ದೆಹಲಿಗೆ ವಾಪಸಾದ ಕೇಂದ್ರ ಗೃಹ ಸಚಿವಾಲಯದ 3 ಸದಸ್ಯರ ತನಿಖಾ ಸಮಿತಿಪ್ರತಿಭಟನಾನಿರತ 150 ವ್ಯಕ್ತಿಗಳ ಮೇಲೆ ಫಿರೋಜ್ ಪುರ ಠಾಣೆಯಲ್ಲಿ ಎಫ್ಐಆರ್ಕೇಂದ್ರ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿದ ಪಂಜಾಬ್ ಸರ್ಕಾರ
ನವದೆಹಲಿ (ಜ. 7): ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi) ಹಾಗೂ ಅವರ ಬೆಂಗಾವಲು ಪಡೆಗೆ ಭದ್ರತಾ ಲೋಪ (PM security breach) ಪ್ರಕರಣ ಪಂಜಾಬ್ ಸರ್ಕಾರಕ್ಕೆ (Punjab government) ಉರುಳಾಗುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ. ಶುಕ್ರವಾರ ಕೇಂದ್ರ ಗೃಹ ಸಚಿವಾಲಯದ (Ministry of Home Affairs) ಮೂವರು ಸದಸ್ಯರ ಸಮಿತಿ ಬಟಿಂಡಾ (Bathinda) ಹಾಗೂ ಫಿರೋಜ್ ಪುರಕ್ಕೆ (Ferozepur)ಭೇಟಿ ನೀಡಿ ತನಿಕೆ ನಡೆಸಿದ್ದು, ಬಟಿಂಡಾ ಎಸ್ಎಸ್ ಪಿಗೆ (Bathinda SSP) ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಅದಲ್ಲದೇ, ಉತ್ತರ ಒಂದೇ ದಿನದಲ್ಲಿ ಬರಬೇಕು ಎಂದು ಕಟ್ಟಪ್ಪಣೆ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಬಹುತೇಕ ಖಚಿತವಾಗಿದೆ. ಇನ್ನೊಂದೆಡೆ, ಪಂಜಾಬ್ ಪೊಲೀಸ್ ಮುಖ್ಯಸ್ಥ ಸೇರಿದಂತೆ 11 ಮಂದಿಗೆ ಸಮನ್ಸ್ ಜಾರಿ ಮಾಡಿದ್ದು ವಿಚಾರಣೆಗೆ ದೆಹಲಿಗೆ ಆಗಮಿಸುವಂತೆ ಸೂಚನೆ ನೀಡಿದೆ. ಅತ್ತ, ಪಂಜಾಬ್ ಸರ್ಕಾರ ಕೂಡ ಕೇಂದ್ರ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿದ್ದು, ಫಿರೋಜ್ ಪುರ ಮೇಲ್ಸೇತುವೆ ಬಳಿ ಪ್ರತಿಭಟನೆ ನಡೆಸುತ್ತಿದ್ದ 150 ಗುರುತುರಹಿತ ವ್ಯಕ್ತಿಗಳ ಮೆಲೆ ಎಫ್ ಐಆರ್ ದಾಖಲಿಸಿದ್ದಾಗಿ ಹೇಳಿದೆ.
ಪ್ರಧಾನಮಂತ್ರಿ ಭದ್ರತೆಯಲ್ಲಿ ಪಂಜಾಬ್ ಸರ್ಕಾರ ಮಾಡಿದ್ದು ಗಂಭೀರ ಪ್ರಮಾದ ಎನ್ನುವುದನ್ನು ಸುಪ್ರೀಂ ಕೋರ್ಟ್ (Supreem Court) ಸಹಿತ ಒಪ್ಪಿಕೊಂಡಿದ್ದು, ಈ ಕುರಿತಾದ ಎಲ್ಲಾ ದಾಖಲೆಗಳನ್ನು ಭದ್ರವಾಗಿ ಇಡುವಂತೆ ಸೂಚನೆ ನೀಡಿದೆ. ಗುರುವಾರ ಇದರ ಕುರಿತಾಗಿ ಕೇಂದ್ರ ಗೃಹ ಸಚಿವಾಲಯ ಮೂವರು ಕ್ಯಾಬಿನೆಟ್ ಸೆಕ್ರೆಟರಿಯೇಟ್ ಭದ್ರತಾ ವಿಭಾಗದ ಕಾರ್ಯದರ್ಶಿ ಸುಧೀರ್ ಕುಮಾರ್ ಸಕ್ಸೇನಾ ನೇತೃತ್ವದಲ್ಲಿ ಗುಪ್ತಚರ ಬ್ಯೂರೋದ ಜಂಟಿ ನಿರ್ದೇಶಕ ಬಲ್ಬೀರ್ ಸಿಂಗ್ ಹಾಗೂ ಎಸ್ ಪಿಜಿ ಐಜಿ ಎಸ್ ಸುರೇಶ್ ಇರುವ ತ್ರಿಸದಸ್ಯ ಸಮಿತಿಯನ್ನು ರಚಿಸಿತ್ತು.
