ಸಿಕರ್(ಏ.23)‌: ಲಾಕ್‌ಡೌನ್‌ ಪರಿಣಾಮ ಇಲ್ಲಿನ ಶಾಲೆಯೊಂದರಲ್ಲಿ ಕ್ವಾರಂಟೈನ್‌ಗೆ ತುತ್ತಾಗಿದ್ದ ವಲಸೆ ಕಾರ್ಮಿಕರ ತಂಡವೊಂದು, ವಿರಾಮದ ಸಮಯವನ್ನು ಶಾಲೆಗೆ ಬಣ್ಣ ಬಳಿಯಲು, ಸ್ವಚ್ಛಗೊಳಿಸಲು ಬಳಸಿಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಸಿಕರ್‌ನ ಎರಡು ಸರ್ಕಾರಿ ಶಾಲೆಗಳಲ್ಲಿ 54 ಕಾರ್ಮಿಕರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಈ ವೇಳೆ ಕಾರ್ಮಿಕರು ಅಕ್ಕಪಕ್ಕದ ಪ್ರದೇಶಗಳಿಂದ ಸುಣ್ಣ ಬಣ್ಣ ತರಿಸಿಕೊಂಡು ಶಾಲೆಯ ಗೋಡೆಗೆ ಬಳಿದು, ಹೊಸ ರೂಪ ನೀಡಿದ್ದಾರೆ.

ಕೊರೋನಾದ ನಿರ್ವಹಣೆ: ಮೋದಿ ವಿಶ್ವ ನಂ.1!

ಅಲ್ಲದೆ ಸಣ್ಣಪುಟ್ಟರಿಪೇರಿ ಮಾಡಿ ಎಲ್ಲರಿಂದ ಸೈ ಅನ್ನಿಸಿಕೊಂಡಿದ್ದಾರೆ. ಕಾರ್ಮಿಕರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.