ್‌ ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದ್ದು, ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

5 ದಿನಗಳ ಕಾಲ ಮಣಿಪುರದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಬಿಷ್ಣುಪುರ ಜಿಲ್ಲೆಯ ಫೌಗಕ್‌ಚಾವೋ ಪ್ರದೇಶದಲ್ಲಿ ವಾಹನಕ್ಕೆ ಬೆಂಕಿ ಹಚ್ಚಿದ ಬೆನ್ನಲ್ಲೇ ಪರಿಸ್ಥಿತಿ ಉದ್ವಿಘ್ನಗೊಂಡಿದೆ. ಅಪರಿಚಿತ ವ್ಯಕ್ತಿಗಳ ಗುಂಪು ಈ ಕೃತ್ಯ ಎಸಗಿದೆ. ಚುರಾಚಂದ್‌ಪುರ ಜಿಲ್ಲೆಯಲ್ಲಿ ಲಾರಿಗೆ ಬೆಂಕಿ ಹಚ್ಚಲಾಗಿದೆ. ಇದರಿಂದ ಶನಿವಾರದಿಂದ(ಆ.06) ರಿಂದ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. 

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್: ಇನ್ನಿಬ್ಬರು ಆರೋಪಿಗಳ ಬಂಧನ

ದಿಢೀರ್ ಪ್ರತಿಭಟನೆಗೆ ಹಿಂಸೆಗೆ ಸ್ಪಷ್ಟ ಕಾರಣಗಳು ತಿಳಿದುಬಂದಿಲ್ಲ. ಆರ್ಥಿಕ ಹಿಂಜರಿತ ಕಾರಣ ಮುಂದಿಟ್ಟು ಪ್ರತಿಭಟನೆ ಆರಂಭಗೊಂಡಿದೆ. ಆದರೆ ಇದು ಹಿಂಸಾರೂಪಕ್ಕೆ ತೆರಳಲು ಕೋಮು ಸಂಘರ್ಷವೂ ಕಾರಣ ಎಂದು ಹೇಳಲಾಗುತ್ತಿದೆ.  ಪ್ರತಿಭಟನೆ ವೇಳೆ ಆತಂಕ ಸೃಷ್ಟಿಸಿದ ಕೆಲ ವಿದ್ಯಾರ್ಥಿನ ಸಂಘಟನೆ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದರಿಂದ ರೊಚ್ಚಿಗೆದ್ದ ಪ್ರತಿಭಟನಕಾರರು ಸರ್ಕಾರ ಹಾಗೂ ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಹಿಂಸೆ ಆರಂಭಿಸಿದ್ದಾರೆ.

ಮಣಿಪುರದ ನಗರ, ಪಟ್ಟಣ ಹಾಗೂ ಜಿಲ್ಲೆಗಳಲ್ಲಿ ಟೈಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮುಂದುವರಿಸಲಾಗಿದೆ. ಹೀಗಾಗಿ ರಾಜ್ಯಾದ್ಯಂತ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. 

ರಾಜಸ್ಥಾನದ ಹಿಂದೂ ಟೈಲರ್ ಹತ್ಯೆಯಿಂದ ಸುದೀರ್ಘ ನಿಷೇಧಾಜ್ಞೆ 
ಇತ್ತೀಚೆಗೆ ರಾಜಸ್ಥಾನದಲ್ಲಿ ಬಿಜೆಪಿ ವಿವಾದಿತ ನಾಯಕಿ ನೂಪುರ್ ಶರ್ಮಾ ಬೆಂಬಲಿಸಿ ಸ್ಟೇಟಸ್ ಹಾಕಿದ್ದ ಹಿಂದೂ ಟೈಲರ್ ಕನ್ಹಯ್ ಲಾಲ್ ಹತ್ಯೆ ಘಟನೆಯಿಂದ ದೇಶಾದ್ಯಂತ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ರಾಜಸ್ಥಾನದ ಎಲ್ಲಾ ಜಿಲ್ಲೆಗಳಲ್ಲೂ 1 ತಿಂಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. 24 ಗಂಟೆಗಳ ಅವಧಿಗೆ ಮೊಬೈಲ್‌ ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸಲಾಗಿತ್ತು. ಈ ಘಟನೆ ಖಂಡಿಸಿ ದೇಶದ ಬಹುತೇಕ ರಾಜ್ಯಗಳಲ್ಲಿ ಪ್ರತಿಭಟನೆ ನಡೆದಿತ್ತು. ಕೋಮು ಸಂಘರ್ಷದ ವಾತಾರವಣ ನಿರ್ಮಾಣವಾಗಿತ್ತು. ಇದರಿಂದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನಿಷೇಧಾಜ್ಞೆ ಸೇರಿದಂತೆ ಹಲವು ನಿರ್ಬಂಧ ವಿಧಿಸಲಾಗಿತ್ತು.

ವಿಮೆ ಹಣ ಪಡೆಯಲು ಪತ್ನಿಯ ಗುಂಡಿಕ್ಕಿ ಕೊಂದ, ಸಾಲ ತೀರಿಸುವ ಮೊದಲೇ ಪತಿ ಅಂದರ್!

Follow Us:
Download App:
  • android
  • ios