Asianet Suvarna News Asianet Suvarna News

ಗೂಗಲ್‌ ಮ್ಯಾಪ್ ನಂಬ್ಕೊಂಡು ಹೋದ ಇಬ್ಬರು ನೀರುಪಾಲು: ಹುಟ್ಟುಹಬ್ಬದ ದಿನವೇ ಬಲಿಯಾದ ಯುವ ವೈದ್ಯ!

ಕಾರಿನಲ್ಲಿದ್ದ ಅದ್ವೈತ್ (29) ಹಾಗೂ ಅವರ ಸಹೋದ್ಯೋಗಿ ಡಾ. ಅಜ್ಮಲ್ ಆಸಿಫ್ (29) ಮೃತಪಟ್ಟಿದ್ದಾರೆ. ಇನ್ನು, ಅದೇ ಸಿವಿಕ್‌ ಕಾರಿನಲ್ಲಿದ್ದ ಇತರ ಮೂವರು ಬಚಾವಾಗಿದ್ದು, ಬಳಿಕ ಅವರನ್ನು ರಕ್ಷಿಸಲಾಗಿದೆ

google maps gps misguides 2 young doctors to death in kerala s ernakulam ash
Author
First Published Oct 2, 2023, 4:49 PM IST

ಕೊಚ್ಚಿ (ಅಕ್ಟೋಬರ್ 2, 2023): ಕತ್ತಲು, ಜೋರು ಮಳೆ ಮತ್ತು ಅಪರಿಚಿತ ರಸ್ತೆ. ಈ ಹಿನ್ನೆಲೆ  ಶನಿವಾರ ಮಧ್ಯರಾತ್ರಿ ಹೋಂಡಾ ಸಿವಿಕ್‌ ಕಾರು ಓಡಿಸುತ್ತಿದ್ದ ಡಾ. ಅದ್ವೈತ್‌ ಗೂಗಲ್‌ ಮ್ಯಾಪ್‌ ಆನ್‌ ಮಾಡಿದ್ದಾರೆ. ಶೀಘ್ರದಲ್ಲೇ ಅವರು ಜಲಾವೃತವಾದ ರಸ್ತೆಗೆ ಬಂದಿದ್ದಾರೆ. ಆದರೂ, ಗೂಗಲ್‌ ಮ್ಯಾಪ್‌ ನೇರವಾಗಿ ಮುಂದಕ್ಕೆ ತೋರಿಸಿದಾಗ, ಅವರು ಮುಂದಕ್ಕೆ ಹೋಗ್ತಿದ್ದಂತೆ ಕಾರು ನೀರಿನಲ್ಲಿ ಮುಳುಗಿದೆ.

ಅದು ರಸ್ತೆಯಾಗಿರದೆ ನದಿ ಆಗಿದ್ದು, ಅದರ ಅರವಿಲ್ಲದೆ ಮುಂದಕ್ಕೆ ಹೋದ ಕಾರಣ ಕಾರು ಮುಳುಗತೊಡಗಿತು. ಕಾರಿನಲ್ಲಿದ್ದ ಅದ್ವೈತ್ (29) ಹಾಗೂ ಅವರ ಸಹೋದ್ಯೋಗಿ ಡಾ. ಅಜ್ಮಲ್ ಆಸಿಫ್ (29) ಮೃತಪಟ್ಟಿದ್ದಾರೆ. ಇನ್ನು, ಅದೇ ಸಿವಿಕ್‌ ಕಾರಿನಲ್ಲಿದ್ದ ಇತರ ಮೂವರು ಬಚಾವಾಗಿದ್ದು, ಬಳಿಕ ಅವರನ್ನು ರಕ್ಷಿಸಲಾಗಿದೆ. ಕೇರಳದ ಎರ್ನಾಕುಲಂ ಜಿಲ್ಲೆಯ ಗೋತುರುತ್ ಪ್ರದೇಶದಲ್ಲಿ ಭಾನುವಾರ ಮಧ್ಯರಾತ್ರಿ 12:30ಕ್ಕೆ ಈ ಘಟನೆ ನಡೆದಿದೆ. 

ಇದನ್ನು ಓದಿ: ಮೋಸ್ಟ್‌ ವಾಂಟೆಡ್‌ ಪಟ್ಟಿಯಲ್ಲಿರೋ ಐಸಿಸ್‌ ಉಗ್ರ ಬಂಧನ: ದೆಹಲಿ ಪೊಲೀಸರ ಕಾರ್ಯಾಚರಣೆ

