ಮೀರತ್(ಮೇ.22): 50 ವರ್ಷದ ರೈತ ಸತೇಂದ್ರ ಚೌಧರಿ ಮನೆಗೆ ಮಗನ ಸಾವಿಗೆ ಸಂತಾಪ ಸೂಚಿಸಲು ಜನರ ಮುಂದೆ ತನ್ನ ಮಗನ ಟೀಶರ್ಟ್ ಧರಿಸಿ ನಿಂತಿದ್ದರು. ಹೌದು ಇವರು ಇತ್ತೀಚೆಗೆ ಕ್ರಾಷ್ ಆದ ಮಿಗ್-21ರ ಪೈಲಟ್ ಅಭಿನವ್ ಚೌಧರಿ(29) ಅವರ ವಯಸ್ಸಾದ ತಂದೆ.

ಅಭಿನವ್‌ಗೆ ರಾಷ್ಟ್ರೀಯ ಮಿಲಿಟರಿ ಕಾಲೇಜಿನಲ್ಲಿ ಶೂಟಿಂಗ್ ಪ್ರಾಕ್ಟೀಸ್‌ನಲ್ಲಿ ಧರಿಸುತ್ತಿದ್ದ ಟೀಶರ್ಟ್ ಎಂದರೆ ಅಚ್ಚುಮೆಚ್ಚು. ನನಗೇನೇನಿತ್ತೋ ಎಲ್ಲವನ್ನೂ ಕಳೆದುಕೊಂಡೆ ಎನ್ನುತ್ತಾರೆ ಸತೇಂದ್ರ. ಬಳಕೆ ಅವಧಿ ಮೀರಿದ ಏರ್‌ಕ್ರಾಫ್ಟ್ ಬಳಕೆಯನ್ನು ಸರ್ಕಾರ ನಿಲ್ಲಿಸಬೇಕು. ನಾನು ನನ್ನ ಮಗನ ಕಳೆದುಕೊಂಡೆ, ಬೇರೆಯವರೂ ಇದೇ ರೀತಿ ತಮ್ಮ ಮಗನ ಕಳೆದುಕೊಳ್ಳದಿರಲಿ ಎಂದಿದ್ದಾರೆ ವೃದ್ಧ ತಂದೆ.

ಪಂಜಾಬ್‌ನಲ್ಲಿ ಮಿಗ್-21 ಕ್ರಾಷ್: IAF ಪೈಲಟ್ ಹುತಾತ್ಮ

ಅಭಿನವ್‌ಗೆ ತಂದೆ, ತಾಯಿ, ಪತ್ನಿ ಸೋನಿಕಾ ಚೌಧರಿ, ಸಹೋದರಿ ಇದ್ದರು. 2019 ಡಿಸೆಂಬರ್‌ನಲ್ಲಷ್ಟೇ ಇವರ ವಿವಾಹವಾಗಿತ್ತು. ಮೇ 15ರಂದು ರಜೆಯ ಮೇಲೆ ಮನೆಗೆ ಬರುವವರಿದ್ದರು. ಆದರೆ ಕೊರೋನಾ ಕಾರಣ ಸದ್ಯ ಮಗನನ್ನು ಬರದಂತೆ ಹೇಳಿದ್ದರು ಪೋಷಕರು.

ವೈದ್ಯರಾಗಿರುವ ಅಭಿನವ್ ಕಸಿನ್ ಅನುಜ್(39) ಎಲ್ಲ ಮಿಗ್-21ನ್ನು ಬಿಸಾನ್‌ಗಳನ್ನಾಗಿ ಬದಲಾಯಿಸಲಾಗುತ್ತದೆ.  ಕಳೆದ ಕೆಲವು ವರ್ಷಗಳಲ್ಲಿ 12ರಿಂದ 14 ಮಿಗ್-21 ಕ್ರಾಷ್ ಆಗಿವೆ. ಯಾಕೆ ಮಿಗ್-21 ಮಾತ್ರ ಕ್ರಾಷ್ ಆಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಪಶ್ಚಿಮ ವಿಭಾಗದಲ್ಲಿ ಕಳೆದ ರಾತ್ರಿ ಏರ್‌ಕ್ರಾಫ್ಟ್ ಕ್ರಾಷ್ ಆಗಿದೆ. ಗಂಭೀರ ಗಾಯಗೊಂಡ ಪೈಲಟ್ ಅಭಿವನ್ ಚೌಧರಿ ಹುತಾತ್ಮರಾಗಿದ್ದಾರೆ. ಐಎಎಫ್‌ ಮೃತರ ಆತ್ಮಕ್ಕೆ ಶಾಂತಿ ಕೋರುತ್ತದೆ ಎಂದು ಐಎಎಫ್ ಟ್ವೀಟ್ ಮಾಡಿತ್ತು.