ಬಟಿಂಡಾ, ಫಿರೋಜ್ ಪುರದಲ್ಲಿ ತನಿಖೆ ಮಾಡಿದ ಸಮಿತಿ, ಬಟಿಂಡಾ ಎಸ್ಎಸ್ ಪಿ ಅಜಯ್ ಮಲೂಜಾಗೆ (SSP Ajay Maluja)ಕಠಿಣ ಶಬ್ದಗಳಲ್ಲಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, "ಜನವರಿ 8ರ ಸಂಜೆ 5 ಗಂಟೆಯ ಒಳಗಾಗಿ ನಿಮ್ಮ ಉತ್ತರ ಸಚಿವಾಲಯದಲ್ಲಿ ಇರಬೇಕು. ಇಲ್ಲದೇ ಇದ್ದ ಹಂತದಲ್ಲಿ ನಿಮ್ಮಿಂದ ಕೇಳಲು ಏನೂ ಇರುವುದಿಲ್ಲ ಹಾಗೂ ನಿಮ್ಮ ವಿರುದ್ಧ ಶಿಸ್ತು ಕ್ರಮದ ಪ್ರಕ್ರಿಯೆ ಆರಂಭವಾಗಲಿದೆ' ಎಂದು ಎಚ್ಚರಿಕೆಯೊಂದಿಗೆ ನೋಟಿಸ್ ನೀಡಿದೆ. ಅದರೊಂದಿಗೆ ಸಮಿತಿಯ ಪಂಜಾಬ್ ಪೊಲೀಸ್ ಮುಖ್ಯಸ್ಥ ಎಸ್. ಚಟ್ಟೋಪಾಧ್ಯಾಯ (Punjab Police chief S Chattopadhyaya) ಹಾಗೂ 12 ಇತರ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಭದ್ರತಾ ಲೋಪದ ಕುರಿತಾಗಿ ಸಮನ್ಸ್ ಜಾರಿ ಮಾಡಿದ್ದು, ದೆಹಲಿಗೆ ವಿಚಾರಣೆಗೆ ಬರುವಂತೆ ಸೂಚನೆ ನೀಡಿದೆ.
PM Modi Security Breach: ಎಲ್ಲಾ ದಾಖಲೆ ಸುರಕ್ಷಿತವಾಗಿಡಲು ಸುಪ್ರಿಂ ಆದೇಶ!
ದೆಹಲಿಗೆ ತೆರಳುವ ಮೊದಲು, ಫಿರೋಜ್‌ಪುರಕ್ಕೆ ತೆರಳಿದ ಎಂಎಚ್ ಎ ತಂಡ, ಪ್ರಧಾನಿ ಮೋದಿ ಭೇಟಿಯ ವೇಳೆ ಕರ್ತವ್ಯದಲ್ಲಿದ್ದ ಪಂಜಾಬ್‌ನ ಡಿಜಿಪಿ ಸೇರಿದಂತೆ ಎಲ್ಲಾ ಅಧಿಕಾರಿಗಳನ್ನು ವಿಚಾರಣೆ ನಡೆಸಿತು. ಫಿರೋಜ್‌ಪುರ ನಿಯಂತ್ರಣ ಕೊಠಡಿಯಲ್ಲಿ ವಿಐಪಿ ಕರ್ತವ್ಯವನ್ನು ಮೇಲ್ವಿಚಾರಣೆ ಮಾಡುವ ಅಧಿಕಾರಿಯನ್ನು ಸಹ ಎಂಎಚ್‌ಎ ತಂಡವು ಪ್ರಶ್ನಿಸಿದೆ.
