ತಾನು ಮುಳುಗಿದ್ರೂ ಭಕ್ತನನ್ನು ಮುಳುಗಿಸದೆ ಬದುಕಿಸಿದ ಗಣಪ: ಒಂದೂವರೆ ದಿನದ ಬಳಿಕ ಪತ್ತೆಯಾದ ಬಾಲಕ

13 ವರ್ಷದ ಬಾಲಕ ಲಖನ್ ಮತ್ತು ಅವನ ಸಹೋದರ ಸಮುದ್ರದಲ್ಲಿ ಮುಳುಗಲು ಪ್ರಾರಂಭಿಸಿದರು. ಲಖನ್ ಸಹೋದರನನ್ನು ಜನರು ರಕ್ಷಿಸಿದರೆ, ಆತ ನಾಪತ್ತೆಯಾಗಿದ್ದು, 36 ಗಮಟೆಗಳ ಬಳಿಕ ಪತ್ತೆಯಾಗಿದ್ದಾನೆ. 

miracle 13 year old surat boy who drowned in sea during idol immersion found alive after 36 hours ash

ಸೂರತ್ (ಅಕ್ಟೋಬರ್ 3, 2023): ದೇವರಿಂದ ರಕ್ಷಿಸಲ್ಪಟ್ಟವನನ್ನು ಮತ್ತೆ ಯಾರಿಂದಲೂ ಕೊಲ್ಲಲಾಗದು ಎಂಬ ಮಾತೊಂದಿದೆ. ಅದು ಗುಜರಾತ್‌ನ ಸೂರತ್‌ನಲ್ಲಿ ನಿಜವೆಂದು ಸಾಬೀತಾಗಿದೆ. ಸೂರತ್‌ನ ಬೀಚೊಂದರಲ್ಲಿ ನಡೆದ ಪವಾಡ ಸದೃಶ ಘಟನೆಯಲ್ಲಿ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದ 13 ವರ್ಷದ ಬಾಲಕ 36 ಗಂಟೆಗಳ ಬಳಿಕ ಜೀವಂತವಾಗಿ ಪತ್ತೆಯಾಗಿದ್ದಾನೆ.

ಕಳೆದ ಶುಕ್ರವಾರ ಸೂರತ್‌ನ ನಿವಾಸಿ ಲಖನ್ ದೇವಿಪೂಜಕ್ ಎಂಬ 13 ವರ್ಷದ ಬಾಲಕ ತನ್ನ ಅಜ್ಜಿ ಮತ್ತು ಒಡಹುಟ್ಟಿದವರ ಜತೆ ಬೀಚ್‌ನಲ್ಲಿ ಗಣೇಶ ವಿಸರ್ಜನೆಯನ್ನು ವೀಕ್ಷಿಸಲು ತೆರಳಿದ್ದ. ಅಲ್ಲಿದ್ದಾಗ, ಅವನು ಮತ್ತು ಅವನ ಸಹೋದರ ಈಜಲು ಸಮುದ್ರಕ್ಕೆ ಹೋದರು. ಈ ಸಮಯದಲ್ಲಿ 13 ವರ್ಷದ ಬಾಲಕ ಲಖನ್ ಮತ್ತು ಅವನ ಸಹೋದರ ಸಮುದ್ರದಲ್ಲಿ ಮುಳುಗಲು ಪ್ರಾರಂಭಿಸಿದರು. ಲಖನ್ ಸಹೋದರನನ್ನು ಜನರು ರಕ್ಷಿಸಿದರೆ, ಲಖನ್ ನಾಪತ್ತೆಯಾಗಿದ್ದ.

ಇದನ್ನು ಓದಿ: ಏರ್‌ಪೋರ್ಟ್‌ನಲ್ಲಿ ವೇಗವಾಗಿ ಬಿಎಂಡಬ್ಲ್ಯೂ ಕಾರು ಚಾಲನೆ: ಸಿಐಎಸ್‌ಎಫ್ ಜವಾನನ ಹತ್ಯೆಗೈದ ಹದಿಹರೆಯದ ಯುವಕ

ಅಪ್ಪನ ಮುಖದಲ್ಲಿ ಸಂತಸ
ತೀವ್ರ ಶೋಧ ನಡೆಸಿದರೂ ಬಾಲಕ ಪತ್ತೆಯಾಗಿರಲಿಲ್ಲ. ಮರುದಿನ, ಆಡಳಿತ ಮತ್ತು ಕುಟುಂಬ ಸದಸ್ಯರು ಮತ್ತೆ ಹುಡುಕಾಟವನ್ನು ಮುಂದುವರೆಸಿದರು. ಆಗ ಸಮುದ್ರದಲ್ಲಿ ಮೀನುಗಾರರು ಲಖನ್‌ನನ್ನು ರಕ್ಷಿಸಿದ್ದಾರೆ ಎಂಬ ಸಂದೇಶ ಕುಟುಂಬಕ್ಕೆ ಬಂದಿತ್ತು. ಮಗನ ಶವಕ್ಕಾಗಿ ಹುಡುಕಾಟ ನಡೆಸಿದ ತಂದೆಗೆ ಮಗ ಬದುಕಿರುವ ಮಾಹಿತಿ ಪೊಲೀಸರಿಂದ ಸಿಕ್ಕಿದೆ. ಈ ಸುದ್ದಿಯು ಹೊಸ ಚೈತನ್ಯವನ್ನು ತುಂಬಿತು ಮತ್ತು ತಂದೆಯ ಮುಖದಲ್ಲಿ ಆನಂದಬಾಷ್ಪ ಬಂದಿದೆ ಎಂದು ತಿಳಿದುಬಂದಿದೆ.

