Asianet Suvarna News Asianet Suvarna News

ಪುತ್ರನ ಮೃತದೇಹ ಸ್ವೀಕರಿಸಲು ತೆರಳಿದ ಯೋಧನ ಪೋಷಕರಿಗೆ ವಿಮಾನದಲ್ಲಿ ಅಗೌರವ!

ರಾಜಸ್ಥಾನದ ಬಾರ್ಮರ್‌ನಲ್ಲಿ ಸಂಭವಿಸಿದ ವಾಯುಪಡೆ ವಿಮಾನ ಪತನದಲ್ಲಿ ಇಬ್ಬರು ಧೀರ ಪೈಲೆಟ್ ಮೃತಪಟ್ಟಿದ್ದಾರೆ. ಇದರಲ್ಲಿ ವಿಂಗ್ ಕಮಾಂಡರ್  ಎಂ ರಾಣಾ ಹಾಗೂ ಲೆಫ್ಟಿನೆಂಟ್ ಆದಿತ್ಯ ಬಾಲ್ ಹುತಾತ್ಮರಾಗಿದ್ದರು. ಪುತ್ರನ ಮೃತದೇಹ ಸ್ವೀಕರಿಸಲು ದೆಹಲಿಯಿಂದ ಜೋಧಪುರಕ್ಕೆ ವಿಮಾನದ ಮೂಲಕ ತೆರಳಿದ ಬಾಲ್ ಪೋಷಕರು ಹಾಗೂ ಕುಟುಂಬಸ್ಥರನ್ನು ವಿಮಾನದಲ್ಲಿ ಪ್ರಯಾಣಿಕರು ಹೇಗೆ ನಡೆಸಿಕೊಂಡರು ಅನ್ನೋ ಮಾಹಿತಿ ಬಹಿರಂಗವಾಗಿದೆ.
 

Mig 21 fighter jet crash passenger disrespect Flt Lt Advitiya Bal family during Jodhpur travel to receive body ckm
Author
Bengaluru, First Published Jul 30, 2022, 4:59 PM IST

ಜೋಧಪುರ(ಜು.30): ಭಾರತೀಯ ವಾಯುಸೇನೆಯ ಮಿಗ್-21 ಯುದ್ಧವಿಮಾನ ಘಟನೆಗೆ ಇಡೀ ದೇಶವೇ ಮರುಗಿದೆ. ಗುರುವಾರ(ಜು.28) ರಾಜಸ್ಥಾನದ ಬಾರ್ಮರ್‌ನಲ್ಲಿ ನಡೆದ ಈ ಘಟನೆಯಲ್ಲಿ ಇಬ್ಬರು ಪೈಲೈಟ್ ಮೃತಪಟ್ಟಿದ್ದಾರೆ.  ಮೃತ ಪೈಲೆಟ್ ಕುಟುಂಬಸ್ಥರಿಗೆ ಪ್ರಧಾನಿ ಮೋದಿ ಸೇರಿದಂತೆ ಸಮಸ್ತ ಭಾರತೀಯರು ಸಂತಾಪ ಸೂಚಿಸಿದ್ದಾರೆ. ಆದರೆ ಪುತ್ರನ ಮೃತದೇಹ ಸ್ವೀಕರಿಸಲು ದೆಹಲಿಯಿಂದ ಜೋಧಪುರಕ್ಕೆ ತೆರಳಿದ ಪೋಷಕರು ಹಾಗೂ ಕುಟುಂಬಸ್ಥರನ್ನು ಕೆಲ ಸಹ ಪ್ರಯಾಣಿಕರು ಅಗೌರವದಿಂದ ನಡೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ವಿಂಗ್ ಕಮಾಂಡರ್  ಎಂ ರಾಣಾ ಹಾಗೂ ಲೆಫ್ಟಿನೆಂಟ್ ಆದಿತ್ಯ ಬಾಲ್ ಯುದ್ಧ ವಿಮಾನ ಪತನದಲ್ಲಿ ಮೃತಪಟ್ಟಿದ್ದಾರೆ. ಇದರಲ್ಲಿ ಆದಿತ್ಯ ಬಾಲ್ ಪೋಷಕರು ತಮ್ಮ ಪುತ್ರನ ಮೃತದೇಹ ಸ್ವೀಕರಿಸಲು ದೆಹೆಲಿಯಿಂದ ಇಂಡಿಗೋ ವಿಮಾನದಲ್ಲಿ ಜೋಧಪುರಕ್ಕೆ ತೆರಳಿದ್ದಾರೆ. ಈ ವೇಳೆ ಇಂಡಿಗೋ ಪೈಲೆಟ್ ವಿನಂತಿಯನ್ನೂ ಧಿಕ್ಕರಿಸಿ ಲೆಫ್ಟಿನೆಂಟ್ ಕ್ಯಾಪ್ಟನ್ ಅದಿತ್ಯ ಬಾಲ್ ಪೋಷಕರು ಹಾಗು ಕುಟಂಬಸ್ಥರಿಗೆ ಅಗೌರವ ತೋರಿದ ಘಟನೆ ನಡೆದಿದೆ.

