ಛತ್ತೀಸ್‌ಗಢದ ಸಚಿವರೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಬೀಡಿ ಸೇದಿದ್ದಲ್ಲದೇ, ಆದಿವಾಸಿ ವ್ಯಕ್ತಿಗೆ ಹೇಗೆ ಸೇದಬೇಕು ಎಂಬುದನ್ನು ಕಲಿಸುತ್ತಿರುವ ವಿಡಿಯೋ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ರಾಯಪುರ: ಛತ್ತೀಸ್‌ಗಢದ ಸಚಿವರೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಬೀಡಿ ಸೇದಿದ್ದಲ್ಲದೇ, ಆದಿವಾಸಿ ವ್ಯಕ್ತಿಗೆ ಹೇಗೆ ಸೇದಬೇಕು ಎಂಬುದನ್ನು ಕಲಿಸುತ್ತಿರುವ ವಿಡಿಯೋ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ವಿಡಿಯೋದಲ್ಲಿ ಕವಾಸಿ ಲಖಮಾ ಎಂಬ ಸಚಿವರು ಬಸ್ತರ್ ಸಮೀಪ ಗ್ರಾಮವೊಂದರಲ್ಲಿ ತಮ್ಮ ಬೆಂಗಾವಲಿನ ಜೊತೆ ಬೀಡಿ ಸೇದುತ್ತಾ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಆಸುಪಾಸಿನಲ್ಲಿ ಇದ್ದ ಬುಡಕಟ್ಟು ಜನರನ್ನು ತಮ್ಮ ಸಮೀಪಕ್ಕೆ ಕರೆದು ‘ಬೀಡಿಯ ಹೊಗೆಯನ್ನು ಬಾಯಿಯಿಂದ ಒಳಗೆ ತೆಗೆದುಕೊಂಡು ಮೂಗಿನಿಂದ ಹೊರಗೆ ಬಿಡಬೇಕು’ ಎಂದು ಹೇಳಿಕೊಡುತ್ತಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜನರಿಂದ ಭಾರಿ ಆಕ್ರೋಶ ಕಾರಣವಾಗಿದೆ.
ಟಿಕೆಟ್ ಇಲ್ದೆ ವಂದೇ ಭಾರತ್ ರೈಲು ಹತ್ತಿದ: ಟಾಯ್ಲೆಟ್ ಒಳಗೆ ಬೀಡಿ ಸೇದಿ ತಗ್ಲಾಕ್ಕೊಂಡ ಭೂಪ!
