Asianet Suvarna News Asianet Suvarna News

ನಾಗಾಲ್ಯಾಂಡ್‌, ಅರುಣಾಚಲ ಪ್ರದೇಶದ ಕೆಲ ಭಾಗಗಳಲ್ಲಿ AFSPA ಮುಂದುವರಿಕೆ!

ಕೇಂದ್ರ ಗೃಹ ಸಚಿವಾಲಯವು ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶದ ಭಾಗಗಳಲ್ಲಿ 1958 ರ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆಯನ್ನು 6 ತಿಂಗಳವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಗೃಹ ಸಚಿವ ಅಮಿತ್‌ ಶಾ ಈ ಕುರಿತಾಗಿ ಟ್ವೀಟ್‌ ಮಾಡಿದ್ದಾರೆ.
 

MHA extends AFSPA in parts of Nagaland Arunachal for 6 months Amit Shah Tweets san
Author
First Published Mar 25, 2023, 12:52 PM IST

ನವದೆಹಲಿ (ಮಾ.25): ಕೇಂದ್ರ ಗೃಹ ಸಚಿವಾಲಯವು ನಾಗಾಲ್ಯಾಂಡ್‌ ಮತ್ತು ಅರುಣಾಚಲ ಪ್ರದೇಶದ ಭಾಗಗಳಲ್ಲಿ 1958ರ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರಿಗಳು) ಕಾಯಿದೆಯ ಅಡಿಯಲ್ಲಿ ತನ್ನ ಸ್ಥಾನಮಾನವನ್ನು 6 ತಿಂಗಳವರೆಗೆ ವಿಸ್ತರಣೆ ಮಾಡಿದೆ. ಆಸ್ಫಾ ಅಡಿಯಲ್ಲಿ ಈ ಪ್ರದೇಶಗಳನ್ನು ಗೊಂದಲಕ್ಕೆ ಒಳಗಾಗಿರುವ ಪ್ರದೇಶ ಎಂದು ವಿಭಾಗಿಸಲಾಗಿತ್ತು.  ಕೇಂದ್ರ ಗೃಹ ಸಚಿವಾಲಯ (ಎಂಎಚ್‌ಎ) ಎರಡೂ ರಾಜ್ಯಗಳ ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಶೀಲಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಈ ಕುರಿತಾಗಿ ಟ್ವೀಟ್‌ ಮಾಡಿದ್ದಾರೆ. ವಾರಂಟ್ ಇಲ್ಲದೆ ಯಾವುದೇ ವ್ಯಕ್ತಿಯನ್ನು ಬಂಧಿಸಲು, ವಾರಂಟ್ ಇಲ್ಲದೆ ಯಾವುದೇ ವ್ಯಕ್ತಿಯ ಮನೆಯನ್ನು ಪ್ರವೇಶಿಸಲು ಅಥವಾ ಸೋಧ ಕಾರ್ಯ ಮಾಡಲು ಮತ್ತು ಇತರ ಪರಿಶೀಲನೆಗಳನ್ನು ಮಾಡಲು ಆಸ್ಫಾ ಭದ್ರತಾ ಪಡೆಗಳಿಗೆ ಅಧಿಕಾರ ನೀಡುತ್ತದೆ. ಎಂಎಚ್‌ಎ ಅಧಿಸೂಚನೆಯ ಪ್ರಕಾರ, ಕೇಂದ್ರ ಸರ್ಕಾರವು ಆಸ್ಪಾ 1958 ರ ಸೆಕ್ಷನ್ 3 ರ ಮೂಲಕ ನೀಡಲಾದ ಅಧಿಕಾರವನ್ನು ಚಲಾಯಿಸಿ ಅರುಣಾಚಲ ಪ್ರದೇಶದ ಚಾಂಗ್ಲಾಂಗ್, ತಿರಾಪ್ ಮತ್ತು ಲಾಂಗ್ಡಿಂಗ್ ಜಿಲ್ಲೆಗಳು ಮತ್ತು ಅರುಣಾಚಲ ಪ್ರದೇಶದ ನಮ್ಸಾಯಿ ಜಿಲ್ಲೆಯ ನಮ್ಸಾಯಿ ಮತ್ತು ಮಹದೇವಪುರ ಪೊಲೀಸ್ ಠಾಣೆಗಳ ವ್ಯಾಪ್ತಿಯ ಪ್ರದೇಶಗಳನ್ನು ಘೋಷಿಸಿದೆ. 2022ರ ಸೆಪ್ಟೆಂಬರ್ 30 ರಂದು ಅಸ್ಸಾಂ ರಾಜ್ಯದ ಗಡಿಯಲ್ಲಿರುವ ಪ್ರದೇಶವನ್ನು ಗೊಂದಲಕ್ಕೀಡಾದ ಪ್ರದೇಶ ಎಂದು ಘೋಷಿಸಿತ್ತು.