ರಾಜಸ್ಥಾನದ ಬಾಢ್ಮೇರ್‌ ಜಿಲ್ಲೆಯಲ್ಲಿ ವಾಯುಪಡೆಗೆ ಸೇರಿದ ಮಿಗ್‌-21 ಯುದ್ಧವಿಮಾನ ಗುರುವಾರ ಪತನಗೊಂಡಿದೆ. ದುರ್ಘಟನೆ ಭೀಮ್ಡಾ ಗ್ರಾಮದ ಬಳಿ ಸಂಭವಿಸಿದ್ದು ಈ ವಿಮಾನದಲ್ಲಿದ್ದ ವಾಯುಪಡೆಯ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದರು.  ಜೋಧಪುರ ವಾಯುನೆಲೆಯಲ್ಲಿ ಪೈಲೆಟ್‌ಗಳಿ ಸೇನಾಧಿಕಾರಿಗಳು ಅಂತಿಮ ನಮನ ಸಲ್ಲಿಸಿದ್ದರು. ಬಳಿಕ ಯೋಧರ ಮತದೇಹಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ಇದಕ್ಕಾಗಿ ಆದಿತ್ಯ ಬಾಲ್ ಕುಟುಂಬಸ್ಥರು ಅತೀವ ದುಃಖದಿಂದಲೇ ಇಂಡಿಗೋ ವಿಮಾನ ಹತ್ತಿದ್ದರು. 

ರಾಜಸ್ಥಾನದ ಬಾರ್ಮರ್‌ನಲ್ಲಿ ವಾಯುಪಡೆಯ ಮಿಗ್-21 ಜೆಟ್ ಪತನ: ಇಬ್ಬರು ಪೈಲಟ್‌ ಸಾವು

ವಿಮಾನ ಜೋಧಪುರದಲ್ಲಿ ಇಳಿಯುತ್ತಿದ್ದಂತೆ ಇಂಡಿಗೋ ಪೈಲೆಟ್ ಮಹತ್ವದ ವಿನಂತಿ ಮಾಡಿಕೊಂಡಿದ್ದಾರೆ. ಈ ವಿಮಾನದಲ್ಲಿ ಜೋಧಪುರದಲ್ಲಿ ಮಡಿದ ವಾಯುಸೇನಾ ಕ್ಯಾಪ್ಟನ್ ಆದಿತ್ಯ ಬಾಲ್ ಪೋಷಕರಿದ್ದಾರೆ. ಹೀಗಾಗಿ ಎಲ್ಲಾ ಪ್ರಯಾಣಿಕರು ಆದಿತ್ಯ ಬಾಲ್ ಕುಟುಂಬಸ್ಥರು ನಿರ್ಗಮಿಸುವ ವರೆಗೆ ತಾಳ್ಮೆಯಿಂದ ಇರಬೇಕು. ಅವರು ಯಾವುದೇ ಅಡೆಚಣೆ ಇಲ್ಲದೆ ನಿರ್ಗಮಿಸಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಆದರೆ ಕೆಲ ಪ್ರಯಾಣಿಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ನಾವು ಇಳಿಯುತ್ತೇವೆ. ನಮಗೂ ಅಷ್ಟೇ ಮುಖ್ಯ ಕಾರ್ಯಗಳಿವೆ ಎಂದೆಲ್ಲಾ ಹೇಳಿದ್ದಾರೆ. ಇದರಿಂದ ಇತರ ಪ್ರಯಾಣಿಕರ ಆಕ್ರೋಶ ಹೆಚ್ಚಾಗಿದೆ. ಹುತಾತ್ಮ ಯೋಧನ ಕುಟುಂಬಸ್ಥರು ನಿರ್ಗಮಿಸುವವರೆಗೆ ಒಂದು ಅಕ್ಷರ ಮಾತನಾಡದಂತೆ ತಾಕೀತು ಮಾಡಿದ ಘಟನೆಯೂ ನಡೆದಿದೆ 

