Asianet Suvarna News Asianet Suvarna News

Suspend MLA: ಶಾಸಕರನ್ನು ದೀರ್ಘಕಾಲ ಸಸ್ಪೆಂಡ್‌ ಮಾಡುವಂತಿಲ್ಲ: ಸುಪ್ರೀಂಕೋರ್ಟ್‌

*  ಅಧಿವೇಶನದ ಅವಧಿಗಷ್ಟೇ ಅಮಾನತು ಓಕೆ
*   ಸುಪ್ರೀಂಕೋರ್ಟ್‌ನಿಂದ ಮಹತ್ವದ ಆದೇಶ
*  ಇದು ಪ್ರಜಾಪ್ರಭುತ್ವದ ಜಯ 
 

MLAs Can Not be Suspended for Long Time Says Supreme Court grg
Author
Bengaluru, First Published Jan 29, 2022, 5:55 AM IST

ನವದೆಹಲಿ(ಜ.29):  ಶಾಸಕ ಅಥವಾ ಸಂಸದರನ್ನು ನಿರ್ದಿಷ್ಟ ಅಧಿವೇಶನದ ಅವಧಿ ಮೀರಿ ಅಮಾನತು ಮಾಡುವುದು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌(Supreme Court) ಹೇಳಿದೆ. ತನ್ಮೂಲಕ, ಕಳೆದ ವರ್ಷ ಜುಲೈನಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭೆ ಅಧಿವೇಶನದಲ್ಲಿ(Maharashtra Assembly Session) 12 ಶಾಸಕರನ್ನು 1 ವರ್ಷದ ಮಟ್ಟಿಗೆ ಅಮಾನತು(Suspend) ಮಾಡಿದ್ದ ಸ್ಪೀಕರ್‌ ಆದೇಶವನ್ನು ರದ್ದುಗೊಳಿಸಿ ಮಹತ್ವದ ಆದೇಶ ನೀಡಿದೆ. ಇದು ಸಂಸತ್ತು ಹಾಗೂ ಇತರ ವಿಧಾನಸಭೆ/ಪರಿಷತ್‌ಗಳಿಗೂ ಅನ್ವಯವಾಗುವ ತೀರ್ಪಾಗಿದ್ದು, ಮಹತ್ವ ಪಡೆದಿದೆ.

ಸುಪ್ರೀಂ ಕೋರ್ಟ್‌ನ ತೀರ್ಪನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ(JP Nadda) ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌(Devendra Fadnavis) ಅವರು ಸ್ವಾಗತಿಸಿದ್ದಾರೆ.

Freebie Budget: ಬೇಕಾಬಿಟ್ಟಿ ಚುನಾವಣಾ ಭರವಸೆಗಳಿಗೆ ಸುಪ್ರೀಂ ಕಿಡಿ!

2021ರ ಜು.5ರಂದು ಸ್ಪೀಕರ್‌ ಚೇಂಬರ್‌ನಲ್ಲಿ ಅಧಿಕಾರಿ ಭಾಸ್ಕರ್‌ ಜಾಧವ್‌ ಅವರ ಜತೆ ಅಸಂಬದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಬಿಜೆಪಿ ಶಾಸಕರ ಮೇಲೆ ಕೇಳಿಬಂದಿತ್ತು. ಬಳಿಕ 12 ಬಿಜೆಪಿ ಶಾಸಕರನ್ನು 1 ವರ್ಷದವರೆಗೆ

ಸಭಾಧ್ಯಕ್ಷರು ಅಮಾನತು ಮಾಡಿದ್ದರು. ಹೀಗಾಗಿ ಅಮಾನತು ವಿರೋಧಿಸಿ 12 ಬಿಜೆಪಿ ಶಾಸಕರು(BJP MLAs) ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಶುಕ್ರವಾರ ಇದರ ವಿಚಾರಣೆ ನಡೆಸಿದ ನ್ಯಾಯಾಧೀಶ ಎ.ಎಂ.ಖಾನ್ವಿಲ್ಕರ್‌ ನೇತೃತ್ವದ ಪೀಠ, ‘2021ರ ಜುಲೈನಲ್ಲಿ ನಡೆದ ಮುಂಗಾರು ಅಧಿವೇಶನದ ವೇಳೆ ಸ್ಪೀಕರ್‌ ಹೊರಡಿಸಿದ 12 ಶಾಸಕರ ಅಮಾನತು ಆದೇಶವು ಆ ಅಧಿವೇಶನಕ್ಕಷ್ಟೇ ಸೀಮಿತವಾಗಿಲ್ಲದೆ ಮುಂದಿನ ಅಧಿವೇಶನಕ್ಕೂ ಸಂಬಂಧಿಸಿದ್ದಾಗಿದೆ. ಆದರೆ ಇದು ಕಾನೂನಿನ ಕಣ್ಣುಗಳಲ್ಲಿ ಅನೂರ್ಜಿತ, ಅಸಾಂವಿಧಾನಿಕ, ಅಕ್ರಮ ಮತ್ತು ತರ್ಕರಹಿತವಾದದ್ದು. ಅಲ್ಲದೆ ಅರ್ಜಿದಾರರು ಮುಂಗಾರು ಅಧಿವೇಶನದ ಮುಕ್ತಾಯದ ಬಳಿಕ ಎಲ್ಲಾ ಸೌಲಭ್ಯಗಳಿಗೆ ಅರ್ಹವಾಗಿದ್ದಾರೆ’ ಎಂದು ಹೇಳಿದೆ.
ಆದರೆ ಇದೇ ವೇಳೆ, ‘ಶಾಸಕರು ಕೂಡ ಗದ್ದಲ ಸೃಷ್ಟಿಸಬಾರದು. ಮುತ್ಸದ್ದಿಯ ರೀತಿ ನಡೆದುಕೊಳ್ಳಬೇಕು’ ಎಂದು ಅದು ಬುದ್ಧಿಮಾತು ಹೇಳಿದೆ.

