ತುಂಬಿ ತುಳುಕುತ್ತಿದ್ದ ಮೆಟ್ರೋ ರೈಲಿನಲ್ಲಿ ಇಬ್ಬರು ಪುರುಷರು ಪರಸ್ಪರ ಹೊಡೆದಾಡಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೆಹಲಿ: ರಾಷ್ಟ್ರ ರಾಜಧಾನಿಯ ಮೆಟ್ರೋ ರೈಲು ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತದೆ. ಪ್ರೇಮಿಗಳು ಹೊರ ಪ್ರಪಂಚದ ಗೊಡವೆಯೇ ಮರೆತು ಪರಸ್ಪರ ಚುಂಬಿಸುವುದರಿಂದ ಹಿಡಿದು ಕಾಲು ತಾಗಿಸಿ ಮೆಟ್ರೋದ ಬಾಗಿಲು ಹಾಕದೇ ಕಿಡಿಗೇಡಿತನ ತೋರುವವರೆಗೂ ಈ ಮೆಟ್ರೋದಲ್ಲಿ ನಡೆಯುತ್ತಿರುವ ಅವಾಂತರ ಒಂದೆರಡಲ್ಲ. ದೆಹಲಿ ಮೆಟ್ರೋದಲ್ಲಿ ನಡೆದ ಹಲವು ವಿಲಕ್ಷಣ ಘಟನೆಗಳ ವೀಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದಕ್ಕೀಗ ಹೊಸ ಸೇರ್ಪಡೆ ಈ ಹೊಡೆದಾಟ. ಹೌದು ತುಂಬಿ ತುಳುಕುತ್ತಿದ್ದ ಮೆಟ್ರೋ ರೈಲಿನಲ್ಲಿ ಇಬ್ಬರು ಪುರುಷರು ಪರಸ್ಪರ ಹೊಡೆದಾಡಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬ್ಯಾಗ್ ಧರಿಸಿರುವ ಇಬ್ಬರು ವ್ಯಕ್ತಿಗಳು ತುಂಬಿ ತುಳುಕಿರುವ ಮೆಟ್ರೋದಲ್ಲಿ ಹೊಡೆದಾಡುತ್ತಿದ್ದು, ಈ ವೇಳೆ ಕೆಲವರು ಸಹ ಪ್ರಯಾಣಿಕರು ಅವರಿಬ್ಬರ ನಡುವಿನ ಜಗಳ ಬಿಡಿಸಲು ಮುಂದಾಗಿದ್ದಾರೆ. ಉಳಿದವರು ಈ ಜಗಳ ನೋಡುತ್ತಾ ನಿಂತಿದ್ದಾರೆ. ಇಬ್ಬರು ಒಬ್ಬರಿಗೊಬ್ಬರು ಮುಷ್ಠಿ ಹಿಡಿದು ಗುದ್ದುವುದನ್ನು ಈ ವೀಡಿಯೋದಲ್ಲಿ ಕಾಣಬಹುದಾಗಿದೆ. ಈ ವೀಡಿಯೋವನ್ನು ಸಚಿನ್ ಭಾರದ್ವಾಜ್ ಎಂಬುವವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಡಿಎಂಆರ್‌ಸಿಗೆ ಟ್ಯಾಗ್ ಮಾಡಿದ್ದಾರೆ.
ಇದಕ್ಕೆ ಡಿಎಂಆರ್‌ಸಿ ಪ್ರತಿಕ್ರಿಯಿಸಿದ್ದು, ಮೆಟ್ರೋದಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂದು ನಾವು ವಿನಂತಿಸುತ್ತೇವೆ ಹಾಗೂ ಇತರ ಪ್ರಯಾಣಿಕರು ಈ ರೀತಿಯ ಯಾವುದೇ ಆಕ್ಷೇಪಾರ್ಹ ನಡವಳಿಕೆಯನ್ನು ಗಮನಿಸಿದರೆ ತಕ್ಷಣವೇ ಡಿಎಂಆರ್‌ಸಿ (DMRC) ಸಹಾಯವಾಣಿಗೆ ಕರೆ ಮಾಡಿ ವಿಚಾರ ತಿಳಿಸಬೇಕು. ಜೊತೆಗೆ ಯಾವ ಕಾರಿಡಾರ್ ನಿಲ್ದಾಣ, ಸಮಯ ಎಲ್ಲಾ ವಿವರಗಳನ್ನು ತಿಳಿಸಬೇಕು ಎಂದು ಹೇಳಿದೆ.
