Asianet Suvarna News Asianet Suvarna News

ವಲಸಿಗ ಕಾರ್ಮಿಕರ 5400 ಸೈಕಲ್‌ ಹರಾಜು: 21 ಲಕ್ಷ ರು. ಆದಾಯ

* ಲಾಕ್‌ಡೌನ್‌ ವೇಳೆ ನಗರದಲ್ಲಿ ಬಿಟ್ಟು ಹೋಗಿದ್ದ 5400 ವಲಸಿಗ ಕಾರ್ಮಿಕರ ಸೈಕಲ್‌

* ಕಾರ್ಮಿಕರ ಸೈಕಲ್‌ಗಳನ್ನು ಹರಾಜು ಹಾಕಿದ ಜಿಲ್ಲಾಡಳಿತ

* ಕಾರ್ಮಿಕರ 5400 ಸೈಕಲ್‌ ಹರಾಜು: 21 ಲಕ್ಷ ರು. ಆದಾಯ

Migrant labourers unclaimed bicycles auctioned for rs 21 lakh in UP Saharanpur pod
Author
Bangalore, First Published Jun 6, 2022, 6:58 AM IST

ಸಹಾರನ್‌ಪುರ (ಜೂ.06): ಲಾಕ್‌ಡೌನ್‌ ವೇಳೆ ನಗರದಲ್ಲಿ ಬಿಟ್ಟು ಹೋಗಿದ್ದ 5400 ವಲಸಿಗ ಕಾರ್ಮಿಕರ ಸೈಕಲ್‌ಗಳನ್ನು ಸಹಾರನ್‌ಪುರ ಜಿಲ್ಲಾಡಳಿತ ಶನಿವಾರ ಹರಾಜು ಹಾಕಿದೆ. ಇದರಿಂದ ಸರ್ಕಾರಕ್ಕೆ 21 ಲಕ್ಷ ರು. ಆದಾಯ ಬಂದಿದೆ.

ಲಾಕ್‌ಡೌನ್‌ ಸಮಯದಲ್ಲಿ ಸುಮಾರು 25,000 ವಲಸೆ ಕಾರ್ಮಿಕರು ಬಿಹಾರ, ಉತ್ತರ ಪ್ರದೇಶ, ಹರಿಯಾಣ, ಹಿಮಾಚಲ್‌ ಪ್ರದೇಶ ಮತ್ತು ಉತ್ತರಾಖಂಡಗೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ಅವರನ್ನು ತಡೆದು ಸಹಾರನ್‌ಪುರದಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ನಂತರ ಕಾರ್ಮಿಕರನ್ನು ಬಸ್‌ ಮೂಲಕ ಅವರ ಊರಿಗೆ ತಲುಪಿಸಲಾಗಿತ್ತು.

ಆಡಳಿತ ಮಂಡಳಿ ಸೈಕಲ್‌ ಮರಳಿ ಪಡೆಯಲು ಕಾರ್ಮಿಕರಿಗೆ ಚೀಟಿ (ಟೋಕನ್‌) ನೀಡಿತ್ತು. ಅದರಲ್ಲಿ 14,600 ಕಾರ್ಮಿಕರು ಸುರಾನ್‌ಪುರಗೆ ಮರಳಿ, ಸೈಕಲ್‌ ಪಡೆದಿದ್ದರು. ಬಾಕಿ 5400 ಸೈಕಲ್‌ 2 ವರ್ಷದಿಂದ ಅಲ್ಲೇ ಉಳಿದಿದ್ದ ಕಾರಣ ಹರಾಜು ಹಾಕಲು ನಿರ್ಧರಿಸಲಾಯಿತು ಎಂದು ಉಪವಿಭಾಗ ಮ್ಯಾಜೀಸ್ಪ್ರೇಟ್‌ ಅಧಿಕಾರಿ ಕಿನ್‌ಷುಕ್‌ ಶ್ರೀವ್ಸಾತವ್‌ ತಿಳಿಸಿದ್ದಾರೆ.

