Asianet Suvarna News Asianet Suvarna News

ಬುಲೆಟ್ ಅಲ್ದೆ ಬಿರಿಯಾನಿ ಕೊಡ್ಬೇಕಾ?: ‘ಗೋಲಿ ಮಾರೋ’ ಹೇಳಿಕೆ ಬೆಂಬಲಿಸಿದ ಸಿಟಿ ರವಿ!

ದೇಶ ವಿರೋಧಿಗಳಿಗೆ ಗುಂಡಿಕ್ಕಿ  ಎಂದಿದ್ದ ಕೇಂದ್ರ ಸಚಿವ| ಅನುರಾಗ್ ಠಾಕೂರ್ ಹೇಳಿಕೆ ಬೆಂಬಲಿಸಿದ ಸಿಟಿ ರವಿ| ದೇಶ ವಿರೋಧಿಗಳಿಗೆ ಇನ್ನೇನು ಬಿರಿಯಾನಿ ಕೊಡ್ಬೇಕಾ ಎಂದು ಕೇಳಿದ ಪ್ರವಾಸೋದ್ಯಮ ಸಚಿವ| ಐ ಸ್ಟ್ಯಾಂಡ್ ವಿತ್ ಅನುರಾಗ್ ಠಾಕೂರ್ ಎಂದ ಸಿಟಿ ರವಿ|

Minister CT Ravi Rush To Support Union Minister Anurag Thakur Goli Maaro Comment
Author
Bengaluru, First Published Jan 29, 2020, 1:28 PM IST
  • Facebook
  • Twitter
  • Whatsapp

ಬೆಂಗಳೂರು(ಜ.29): ದೇಶ ವಿರೋಧಿಗಳಿಗೆ ಗುಂಡಿಕ್ಕಿ ಎಂಬ ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿಕೆಯನ್ನು ಪ್ರವಾಸೋದ್ಯಮ ಸಚಿವ ಸಿಟಿ ರವಿ ಬೆಂಬಲಿಸಿದ್ದಾರೆ.

ದೇಶದ ವಿರೋಧಿಗಳಿಗೆ ಬುಲೆಟ್ ಅಲ್ಲದೇ ಇನ್ನೇನು ಬಿರಿಯಾನಿ ಕೊಡಬೇಕೇ ಎಂದು ಸಿಟಿ ರವಿ ಪ್ರಶ್ನಿಸಿದ್ದು, ಅನುರಾಗ್ ಠಾಕೂರ್ ಹೇಳಿಕೆಯಲ್ಲಿ ತಪ್ಪಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಟಿ ರವಿ, ದೇಶದ್ರೋಹಿಗಳ ವಿರುದ್ಧ ಹೇಳಿಕೆ ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರನ್ನು ಖಂಡಿಸುವವರು ಭಯೋತ್ಪಾದಕರಾದ ಅಜ್ಮಲ್ ಕಸಬ್, ಯಾಕುಬ್ ಮೆಮನ್ ಸಾವನ್ನು ವಿರೋಧಿಸುವವರು ಎಂದರ್ಥ ಎಂದು ಹೇಳಿದ್ದಾರೆ. 

ಟುಕ್ಡೆ ಟುಕ್ಡೆ ಗ್ಯಾಂಗ್ ಸೇರಿಕೊಂಡು ಸಿಎಎ ವಿರುದ್ಧ ಅಪಪ್ರಚಾರ ನಡೆಸುವವರ ವಿರುದ್ಧ ನುರಾಗ್ ಠಾಕೂರ್ ಸರಿಯಾದ ಹೇಳಿಕೆಯನ್ನೇ ನೀಡಿದ್ದಾರೆ ಎಂದು ಸಿಟಿ ರವಿ ಅಭಿಪ್ರಾಯಪಟ್ಟಿದ್ದಾರೆ.

ದೇಶ ವಿರೋಧಿಗಳಿಗೆ ಬುಲೆಟ್ ಕೊಡಬೇಕು ಬಿರಿಯಾನಿ ಅಲ್ಲ ಎಂದು ‘ಐ ಸ್ಟ್ಯಾಂಡ್ ವಿತ್ ಅನುರಾಗ್ ಠಾಕೂರ್’ ಎಂದು ಹ್ಯಾಶ್ ಟ್ಯಾಗ್ ಬರೆದು ಸಿಟಿ ತವಿ  ಟ್ವೀಟ್ ಮಾಡಿದ್ದಾರೆ.

ಸಿಎಎ ವಿರೋಧಿಗಳಿಗೆ ‘ಗೋಲಿ ಮಾರೋ’ ಎಂದ ಕೇಂದ್ರ ಸಚಿವ!

ದೆಹಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ನುರಾಗ್ ಠಾಕೂರ್, ದೇಶ ವಿರೋಧಿಗಳಿಗೆ ಗೋಲಿ ಮಾರೋ ಎಂದು ಹೇಳಿಕೆ ನೀಡಿದ್ದರು. ಸದ್ಯ ಚುನಾವಣಾ ಆಯೋಗ ಅನುರಾಗ್ ಠಾಕೂರ್ ಅವರಿಗೆ ನೊಟೀಸ್ ಜಾರಿ ಮಾಡಿದೆ.

Follow Us:
Download App:
  • android
  • ios