ದೆಹಲಿ ಮೆಟ್ರೋದಲ್ಲಿ ಜೋಡಿಯ ಲಿಪ್‌ಲಾಕ್, ಪೋರ್ನ್‌ಹಬ್ ಮಾಡ್ಬಿಡಿ ಎಂದು ಕಿಡಿಕಾರಿದ ನೆಟ್ಟಿಗರು
ದೆಹಲಿ ಮೆಟ್ರೋದಲ್ಲಿ ಹೆಚ್ಚುತ್ತಿರುವ ಅಸಭ್ಯ, ಕೆಲ ವರ್ತನೆಗಳ ಹಿನ್ನೆಲೆಯಲ್ಲಿ ಇವುಗಳನ್ನು ತಡೆಗಟ್ಟುವ ಸಲುವಾಗಿ ದೆಹಲಿ ಮೆಟ್ರೋ ತನ್ನ ಮೆಟ್ರೋ ಜಾಲದುದ್ದಕ್ಕೂ ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ನಿಯೋಜಿಸಿದೆ. ಈ ಭದ್ರತಾ ಸಿಬ್ಬಂದಿ ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ಡಿಎಂಆರ್‌ಸಿಯ ಕಾರ್ಪೊರೇಟ್ ಸಂವಹನಗಳ ಪ್ರಧಾನ ಕಾರ್ಯನಿರ್ವಾಹಕ ನಿರ್ದೇಶಕ ಅನುಜ್ ದಯಾಲ್ (Anuj Dayal) ಹೇಳಿದ್ದಾರೆ. ಇತ್ತ ಈ ವೀಡಿಯೋಗೆ ಸೋಶಿಯಲ್ ಮೀಡಿಯಾ ಬಳಕೆದಾರರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ದೆಹಲಿ ಮೆಟ್ರೋದಲ್ಲಿ ಎಲ್ಲಾ ವಯಸ್ಸಿನವರಿಗೂ ಬೇಕಾದ ಮನೋರಂಜನೆ ಸಿಗುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಕಳೆದ 20 ವರ್ಷಗಳಿಂದ ದೆಹಲಿ ಮೆಟ್ರೋ (Delhi Metro) ರಾಜಧಾನಿಯ (Capital city)ಜನರ ಜೀವನಾಡಿಯಾಗಿದ್ದು, ಲಕ್ಷಾಂತರ ಜನ ದಿನವೂ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಯಾವುದೇ ಟ್ರಾಫಿಕ್ ಇಲ್ಲದೇ ನಿಗದಿತ ಸಮಯಕ್ಕೆ ತಲುಪಬಹುದಾದ ಕಾರಣ ಬಹುತೇಕರು ಮೆಟ್ರೋ ವಾಹನವನ್ನು ಅವಲಂಬಿಸಿದ್ದಾರೆ. ಆದರೆ ಅಲ್ಲಿ ನಡೆಯುವ ಒಂದಲ್ಲ ಒಂದು ಅವಾಂತರಗಳು ಸಾಮಾನ್ಯ ಮೆಟ್ರೋ ಪ್ರಯಾಣಿಕರಿಗೆ ಇರಿಸು ಮುರಿಸು ಉಂಟು ಮಾಡುತ್ತಿದೆ. ಕೆಲವರ ವಿಲಕ್ಷಣ ನಡವಳಿಕೆಗಳು ಪ್ರಯಾಣಿಕರನ್ನು ಗೊಂದಲಕ್ಕೀಡು ಮಾಡಿದರೆ ಮತ್ತೆ ಕೆಲವರು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಸುಮ್ಮನಿರುತ್ತಾರೆ.
ಮೆಟ್ರೋದಲ್ಲಿ ಸ್ಕರ್ಟ್ ಧರಿಸಿ ಬಂದು ಎಲ್ಲರೂ ಕತ್ತು ಕೊಂಕಿಸಿ ನೋಡುವಂತೆ ಮಾಡಿದ ಹುಡುಗರು
ಕೂದಲು ಸ್ಟ್ರೈಟ್ ಮಾಡಿದ ಹುಡುಗಿ
ಕೆಲ ದಿನಗಳ ಹಿಂದೆ ಯುವತಿಯೊಬ್ಬಳು ಮೆಟ್ರೋದಲ್ಲಿ ಕೂದಲು ಸ್ಟ್ರೈಟ್ ಮಾಡುತ್ತಿರುವ ವೀಡಿಯೋವೊಂದು ಇಂಟರ್‌ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದಕ್ಕೂ ಮೊದಲು ಮಹಿಳೆಯರಿಬ್ಬರು ಪರಸ್ಪರ ಹೊಡೆದಾಡುವ ದೃಶ್ಯವೂ ವೈರಲ್ ಆಗಿತ್ತು. ಇಷ್ಟೇ ಅಲ್ಲದೇ ಯುವ ಜೋಡಿಯೊಂದು ಇಹದ ಗೊಡವೆ ಮರೆತು ಮೆಟ್ರೋದಲ್ಲೇ ಚುಂಬಿಸುತ್ತಿರುವ ವೀಡಿಯೋವೋ ವೈರಲ್ ಆಗಿತ್ತು.