ಲಖನ್‌ ಪ್ರಾಣ ಉಳಿದಿದ್ದೀಗೆ..
"ನವದುರ್ಗ" ಎಂಬ ದೋಣಿಯಲ್ಲಿ ಸುಮಾರು ಎಂಟು ಮೀನುಗಾರರು ಸಮುದ್ರಕ್ಕೆ ಹೋಗಿದ್ದರು ಎಂದು ವರದಿಯಾಗಿದೆ. ಅವರು ಸಮುದ್ರದ ಮಧ್ಯದಲ್ಲಿ ಮರದ ಹಲಗೆಯ ಮೇಲೆ ಕುಳಿತಿರುವ ಬಾಲಕನನ್ನು ಗುರುತಿಸಿದರು. ಸಹಾಯಕ್ಕಾಗಿ ಆತ ಕೈಗಳನ್ನು ಎತ್ತಿ ಸಿಗ್ನಲ್‌ ಕೊಡುತ್ತಿದ್ದ. ಮೀನುಗಾರರು ಕೂಡಲೇ ತಮ್ಮ ದೋಣಿಯೊಂದಿಗೆ ಬಾಲಕನ ಬಳಿಗೆ ಬಂದು ದೋಣಿಯೊಳಗೆ ಕರೆತಂದು ವಿಚಾರಿಸಿದರು. ಬಾಲಕ ತನ್ನ ಜೀವಸೆಲೆಯಾಗಿದ್ದ ಗಣೇಶ ಮೂರ್ತಿಯ ಅವಶೇಷಗಳ ಮೇಲೆ ಕುಳಿತಿರುವುದು ಬಾಲಕ ತನ್ನ ಜೀವಸೆಲೆಯಾಗಿದ್ದ ಗಣೇಶ ಮೂರ್ತಿಯ ಅವಶೇಷ ಬಳಿ ಮರದ ಹಲಗೆಯ ಸಹಾಯದಿಂದ ಬಚಾವಾಗಿದ್ದು, 13 ವರ್ಷದ ಬಾಲಕ ಜೀವಂತವಾಗಿ ಬದುಕಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ಗೂಗಲ್‌ ಮ್ಯಾಪ್ ನಂಬ್ಕೊಂಡು ಹೋದ ಇಬ್ಬರು ನೀರುಪಾಲು: ಹುಟ್ಟುಹಬ್ಬದ ದಿನವೇ ಬಲಿಯಾದ ಯುವ ವೈದ್ಯ!

ನಂತರ, ಮೀನುಗಾರರು ಬಾಲಕನ ಬಗ್ಗೆ ತಕ್ಷಣ ಪೊಲೀಸ್‌ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಶುಕ್ರವಾರ ಮಧ್ಯಾಹ್ನ ಸೂರತ್‌ನ ಬೀಚ್‌ನಲ್ಲಿ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದ ಬಾಲಕ ಎಂದು ಪತ್ತೆಯಾಗಿದೆ. ಬಾಲಕ ಸಮುದ್ರದಲ್ಲಿ ಪತ್ತೆಯಾದ ಸ್ಥಳವು ಸಮುದ್ರ ತೀರದಿಂದ ಸುಮಾರು 14 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದೆ. ಹನ್ನೆರಡು ಗಂಟೆಗಳ ನಂತರ, ಭಾನುವಾರ ಬೆಳಗ್ಗೆ, ಮೀನುಗಾರರು ಬಾಲಕನೊಂದಿಗೆ ಬಿಳಿಮೊರಾ ತಲುಪಿ ಪೊಲೀಸರಿಗೆ ಒಪ್ಪಿಸಿದ್ದಾರೆ.

36 ಗಂಟೆಗಳ ನಂತರ ಬದುಕುಳಿಯುವುದು ಪವಾಡವೇ ಸರಿ. ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದ ಲಖನ್ 36 ಗಂಟೆಗಳ ನಂತರ ಧೋಲೈ ಬಂದರ್‌ನಲ್ಲಿ ಪತ್ತೆಯಾಗಿದ್ದಾರೆ. ನವಸಾರಿ ಆಸ್ಪತ್ರೆಯಲ್ಲಿ ಅವರ ಪ್ರಾಥಮಿಕ ವೈದ್ಯಕೀಯ ಪರೀಕ್ಷೆಯು ಆತನ ಯೋಗಕ್ಷೇಮವನ್ನು ದೃಢಪಡಿಸಿತು. ICU ನಲ್ಲಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ 24 ಗಂಟೆಗಳ ತೀವ್ರ ನಿಗಾದ ನಂತರ, ಅವನು ತಮ್ಮ ಕುಟುಂಬದೊಂದಿಗೆ ಮತ್ತೆ ಸೇರಿಕೊಂಡಿದ್ದಾನೆ. ದೇವರು ಕಾಪಾಡಿದವನನ್ನು ಕೊಲ್ಲಲು ಸಾಧ್ಯವಿಲ್ಲ ಎಂಬ ಮಾತನ್ನು ಈ ಘಟನೆಯು ನಿಜವಾಗಿಯೂ ಪುನರುಚ್ಚರಿಸುತ್ತದೆ.

ಇದನ್ನು ಓದಿ: ಮೋಸ್ಟ್‌ ವಾಂಟೆಡ್‌ ಪಟ್ಟಿಯಲ್ಲಿರೋ ಐಸಿಸ್‌ ಉಗ್ರ ಬಂಧನ: ದೆಹಲಿ ಪೊಲೀಸರ ಕಾರ್ಯಾಚರಣೆ

Latest Videos
Follow Us:
Download App:
  • android
  • ios