Asianet Suvarna News Asianet Suvarna News

ಜಾಹೀರಾತು ತಂದ ಆಪತ್ತು, ತನಿಷ್ಕ್ ಸ್ಟೋರ್ ಮೇಲೆ ದಾಳಿ! ಇದು Fake News ಎಂದ ನೆಟ್ಟಿಗರು

ತನಿಷ್ಕ್ ಜ್ಯುವೆಲ್ಲರಿ ಕಂಪನಿಯ ಜಾಹೀರಾತಿನಿಂದ ಹುಟ್ಟಿಕೊಂಡ ವಿವಾದ| ಗುಜರಾತ್‌ನ ಗಾಂಧೀಧಾಮದಲ್ಲಿರುವ ತನಿಷ್ಕ್ ಜ್ಯುವೆಲ್ಲರಿ ಶಾಪ್ ಮೇಲೆ ದುಷ್ಕರ್ಮಿಗಳ ದಾಳಿ| ಶಾಪ್‌ನ ಮ್ಯಾನೇಜರ್‌ನಿಂದ ಜಾಹೀರಾತು ಪ್ರಸಾರ ಮಾಡಿದ ಸಂಬಂಧ ಕ್ಷಮಾಪಣಾ ಪತ್ರ ಬರೆದಿದ್ದಾರೆಂದ NDTV ಸುದ್ದಿಯೊಂದನ್ನು ಪ್ರಸಾರ ಮಾಡಿತ್ತು. ಆದರೆ, ಇದು ಫೇಕ್ ಎಂದು ಖುದ್ದು ಮ್ಯಾನೇಜರ್ ಸ್ಪಷ್ಟನೆ ನೀಡಿದ್ದಾರೆ. 

Mob Attacks Tanishq Store In Gujarat Amid Row Over Ad pod
Author
Bangalore, First Published Oct 14, 2020, 1:18 PM IST
  • Facebook
  • Twitter
  • Whatsapp

ಅಹಮದಾಬಾದ್(ಅ.14): ತನಿಷ್ಕ್ ಜ್ಯುವೆಲ್ಲರಿ ಕಂಪನಿಯ ಜಾಹೀರಾತಿನಿಂದ ಹುಟ್ಟಿಕೊಂಡ ವಿವಾದ ದಿನೇ ದಿನೇ ಹೆಚ್ಚಾಗುತ್ತಿದೆ. #BoycottTanishq ಎಂಬ ಹ್ಯಾಷ್ ಟ್ಯಾಗ್ ಮೂಲಕ ಟ್ರೆಂಡ್ ಸೃಷ್ಟಿಸಿದ್ದು, ಇದರ ಬೆನ್ನಲ್ಲೇ ಕಂಪನಿ ಈ ಜಾಹೀರಾತನ್ನು ತೆಗೆದು ಹಾಕಿತ್ತು. ಆದರೀಗ ಈ ವಿವಾದ ಇಲ್ಲಿಗೇ ನಿಲ್ಲದೇ ಮತ್ತೆ ಮುಂದುವರೆದಿದೆ. ಸದ್ಯ ಗುಜರಾತ್‌ನ ಗಾಂಧೀಧಾಮದಲ್ಲಿರುವ ತನಿಷ್ಕ್ ಜ್ಯುವೆಲ್ಲರಿ ಶಾಪ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ, ಎಂಬ ಸುದ್ದಿಯೊಂದನ್ನು NDTV ಪ್ರಸಾರ ಮಾಡಿದ್ದು, ನಂತರ ಇಧು ಸುಳ್ಳೆದು ಖುದ್ದು ತಾನಿಷ್ಟ್ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಯಲ್ಲಿ ಏನಿತ್ತು?
ಜ್ಯುವೆಲ್ಲರಿ ಶಾಪ್‌ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ಶಾಪ್‌ನ ಮ್ಯಾನೇಜರ್‌ನಿಂದ ಜಾಹೀರಾತು ಪ್ರಸಾರ ಮಾಡಿದ ಸಂಬಂಧ ಕ್ಷಮಾಪಣಾ ಪತ್ರವನ್ನೂ ಬರೆಸಿದ್ದಾರೆ. ಈ ಪತ್ರದಲ್ಲಿ ಕಛ್ ಜಿಲ್ಲೆಯ ಜನರ ಭಾವನೆಗಳನ್ನು ಧಕ್ಕೆಯುಂಟು ಮಾಡಿದ್ದಕ್ಕಾಗಿ ಕ್ಷಮೆ ಯಾಚಿಸುತ್ತೇನೆ' ಎಂದಿದ್ದಾರೆ.

