ರಾಜಸ್ಥಾನ ರಾಜ್ಯದ ಎಸ್‌.ಪ್ರವೀಣ್‌ ಕುಮಾರ್‌ ಬಂಧಿತರಾಗಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಂಗಳವಾರ ಮುಂಜಾನೆ ಆಕಾಸ್‌ ಏರ್‌ಲೈನ್ಸ್‌ನಲ್ಲಿ ಪ್ರವೀಣ್‌ ಈ ಕೃತ್ಯ ಎಸಗಿದ್ದ. ಬಳಿಕ ಎಸ್‌ಎನ್‌ವಿ ವೈಮಾನಿಕ ಸಂಸ್ಥೆಯ ಅಧಿಕಾರಿ ವಿಜಯ್‌ ತಲ್ಲೂರು ನೀಡಿದ ದೂರಿನ ಮೇರೆಗೆ ಪ್ರವೀಣ್‌ನನ್ನು ಬಂಧಿಲಾಗಿದೆ. 

ಬೆಂಗಳೂರು(ಮೇ.17): ವಿಮಾನದಲ್ಲಿ ಬೀಡಿ ಸೇದಲು ಯತ್ನಿಸಿದ ಆರೋಪದ ಮೇರೆಗೆ ಕೂಲಿ ಕಾರ್ಮಿಕನೊಬ್ಬನನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ರಾಜಸ್ಥಾನ ರಾಜ್ಯದ ಎಸ್‌.ಪ್ರವೀಣ್‌ ಕುಮಾರ್‌ ಬಂಧಿತರಾಗಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಂಗಳವಾರ ಮುಂಜಾನೆ ಆಕಾಸ್‌ ಏರ್‌ಲೈನ್ಸ್‌ನಲ್ಲಿ ಪ್ರವೀಣ್‌ ಈ ಕೃತ್ಯ ಎಸಗಿದ್ದ. ಬಳಿಕ ಎಸ್‌ಎನ್‌ವಿ ವೈಮಾನಿಕ ಸಂಸ್ಥೆಯ ಅಧಿಕಾರಿ ವಿಜಯ್‌ ತಲ್ಲೂರು ನೀಡಿದ ದೂರಿನ ಮೇರೆಗೆ ಪ್ರವೀಣ್‌ನನ್ನು ಬಂಧಿಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೇಶ್ಯಾವಾಟಿಕೆ ದಂಧೆ: ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಖ್ಯಾತ ನಟಿ ಮತ್ತು ರೂಪದರ್ಶಿ

ರಾಜಸ್ಥಾನದಲ್ಲಿ ಸಣ್ಣಪುಟ್ಟಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಪ್ರವೀಣ್‌, ಬೆಂಗಳೂರಿನಲ್ಲಿ ಸಂಬಂಧಿಯೊಬ್ಬರ ಅಂತ್ಯಸಂಸ್ಕಾರದ ಸಲುವಾಗಿ ಬಂಧುಗಳ ಜತೆಗೆ ಬಂದಿದ್ದ. ಅಂತೆಯೇ ಜೈಪುರದಿಂದ ಆಕಾಸ್‌ ಏರ್‌ಲೈನ್ಸ್‌ ವಿಮಾನದಲ್ಲಿ ಬೆಂಗಳೂರಿಗೆ ಆತ ಹೊರಟಿದ್ದ. ಆಗ ವಿಮಾನದಲ್ಲಿ ಬೀಡಿ ಸೇದಲು ಪ್ರವೀಣ್‌ ಯತ್ನಿಸಿದ್ದಾನೆ. ಕೂಡಲೇ ಆತನ ವರ್ತನೆಗೆ ಆಕ್ಷೇಪಿಸಿದ ವಿಮಾನದ ಸಿಬ್ಬಂದಿ, ಬಳಿಕ ಈ ಬಗ್ಗೆ ಅಧಿಕಾರಿಗಳಿಗೆ ವರದಿ ಮಾಡಿದ್ದಾರೆ. ನಂತರ ಮುಂಜಾನೆ 4 ಗಂಟೆಗೆ ಕೆಐಎಗೆ ಬಂದಿಳಿದ ಪ್ರವೀಣ್‌ನನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ವಿವರಿಸಿದ್ದಾರೆ.