ಇಂದು ನಿವೇಶನಗಳ ಇ-ಹರಾಜು

ನಗರಾಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿಪಡಿಸಿರುವ ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಪಕ್ಕದಲ್ಲಿ ಎಂಎಸ್‌ಕೆ ಮಿಲ್‌ ವಾಣಿಜ್ಯ ಬಡಾವಣೆಯಲ್ಲಿನ ವಿವಿಧ ಅಳತೆಯ ಒಟ್ಟು 44 ವಾಣಿಜ್ಯ ನಿವೇಶನಗಳನ್ನು ಇ-ಹರಾಜು ಮಾಡಲು ಪ್ರಕಟಣೆ ಹೊರಡಿಸಿದೆ.

ಪಾರ್ಕಿಂಗ್‌ ವ್ಯವಸ್ಥೆ, ಸಿ.ಸಿ.ರಸ್ತೆ, ಡಾಂಬರೀಕಣ ರಸ್ತೆ, ಚರಂಡಿ ನಿರ್ಮಾಣ, ಫುಟ್‌ಪಾತ್‌, ದಾರಿದೀಪ ಇತ್ಯಾದಿ ಸೌಲಭ್ಯ ಹೊಂದಿರುವ ಈ ವಾಣಿಜ್ಯ ಬಡಾವಣೆಯಲ್ಲಿ ಪ್ರಾಧಿಕಾರವು ಹೊಸದಾಗಿ ಮತ್ತು ವೈಶಿಷ್ಟ್ಯಪೂರ್ಣ ಮಾರುಕಟ್ಟೆನಿರ್ಮಿಸುವ ಉದ್ದೇಶ ಹೊಂದಿದೆ ಎಂದು ಪ್ರಾಧಿಕಾರದ ಆಯುಕ್ತ ದಯಾನಂದ ಪಾಟೀಲ ತಿಳಿಸಿದ್ದಾರೆ.

ಇ-ಹರಾಜು ಪ್ರಕ್ರಿಯೆ ಜೂ.6ರಂದು ಬೆಳಿಗ್ಗೆ 11 ಗಂಟೆಯಿಂದ ಪ್ರಾರಂಭವಾಗಲಿದೆ. ಇ-ಹರಾಜಿನಲ್ಲಿ ಭಾಗವಹಿಸಲು ಇಚ್ಛಿಸುವವರು ಪೊ›ಸೆಸಿಂಗ್‌ ಶುಲ್ಕ ಮತ್ತು 1163.00 ಚದುರ ಅಡಿ ಮೇಲ್ಪಟ್ಟನಿವೇಶನಗಳಿಗೆ 2 ಲಕ್ಷ ರು. ಮತ್ತು 1162.50 ಚದುರ ಅಡಿ ವರೆಗಿನ ನಿವೇಶನಗಳಿಗೆ 1 ಲಕ್ಷ ರು. ಇಎಂಡಿ ಮೊತ್ತವನ್ನು ಇದೇ ಜೂ.24ರ ಸಾಯಂಕಾಲ 6 ಗಂಟೆ ಒಳಗಾಗಿ ಪಾವತಿಸಿ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ. ಬಿಡ್‌ ಮಾಡುವ ಕೊನೆಯ ದಿನಾಂಕ ಜೂ.28ರ ಸಾಯಂಕಾಲ 6 ಗಂಟೆಯಾಗಿರುತ್ತದೆ. ಬಿಡ್‌ ಮುಕ್ತಾಯ ಸಮಯದ ನಂತದ ಡೆಲ್ಟಾಟೈಮ್‌ 5 ನಿಮಿಷದ ಅವಧಿಯಾಗಿರಲಿದೆ. ಕನಿಷ್ಟಬಿಡ್‌ ಬದಲಾವಣೆ ಮೊತ್ತ 25 ಸಾವಿರ ರು. ಇರಲಿದೆ.

Follow Us:
Download App:
  • android
  • ios