ಈ ನಡುವೆ ಅತ್ತ ನಟಿ ಸ್ವರಾ ಭಾಸ್ಕರ್ ಕೆಲವೇ ಟ್ರೋಲ್‌ಗಳು ಇಡೀ ದೇಶವೆಂದು ಪರಿಗಣಿಸಲು ಸಾಧ್ಯವಿಲ್ಲ ಎನ್ನುವ ಮೂಲಕ ತನಿಷ್ಕ್ ಜಾಹೀರಾತನ್ನು ಸಮರ್ಥಿಸಿಕೊಂಡಿದ್ದಾರೆ.

ಜಾಹೀರಾತಿನಲ್ಲೇನಿತ್ತು?
ಅಕ್ಟೋಬರ್ 9 ರಂದು ರಿಲೀಸ್ ಆದ ಈ ಜಾಹೀರಾತಿನಲ್ಲಿ ಮುಸ್ಲಿಂ ಕುಟುಂಬವೊಂದು, ತಮ್ಮ ಹಿಂದೂ ಧರ್ಮದ ಗರ್ಭಿಣಿ ಸೊಸೆಗಾಗಿ ಹಿಂದೂ ಸಂಪ್ರದಾಯದಂತೆ ಸೀಮಂತ ನಡೆಸುವ ತಯಾರಿಯ ದೃಶ್ಯಗಳಿವೆ. ಅಲ್ಲದೇ ಅಂತಿಮವಾಗಿ ಇಂತಹುದ್ದೊಂದು ಅಚ್ಚರಿಯ ತಯಾರಿ ಕಂಡ ಸೊಸೆ ತನ್ನ ಅತ್ತೆ ಬಳಿ ನಿಮ್ಮ ಸಂಪ್ರದಾಯದಲ್ಲಿ ಇದೆಲ್ಲವನ್ನೂ ಮಾಡುವುದಿಲ್ಲವಲ್ಲಾ ಎಂದು ಪ್ರಶ್ನಿಸಿದಾಗ ಮಗಳನ್ನು ಖುಷಿಯಾಗಿಡುವ ಸಂಪ್ರದಾಯ ಎಲ್ಲಾ ಮನೆಯಲ್ಲೂ ಮಾಡುತ್ತಾರಲ್ಲವೇ? ಎಂದು ಅತ್ತೆ ಪ್ರಶ್ನಿಸುತ್ತಾರೆ. 

ಕೋಮು ಸಾಮರಸ್ಯ ಸಾರುವ ಜಾಹೀರಾತು ಇದಾಗಿತ್ತು

ಇನ್ನು ಈ ವಿಡಿಯೋಗೆ ಆಕೆ ತನ್ನನ್ನು ಮಗಳಂತೆ ಕಾಣುವ ಕುಟುಂಬಕ್ಕೆ ಮದುವೆಯಾಗಿ ಹೋಗಿದ್ದಾಳೆ. ಆಕೆಗಾಗಿ ಅವರು ತಾವು ಅನುಸರಿಸದ ಸಂಪ್ರದಾಯವನ್ನು ಆಚರಿಸುತ್ತಿದ್ದಾರೆ. ಎರಡು ವಿಭಿನ್ನ ಧರ್ಮ, ಸಂಪ್ರದಾಯ ಹಾಗೂ ಪದ್ಧತಿಯ ಸಂಗಮವಿದು ಎಂಬ ವಿವರಣೆಯನ್ನೂ ಬರೆಯಲಾಗಿತ್ತು.

ಮ್ಯಾನೇಜರ್ ಮಾಡಿದ ಟ್ವೀಟ್ ಏನು?

 

 

Follow Us:
Download App:
  • android
  • ios