ನವದೆಹಲಿ[ಜ.18]: ನೇಣು ಶಿಕ್ಷೆ ತಪ್ಪಿಸಿಕೊಳ್ಳಲು ಅಥವಾ ಮುಂದೂಡಲು ಒಂದಿಲ್ಲೊಂದು ತಂತ್ರ ಹೂಡುತ್ತಿರುವ ನಿರ್ಭಯಾ ಗ್ಯಾಂಗ್‌ರೇಪ್‌ ಹಾಗೂ ಕೊಲೆ ಪ್ರಕರಣದ ಆರೋಪಿಗಳು ಈಗ ಮತ್ತೊಂದು ದಾಳ ಉರುಳಿಸಿದ್ದಾರೆ. ದೋಷಿಗಳಲ್ಲಿ ಒಬ್ಬನಾದ ಪವನ್‌ ಗುಪ್ತಾ, ‘ನಿರ್ಭಯಾ ಅತ್ಯಾಚಾರ ನಡೆದಾಗ ನಾನು ಬಾಲಕನಾಗಿದ್ದೆ’ ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ.

ಯೋಗ್ಯರಲ್ಲ ನೀವು ಬದುಕಲು: ಫೆ.1ರಂದು ಹತ್ಯಾಚಾರಿಗಳಿಗೆ ಗಲ್ಲು!

‘ನನ್ನನ್ನು ಬಾಲಾಪರಾಧಿ ಎಂದು ಪರಿಗಣಿಸಿ ಎಂದು ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್‌ ತಿರಸ್ಕಾರ ಮಾಡಿದೆ. ದಿಲ್ಲಿ ಹೈಕೋರ್ಟ್‌ ಆದೇಶ ತಿರಸ್ಕರಿಸಿ ನನ್ನನ್ನು ಬಾಲಾಪರಾಧಿ ಎಂದು ಪರಿಗಣಿಸಬೇಕು’ ಎಂದು ಪವನ್‌ ಶುಕ್ರವಾರ ಮನವಿ ಮಾಡಿದ್ದಾನೆ.

ಬಾಲಾಪರಾಧಿಗಳಿಗೆ ಕೇವಲ 3 ವರ್ಷ ಜೈಲು ಶಿಕ್ಷೆಗೆ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಗಲ್ಲಿನಿಂದ ಪಾರಾಗಲು ಪವನ್‌ ಈ ತಂತ್ರ ಹೆಣೆದಿದ್ದಾನೆ. ಇದೇ ಪ್ರಕರಣದ ಬಾಲಾಪರಾಧಿಯೊಬ್ಬ ಈಗಾಗಲೇ ಜೈಲುಶಿಕ್ಷೆ ಪೂರೈಸಿ ಬಿಡುಗಡೆ ಹೊಂದಿರುವುದು ಇಲ್ಲಿ ಗಮನಾರ್ಹ.

ಫೆ.1ರಂದೂ ಗಲ್ಲು ಶಿಕ್ಷೆ ಅನುಮಾನ, 3 ದೋಷಿಗಳ ಮುಂದಿವೆ ಇನ್ನೂ ಹಲವು ಅವಕಾಶ!