ಮೇರಿ ಮಟ್ಟಿ ಮೇರಿ ದೇಶ್ ಕಾರ್ಯಕ್ರಮ, ಮಣ್ಣಿಗೆ ನಮಸ್ಕರಿಸಿ ಹಣೆಗೆ ತಿಲಕ ಇಟ್ಟ ಪ್ರಧಾನಿ ಮೋದಿ!
ದೆಹಲಿಯಲ್ಲಿ ನಡೆಯುತ್ತಿರುವ ಮೇರಿ ಮಿಟ್ಟಿ ಮೇರಿ ದೇಶ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೋದಿ, ಮಣ್ಣು ಸಮರ್ಪಿಸಿದ್ದಾರೆ. ಈ ವೇಳೆ ಮಣ್ಣು ಮುಟ್ಟಿ ನಮಸ್ಕರಿ ಹಣೆ ತಿಲಕ ಇಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ನವದೆಹಲಿ(ಅ.31) ಮೇರಿ ಮಿಟ್ಟಿ ಮೇರಿ ದೇಶ್(ನನ್ನ ಮಣ್ಣು ನನ್ನ ದೇಶ) ಅಮೃತ ಕಲಶ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ, ಮಣ್ಣನ್ನು ದೇಶಕ್ಕೆ ಸಮರ್ಪಿಸಿದ್ದಾರೆ. ಇದೇ ವೇಳೆ ಮಣ್ಣು ಮುಟ್ಟಿ ನಮಸ್ಕರಿಸಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಮಣ್ಣನ್ನು ತೆಗೆದು ಹಣೆಗೆ ತಿಲಕವಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ದೆಹಲಿಯ ಕರ್ತವ್ಯ ಪತ್ ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೇಶದಲ್ಲಿ ಲಕ್ಷಾಂತರ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಪೂರೈಸಿದ ಆಜಾದಿ ಕಾ ಅಮೃತ ಮಹೋತ್ಸವ್ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಮೇರಿ ಮಿಟ್ಟಿ ಮೇರ್ ದೇಶ್ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಕಳೆದ ಕೆಲ ದಿನಗಳಿಂದ ದೇಶದ ಮೂಲೆ ಮೂಲೆಯಿಂದ ಮಣ್ಣು ಸಂಗ್ರಹ ಮಾಡಿ ದೆಹಲಿ ಕೊಂಡೊಯ್ಯಲಾಗಿತ್ತು. ಇಂದು ಈ ಮಣ್ಣನ್ನು ಇಂದು ಸಮರ್ಪಿಸಲಾಗಿದೆ.
ಇದೇ ವೇಳೆ ಮೋದಿ ಮಣ್ಮು ತೆಗೆದು ಹಣೆಗೆ ತಿಲಕವಿಟ್ಟಿದ್ದಾರೆ.ಹುತಾತ್ಮ ಯೋಧರಿಗೆ ಗೌರವ ಸಮರ್ಪಣಾ ಕಾರ್ಯಕ್ರಮ ಇದಾಗಿದ್ದು, ಈ ಕಾರ್ಯಕ್ರಮಕ್ಕೆ ದೇಶದ ಮೂಲೆ ಮೂಲೆಗಳಿಂದ ಮಣ್ಣು ಸಂಗ್ರಹ ಮಾಡಿ ತರಲಾಗಿದೆ. ಇದೇ ಕಾರ್ಯಕ್ರಮದಲ್ಲಿ ಮೇರಾ ಯುವ ಭಾರತ್ ಪೋರ್ಟಲ್ ಗೂ ಮೋದಿ ಚಾಲನೆ ನೀಡಿದ್ದಾರೆ.
ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತೆತ್ತ ಯೋಧರು ಮತ್ತು ಭಾರತದ ಪರಂಪರೆಯನ್ನು ಉಳಿಸಿ ಬೆಳೆಸಿ ಮುನ್ನಡೆಸಿದ ರಾಜ ಮಹಾರಾಜರ ಬಗ್ಗೆ ಮತ್ತು ದೇಶದ ಸಂಸ್ಕಾರ-ಸಂಸ್ಕೃತಿಯ ಬಗ್ಗೆ ಯುವಕರಲ್ಲಿ ಅರಿವು ಮೂಡಿಸುವ ಸಲುವಾಗಿ ಕೇಂದ್ರ ಸರ್ಕಾರ ಮೇರಿ ಮಾಟಿ ಮೇರಾ ದೇಶ್ ಅಮೃತ ಕಳಶ ಯಾತ್ರೆ ಹಮ್ಮಿಕೊಂಡಿದೆ. ದೆಹಲಿಯಲ್ಲಿ ಕೂಡ ಪ್ರಮುಖ ರಸ್ತೆಯಲ್ಲಿ ಕರ್ತವ್ಯ ಪಥ ಎಂದು ಘೋಷಣೆ ಮಾಡಿ ದೇಶದ 8 ಲಕ್ಷ ಗ್ರಾಮಗಳಿಂದ ಸಸಿ ಮತ್ತು ಮಣ್ಣು ತಂದು ಅಲ್ಲಿ ಸಸಿ ನೆಡುವ ಪುಣ್ಯದ ಕಾರ್ಯ ಮಾಡಲಾಗುತ್ತಿದೆ.
ಮೇರಾ ದೇಶ ಕಾರ್ಯಕ್ರಮದಡಿ ದೇಶದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರ ಸ್ಥಳದಿಂದ ಮಣ್ಣನ್ನು ಶೇಖರಣೆ ಮಾಡಿ ತಂದು ದೆಹಲಿಯಲ್ಲಿ ಹುತಾತ್ಮರ ಉದ್ಯಾನವನ ನಿರ್ಮಾಣ ಮಾಡಲಾಗುತ್ತಿದೆ. ಇದೊಂದು ಶೇಷ್ಠವಾದಂತ ದೇಶಭಕ್ತಿ, ದೇಶ ಪ್ರೇಮದ ಕಾರ್ಯಕ್ರಮವಾಗಿದ್ದು ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರ ಪ್ರತಿ ಗ್ರಾಮದಿಂದ ಮಣ್ಣನ್ನು ಸಂಗ್ರಹಿಸಲಾಗಿದೆ