ಇನ್ನು, ಡಾ. ಅದ್ವೈತ್ ಶನಿವಾರ 29 ನೇ ವರ್ಷಕ್ಕೆ ಕಾಲಿಟ್ಟಿದ್ದರು ಮತ್ತು ಅವರಲ್ಲಿ ಐವರು ಕೊಚ್ಚಿಯಿಂದ ಕೊಡುಂಗಲ್ಲೂರಿಗೆ ಹಿಂತಿರುಗುತ್ತಿದ್ದರು. ಅಲ್ಲಿ ಅವರು ಹುಟ್ಟುಹಬ್ಬದ ಶಾಪಿಂಗ್‌ಗೆ ಹೋಗಿದ್ದರು ಎಂದು ತಿಳಿದುಬಂದಿದೆ. ಬದುಕುಳಿದವರಲ್ಲಿ ಒಬ್ಬರಾದ ಡಾ. ಗಾಜಿಕ್ ತಬ್ಸೀರ್ ಅವರು ಜಿಪಿಎಸ್ ರೀರೂಟ್‌ ಆದ ನಂತರ ಅಪಘಾತ ಸಂಭವಿಸಿದೆ ಎಂದು ಬಹಿರಂಗಪಡಿಸಿದರು. “ಹೌದು ನಾವು ಜಿಪಿಎಸ್ ಬಳಸುತ್ತಿದ್ದೆವು. ಆದರೂ, ನಾನು ಚಾಲನೆ ಮಾಡದ ಕಾರಣ, ಇದು ಅಪ್ಲಿಕೇಶನ್‌ನ ತಾಂತ್ರಿಕ ದೋಷವೋ ಅಥವಾ ಮಾನವ ದೋಷವೋ ಎಂದು ಖಚಿತಪಡಿಸಲು ಸಾಧ್ಯವಿಲ್ಲ’’ ಎಂದು ಅವರು ಮಾಧ್ಯಮಕ್ಕೆ ತಿಳಿಸಿದರು.

“ಇದು ಡಾ. ಅದ್ವೈತ್ ಅವರ ಜನ್ಮದಿನವಾಗಿತ್ತು ಮತ್ತು ಇದನ್ನು ಆಚರಿಸಲು ನಮ್ಮ ಆಸ್ಪತ್ರೆಯ ಪುರುಷ ನರ್ಸ್ ಜೊತೆ ವೈದ್ಯರು ಕೊಚ್ಚಿಗೆ ಹೋದರು. ಡಾ. ಅಜ್ಮಲ್ ಅವರ ಭಾವಿ ಪತ್ನಿ ಕೂಡ ಈ ಆಚರಣೆಯ ಭಾಗವಾಗಿದ್ದರು’’ ಎಂದು ರವಿ ಹೇಳಿದರು. 

ಇದನ್ನೂ ಓದಿ: ಕೇರಳ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ ಜಿಹಾದಿ ಕೃತ್ಯ: ಎನ್‌ಐಎ ಚಾರ್ಜ್‌ಶೀಟ್

ಮುಂಗಾರಿನ ಸಮಯದಲ್ಲಿ GPS ಅಲ್ಗಾರಿದಮ್ ಕಡಿಮೆ ಟ್ರಾಫಿಕ್ ಇರುವ ರಸ್ತೆಗಳಿಗೆ ಚಾಲಕರಿಗೆ ಮಾರ್ಗದರ್ಶನ ನೀಡುತ್ತದೆ. ಆದರೆ ಕಡಿಮೆ ಜನನಿಬಿಡ ರಸ್ತೆಗಳು ಸುರಕ್ಷಿತವಾಗಿರಬೇಕಿಲ್ಲ ಎಂದು ತಜ್ಞರು ಹೇಳುತ್ತಾರೆ. “ಅಲ್ಲದೆ, ನಕ್ಷೆಯಲ್ಲಿ ಪ್ರಯಾಣದ ವಿಧಾನವನ್ನು ಆಯ್ಕೆ ಮಾಡಲು  ಬೈಕ್ ಹೋಗುವ ದಾರಿಯಲ್ಲಿ ನಾಲ್ಕು ಚಕ್ರದ ವಾಹನಗಳು ಹೋಗುವುದಿಲ್ಲ ಎಂದು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು’’ ಎಂದು ತಜ್ಞರು ಹೇಳಿದರು.

ಡಾ. ಅಜ್ಮಲ್ ತ್ರಿಶೂರ್ ಜಿಲ್ಲೆಯವರು ಮತ್ತು ಡಾ. ಅದ್ವೈತ್ ಕೊಲ್ಲಂನವರು. ಇನ್ನೊಂದೆಡೆ, ಜಿಸ್ಮನ್ ಮತ್ತು ತಮನ್ನಾ, ಜೊತೆಗೆ ಕ್ರಾಫ್ಟ್ ಆಸ್ಪತ್ರೆಯ ಹೃದ್ರೋಗ ವಿಭಾಗದಲ್ಲಿ ಕೆಲಸ ಮಾಡುವ ಡಾ. ಥಬ್ಸೀರ್ ಎಂಬ ಮೂವರನ್ನು ಕೊಚ್ಚಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದ್ವೈತ್ ಪಾರ್ಥಿವ ಶರೀರವನ್ನು ಕಲಮಸ್ಸೆರಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು ಮತ್ತು ಡಾ. ಅಜ್ಮಲ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತ್ರಿಶೂರ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: 40,000 ರೂ. ಗೂ ಕಡಿಮೆ ದರದಲ್ಲಿ ಐಫೋನ್‌ ಖರೀದಿಸ್ಬೇಕಾ? ಹಾಗಾದ್ರೆ ಇಲ್ಲಿದೆ ಸೂಪರ್ ಆಫರ್‌!

Follow Us:
Download App:
  • android
  • ios