ಇದು ಪ್ರಜಾಪ್ರಭುತ್ವದ ಜಯ:

ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವ(Democracy) ಉಲ್ಲಂಘಿಸಿ 12 ಬಿಜೆಪಿ ಶಾಸಕರ ಅಮಾನತು ಮಾಡಿದ ಸ್ಪೀಕರ್‌ ನಿರ್ಣಯ ತಿರಸ್ಕರಿಸಿದ ಸುಪ್ರೀಂ ತೀರ್ಪು ಸತ್ಯಕ್ಕೆ ಸಿಕ್ಕ ಜಯವಾಗಿದೆ. ಮಹಾರಾಷ್ಟ್ರದ ಮಹಾ ವಿಕಾಸ್‌ ಅಘಾಡಿ ಸರ್ಕಾರದ ವಿರುದ್ಧ ಬಿಜೆಪಿ ಧ್ವನಿಯೆತ್ತುವುದನ್ನು ಮುಂದುವರಿಸಲಿದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಹೇಳಿದ್ದಾರೆ. ‘ಇದು ಅಘಾಡಿ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದ ತೀರ್ಪು’ ಎಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಹೇಳಿದ್ದಾರೆ.

Inherit Properties ವಿಲ್ ಬರೆಯದೇ ಮರಣ ಹೊಂದಿದ ತಂದೆ ಆಸ್ತಿ ಹಕ್ಕು ಮಗಳಿಗೆ, ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

ಬಡ್ತಿ ಮೀಸಲು ರಾಜ್ಯಗಳ ನಿರ್ಧಾರ ಎಂದ ಸುಪ್ರೀಂ ಕೋರ್ಟ್

ಸರ್ಕಾರಿ ಹುದ್ದೆಗಳ ಬಡ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ನೀಡಬೇಕೆಂಬ ವಿಚಾರಕ್ಕೆ ಸಂಬಂಧಿಸಿ ಯಾವುದೇ ಮಾನದಂಡ (Court cannot lay down yardstick) ವಿಧಿಸಲು ಸುಪ್ರೀಂಕೋರ್ಟ್‌ (Supreme Court) ನಿರಾಕರಿಸಿದೆ. ಆದರೆ, ‘ಪರಿಶಿಷ್ಟಜಾತಿ/ಪಂಗಡಗಳ ಪ್ರಾತಿನಿಧ್ಯದ ಅಸಮರ್ಪಕತೆಯ ಬಗ್ಗೆ ದತ್ತಾಂಶ ಸಂಗ್ರಹಿಸುವುದು ರಾಜ್ಯಗಳ ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ’ ಎಂಬ ಮಹತ್ವದ ತೀರ್ಪು ನೀಡಿದೆ.

ಈ ಬಗ್ಗೆ ಶುಕ್ರವಾರ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ನಾಗೇಶ್ವರ ರಾವ್‌ (L Nageswara Rao) ನೇತೃತ್ವದ ತ್ರಿಸದಸ್ಯ ಪೀಠ, ‘ಬಡ್ತಿ ನೀಡುವ ಸಂದರ್ಭದಲ್ಲಿ ಸರ್ಕಾರಿ ಹುದ್ದೆಗಳಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡಗಳ ಪ್ರಾತಿನಿಧ್ಯದ ಅಸಮರ್ಪಕತೆ ಗುರುತಿಸುವುದು ರಾಜ್ಯ ಸರ್ಕಾರಗಳ ಹೊಣೆಗಾರಿಕೆ. ಈಗಾಗಲೇ ನಾವು ಈ ಹಿಂದಿನ ಜರ್ನೈಲ್‌ ಸಿಂಗ್‌ ಮತ್ತು ನಾಗರಾಜ್‌ ಪ್ರಕರಣಗಳಲ್ಲಿ, ಬಡ್ತಿ ಮೀಸಲಿಗೆ ಸಂಬಂಧಿಸಿದಂತೆ ಮಾನದಂಡ ವಿಧಿಸುವುದಿಲ್ಲ ಎಂದು ಹೇಳಿದ್ದೇವೆ’ ಎಂದಿತು.
 

Follow Us:
Download App:
  • android
  • ios