Asianet Suvarna News Asianet Suvarna News

ಭಾರತೀಯ ಯೋಧರಿಗೆ ಬೆಂಗಳೂರು ಜಾಕೆಟ್‌?

* ‘ಆತ್ಮನಿರ್ಭರ ಭಾರತ’ದ ಅಡಿ ಸ್ವದೇಶಿ ಸಮವಸ್ತ್ರಕ್ಕೆ ಆದ್ಯತೆ

* ಭಾರತೀಯ ಯೋಧರಿಗೆ ಬೆಂಗಳೂರು ಜಾಕೆಟ್‌?

* ಬೆಂಗಳೂರು ಕಂಪನಿಗೆ ಭೇಟಿ ನೀಡಿ ಜ| ರಾವತ್‌ ಮಾತುಕತೆ

* ಸೇನೆಗಾಗಿ ವಿದೇಶದಿಂದ ಸಮವಸ್ತ್ರ ಆಮದು ಇನ್ನಿಲ್ಲ

Military seeks Indian partners for clothing and equipment needs pod
Author
Bangalore, First Published Jun 27, 2021, 8:14 AM IST

ನವದೆಹಲಿ(ಜೂ.27): ಸ್ವದೇಶಿ ಮಂತ್ರ ಜಪಿಸುತ್ತಿರುವ ಭಾರತೀಯ ಸೇನೆಯು ಯೋಧರಿಗೆ ಬೇಕಾಗಿರುವ ಸ್ಲೀಪಿಂಗ್‌ ಬ್ಯಾಗ್‌, ಗುರುತು ಸಿಗದಂತೆ ಮರೆಮಾಚುವ (ಕ್ಯಾಪೋಫ್ಲೇಜ್‌) ಟೆಂಟ್‌ ಹಾಗೂ ಜಾಕೆಟ್‌ಗಳನ್ನು ದೇಶೀಯವಾಗಿಯೇ ಖರೀದಿಸಲು ಮುಂದಾಗಿದೆ.

ಈ ಸಂಬಂಧ ಸೇನಾ ಸಶಸ್ತ್ರಪಡೆಗಳ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ಅವರು ಬೆಂಗಳೂರಿನ ಕಂಪನಿಯೊಂದಕ್ಕೆ ಭೇಟಿ ನೀಡಿ, ಈ ಎಲ್ಲ ಉತ್ಪನ್ನಗಳನ್ನು ಪೂರೈಸಲು ಸಾಧ್ಯವೇ ಎಂದು ವಿಚಾರಿಸಿಕೊಂಡು ಹೋಗಿದ್ದಾರೆ.

ಭಾರತೀಯ ಸೇನೆಯು ಹಲವು ಮಿಲಿಟರಿ ಉಪಕರಣಗಳನ್ನು ದೇಶೀಯವಾಗಿಯೇ ಖರೀದಿಸಲು ಉದ್ದೇಶಿಸಿದೆ. ಆದರೆ ಸಿಯಾಚಿನ್‌ ಯೋಧರಿಗೆ ಬೇಕಾದ ಗ್ಲೋವ್‌್ಸ ಮ್ಯಾನ್ಮಾರ್‌ ಕಂಪನಿಯಿಂದ, ಸ್ಲೀಪಿಂಗ್‌ ಬ್ಯಾಗ್‌ ಶ್ರೀಲಂಕಾದಿಂದ ಬರುತ್ತಿದೆ. ವಿಶೇಷವೆಂದರೆ, ಕಾನ್ಪುರದ ಕಂಪನಿಯೊಂದು ಇಸ್ರೇಲ್‌ ಸೇನೆಗೆ ಮಿಲಿಟರಿ ಬೂಟ್‌ ಸರಬರಾಜು ಮಾಡುತ್ತಿದೆ. ಆದರೆ ಭಾರತ ತನ್ನ ಯೋಧರಿಗೆ ಇಟಲಿಯಿಂದ ಬೂಟುಗಳನ್ನು ತರಿಸಿಕೊಳ್ಳುತ್ತಿದೆ.

ಸೇನೆಗೆ ವಿವಿಧ ಉತ್ಪನ್ನಗಳನ್ನು ಪೂರೈಸಲು ದೇಶೀಯ ಕಂಪನಿಗಳಿಗೆ ಹಲವು ಷರತ್ತುಗಳು ಅಡ್ಡಿಯಾಗಿವೆ. ಉದಾಹರಣೆಗೆ ಮಳೆಯಿಂದ ರಕ್ಷಣೆ ನೀಡುವಂತಹ ಜಾಕೆಟ್‌ ಪೂರೈಸಬೇಕು ಎಂದು ಸೇನೆ ಹೇಳುತ್ತದೆ. ಆದರೆ ಸಿಯಾಚಿನ್‌ನಲ್ಲಿ ಉಷ್ಣಾಂಶ ಶೂನ್ಯಕ್ಕಿಂತ ಕಡಿಮೆ ಇರುವುದರಿಂದ ಅಲ್ಲಿ ಮಳೆಯೇ ಬರುವುದಿಲ್ಲ.

ಸೇನಾ ಸಮವಸ್ತ್ರ ಉದ್ಯಮ 200ರಿಂದ 400 ಕೋಟಿ ರು. ಬೆಲೆ ಬಾಳುತ್ತದೆ. ವಿದೇಶಿ ಕಂಪನಿಗಳು ಯಾವ ಗುಣಮಟ್ಟದಲ್ಲಿ ಉತ್ಪನ್ನ ಸರಬರಾಜು ಮಾಡುತ್ತವೆಯೋ ಅದೇ ಗುಣಮಟ್ಟದಲ್ಲಿ ಭಾರತೀಯ ಕಂಪನಿಗಳು ಪೂರೈಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ವಲಯದಲ್ಲಿ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ಇದೆ. ವಿದೇಶದಿಂದ ಆಮದು ಮಾಡಿಕೊಳ್ಳುವ ಬದಲು ಆ ಕಂಪನಿಗಳಿಗೇ ಭಾರತದಲ್ಲೇ ಘಟಕ ಸ್ಥಾಪನೆ ಮಾಡುವಂತೆ ಸರ್ಕಾರ ಸೂಚಿಸಬಹುದಾಗಿದೆ. ಇದರಿಂದ ಸ್ಥಳೀಯ ಜವಳಿ ಹಾಗೂ ಚರ್ಮೋದ್ಯಮಕ್ಕೆ ಉತ್ತೇಜನ ಸಿಗುತ್ತದೆ ಎಂದಿದ್ದಾರೆ.

Follow Us:
Download App:
  • android
  • ios