ಎಚ್ಚರಿಕೆ ನೀಡಿತ್ತು ಗುಪ್ತಚರ ವಿಭಾಗ: ಪ್ರಧಾನಿ ಪಂಜಾಬ್ ಭೇಟಿಯ ವೇಳೆ ಅವರ ಮಾರ್ಗದ ಕುರಿತಾಗಿ ಎಚ್ಚರಿಕೆ ವಹಿಸುವಂತೆ ಸ್ವತಃ ಗುಪ್ತಚರ ಇಲಾಖೆ ಪಂಜಾಬ್ ಸರ್ಕಾರಕ್ಕೆ ಸೂಚನೆ ನೀಡಿತ್ತು ಎನ್ನುವುದು ಬಹಿರಂಗವಾಗಿದೆ. ಮೋದಿ ಪಂಜಾಬ್ ಭೇಟಿಗೆ ಮೂರು ದಿನಗಳ ಮುನ್ನವೇ ಈ ಎಚ್ಚರಿಕೆ ರವಾನೆಯಾಗಿತ್ತು. ಮಾರ್ಗ ಮಧ್ಯದಲ್ಲಿ ಪ್ರತಿಭಟನೆ, ಅಹಿತಕರ ಘಟನೆಗಳಾಗಬಹುದು ಎನ್ನುವ ಎಚ್ಚರಿಕೆಯನ್ನು ನೀಡಲಾಗಿತ್ತು. ಆದರೆ, ಇದಕ್ಕೆ ಪಂಜಾಬ್ ಸರ್ಕಾರದಿಂದ ಯಾವುದೇ ಸ್ಪಂದನೆ ವ್ಯಕ್ತವಾಗಿರಲಿಲ್ಲ.
PM Modi Security Breach ಪ್ರಧಾನಿ ಮೋದಿಗಾಗಿ ಹುಬ್ಬಳ್ಳಿಯಲ್ಲಿ ಮೃತ್ಯುಂಜಯ ಹೋಮ
ರಾಜಕೀಯ ದಾಳ ಮಾಡಿಕೊಳ್ಳಬೇಡಿ: ಪಂಜಾಬ್ ಸರ್ಕಾರದಿಂದ ಪ್ರಧಾನಿ ಭದ್ರತೆಯಲ್ಲಿ ಲೋಪವಾಗಿರುವುದು ನಿಜ. ಇದಕ್ಕೆ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಖಂಡಿತವಾಗಿ ಕ್ರಮ ಕೈಗೊಳ್ಳಿ, ಆದರೆ, ಇದನ್ನೇ ರಾಜಕೀಯ ದಾಳವಾಗಿ ಬಳಸಿಕೊಳ್ಳಬೇಡಿ ಎಂದು ಕಾಂಗ್ರೆಸ್ ನಾಯಕ ಮನೀಷ್ ತಿವಾರಿ (Manish Tiwari) ಹೇಳಿದ್ದಾರೆ.
ಕಾಂಗ್ರೆಸ್ ನಾಯಕರ ಮೌನವೇ ಎಲ್ಲವೂ ಹೇಳುತ್ತಿದೆ: ಭದ್ರತಾ ಲೋಪದ ಪ್ರಕರಣದಲ್ಲಿ ಕಾಂಗ್ರೆಸ್ ನ ಉನ್ನತ ನಾಯಕರುಗಳ ಮೌನವೇ ಎಲ್ಲವೂ ಹೇಳುತ್ತಿದೆ. ಭದ್ರತಾ ಲೋಪದ ಕುರಿತಾಗಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿಯಿಂದ ಯಾಕೆ ಈವರೆಗೂ ಖಂಡನೆ ವ್ಯಕ್ತವಾಗಿಲ್ಲ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ (Union Minister Anurag Thakur) ಪ್ರಶ್ನೆ ಮಾಡಿದ್ದಾರೆ.