ಇದೇ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಆರ್ಥಿಕ ಅಪರಾಧಗಳು ಮತ್ತು ಕಾರ್ಪೊರೇಟ್ ಆಡಳಿತ ವಕೀಲ ಶೆರ್ಬೀರ್ ಪನಾಗ್ ಈ ಮಾಹಿತಿ ಬಹಿರಂಗ ಪಡಿಸಿದ್ದಾರೆ.ಭಾರತೀಯ ಸೇನೆಯ ನಿವೃತ್ತಿ ಲೆಫ್ಟಿನೆಂಟ್ ಜನರಲ್ ಪುತ್ರನಾಗಿರುವ  ಪನಾಗ್, ಈ ಘಟನೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಮತ್ತು ಕೆಲ ಪ್ರಯಾಣಿಕರು ಸಿಡಿದೆದ್ದ ಪ್ರಯಾಣಿಕರನ್ನು ಸುಮ್ಮನಾಗಿಸುವ ಪ್ರಯತ್ನ ಮಾಡಿದೆವು. ಆದರೆ ಯೋಧನ ಕುಟುಂಬಕ್ಕೆ ಈ ರೀತಿಯ ಅವಮಾನ, ಅಗೌರವ ತೋರುವುದು ಸರಿಯಲ್ಲ ಎಂದು ಪನಾಗ್ ಹೇಳಿದ್ದಾರೆ.

 

 

ಮಿಗ್-21 ಬಳಕೆಗೆ ಯೋಗ್ಯವಾಗಿರಲಿಲ್ವಾ ? ಮೃತ ಪೈಲಟ್ ತಂದೆ ಹೇಳಿದ್ದಿಷ್ಟು

1963ರಲ್ಲಿ ಭಾರತೀಯ ವಾಯುಪಡೆಗೆ ರಷ್ಯಾದ ಮಿಗ್‌ ವಿಮಾನಗಳನ್ನು ಸೇರ್ಪಡೆ ಮಾಡಿಕೊಳ್ಳಲಾಯಿತು. ನಂತರ ಈವರೆಗೆ 874 ಮಿಗ್‌ ವಿಮಾನಗಳನ್ನು ಭಾರತ ಬಳಸಿಕೊಂಡಿದೆ. ಮಿಗ್ ವಿಮಾನ ಭಾರತದ ಪಾಲಿಗೆ ಆತಂಕ ತಂದಿದ್ದೆ ಹೆಚ್ಚ.  ಈ ವಿಮಾನಗಳು 400 ಅಪಘಾತಗಳನ್ನು ಕಂಡಿದ್ದು, 200ಕ್ಕೂ ಹೆಚ್ಚು ಪೈಲಟ್‌ಗಳು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಬೇರೆಲ್ಲಾ ಯುದ್ಧವಿಮಾನಗಳಿಗಿಂತ ಮಿಗ್‌ ವಿಮಾನಗಳೇ ಹೆಚ್ಚಿರುವುದರಿಂದ ಅವುಗಳ ಅಪಘಾತದ ಸಂಖ್ಯೆಯೂ ಸಹಜವಾಗಿಯೇ ಹೆಚ್ಚಾಗಿರುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.ವಾಯುಸೇನೆ ಮಿಗ್ ವಿಮಾನಗಳು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಿರುವುದರಿಂದ ಪತನದ ಪ್ರಮಾಣ ಹೆಚ್ಚಾಗಿದೆ ಅನ್ನೋದು ವಾದ.   ಆದರೂ ಮಿಗ್‌ ವಿಮಾನಗಳು ಪದೇಪದೇ ಪತನಗೊಂಡು ಪೈಲಟ್‌ಗಳು ಸಾವನ್ನಪ್ಪುತ್ತಿದ್ದುದರಿಂದ ಇವುಗಳನ್ನು ‘ಹಾರಾಡುವ ಶವಪೆಟ್ಟಿಗೆ’ ಎಂದು ಕರೆಯಲಾಗುತ್ತಿತ್ತು. ಜು.28ರಂದು ಕೂಡ ರಾಜಸ್ಥಾನದ ಬಾರ್ಮೇರ್‌ನಲ್ಲಿ ಮಿಗ್‌ ವಿಮಾನ ಪತನಗೊಂಡು ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದರು.

Follow Us:
Download App:
  • android
  • ios