Asianet Suvarna News Asianet Suvarna News

ಪ್ಲಾಸ್ಟಿಕ್ಕಿಂದ ತಯಾರಿಸಿದ ರಾಷ್ಟ್ರಧ್ವಜ ಬಳಸಬೇಡಿ: ರಾಜ್ಯಗಳಿಗೆ ಸೂಚನೆ!

* ಮುಂಬರುವ ಸ್ವಾತಂತ್ರ್ಯ ದಿನಾಚರಣೆ ವೇಳೆ ಪ್ಲಾಸ್ಟಿಕ್‌ನಿಂದ ಮಾಡಿರುವ ರಾಷ್ಟ್ರಧ್ವಜಗಳು ಬಳಕೆಯಾಗದಂತೆ ಎಚ್ಚರ

* ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ

MHA tells states to stop usage of tricolour made of plastic pod
Author
Bangalore, First Published Aug 9, 2021, 11:21 AM IST
  • Facebook
  • Twitter
  • Whatsapp

ನವದೆಹಲಿ(ಆ.09): ಮುಂಬರುವ ಸ್ವಾತಂತ್ರ್ಯ ದಿನಾಚರಣೆ ವೇಳೆ ಪ್ಲಾಸ್ಟಿಕ್‌ನಿಂದ ಮಾಡಿರುವ ರಾಷ್ಟ್ರಧ್ವಜಗಳು ಬಳಕೆಯಾಗದಂತೆ ಎಚ್ಚರವಹಿಸುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೇಳಿದೆ.

ಪ್ಲಾಸ್ಟಿಕ್‌ ಜೈವಿಕವಾಗಿ ವಿಘಟನೆಗೆ ಒಳಗಾಗುವುದಿಲ್ಲ ಹಾಗಾಗಿ ಪ್ಲಾಸ್ಟಿಕ್‌ ಧ್ವಜಗಳ ಬದಲು ಕಾಗದದಿಂದ ಮಾಡಿದ ಧ್ವಜಗಳನ್ನು ಬಳಸುವಂತೆ ಸೂಚನೆ ನೀಡಿದೆ. ‘ರಾಷ್ಟ್ರಧ್ವಜದ ಕುರಿತು ಎಲ್ಲರಿಗೂ ಪ್ರೀತಿ ಮತ್ತು ಗೌರವ ಭಾವನೆಗಳು ಇರಬೇಕು. ಕೆಲವೊಮ್ಮೆ ರಾಷ್ಟ್ರಧ್ವಜ ಬಳಕೆಯ ಕುರಿತಂತೆ ಅರಿವಿನ ಕೊರತೆ ಕಾಣುತ್ತದೆ.

ಸ್ವಾತಂತ್ರ್ಯ ದಿನಾಚರಣೆಯಂದು ನಡೆಯುವ ಆಟೋಟಗಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್‌ನಿಂದ ತಯಾರಿಸಿದ ಧ್ವಜಗಳ ಬಳಕೆಯನ್ನು ನಿಯಂತ್ರಿಸಬೇಕು. ಅದರ ಬದಲಿಗೆ ಧ್ವಜ ಸಂಹಿತೆ 2002ರಂತೆ ತಯಾರಿಸಲ್ಪಟ್ಟಪೇಪರ್‌ ಬಾವುಟಗಳನ್ನು ಬಳಸಿ. ಕಾರ್ಯಕ್ರಮದ ನಂತರ ಧ್ವಜಗಳನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸಿಡುವಂತೆ ಜನರಲ್ಲಿ ಅರಿವುಮೂಡಿಸಿ’ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ

Follow Us:
Download App:
  • android
  • ios