ನಾಗಾಲ್ಯಾಂಡ್‌ನ ಇತರ ಐದು ಜಿಲ್ಲೆಗಳ ಅಡಿಯಲ್ಲಿ ಬರುವ ಎಂಟು ಜಿಲ್ಲೆಗಳು ಮತ್ತು 21 ಪೊಲೀಸ್ ಠಾಣೆ ಪ್ರದೇಶಗಳನ್ನು ಆರು ತಿಂಗಳ ಅವಧಿಗೆ ಏಪ್ರಿಲ್ 1 ರಿಂದ ಸೆಪ್ಟೆಂಬರ್ 30 ರವರೆಗೆ ಜಾರಿಗೆ ಬರುವಂತೆ ಡಿಸ್ಟ್ರಬ್‌ ಏರಿಯಾ ಎಂದು ಘೋಷಿಸಿದ ನಂತರ ಆಸ್ಪಾಅನ್ನು ವಿಸ್ತರಿಸಲಾಗಿದೆ ಎಂದು MHA ಅಧಿಸೂಚನೆ ತಿಳಿಸಿದೆ.  ಹೊಸ ಅಧಿಸೂಚನೆಯ ಮೂಲಕ ಮತ್ತೊಂದು ಪೊಲೀಸ್ ಠಾಣೆ ಪ್ರದೇಶವನ್ನು AFSPA ವ್ಯಾಪ್ತಿಗೆ ತರಲಾಗಿದೆ.

 

ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್‌ ಚೀತಾ ಪತನ, ಇಬ್ಬರು ಪೈಲಟ್‌ಗಳ ಸಾವು!

ಸಶಸ್ತ್ರ ಪಡೆಯ ಸಿಬ್ಬಂದಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುವಂಥ ಪ್ರದೇಶಗಳಲ್ಲಿ ಸೈನಿಕರು ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆಗಾಗಿ ಆಸ್ಪಾ ಅಗತ್ಯವೆಂದು ಸರ್ಕಾರ ಹೇಳಿದೆ. ಪ್ರದೇಶದ ಶಾಂತಿಯನ್ನು ಹಾಳು ಮಾಡಲು ಬಯಸುವ ವ್ಯಕ್ತಿಗಳ ಬಗ್ಗೆ ಅನುಮಾನ ಬಂದಲ್ಲಿ ಯಾವುದೇ ವಾರಂಟ್‌ ಇಲ್ಲದೆ, ಅವರನ್ನು ಬಂಧಿಸಲು ಅವರ ಮನೆಗಳನ್ನು ಶೋಧಿಸಲು ವ್ಯಾಪಕ ಅಧಿಕಾರವನ್ನು ಇದು ಸೇನೆಗೆ ನೀಡುತ್ತದೆ.

ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ, ನಿರ್ಣಯ ಮಂಡಿಸಿದ ಅಮೆರಿಕ

Follow Us:
Download App:
  • android
  • ios