ಹೀಗೂ ಬಳಕೆ ಆಗುತ್ತೆ ಹಳೆ ಸೀರೆ ಹಳೆ ಸೀರೆ ಹರಿದು ಗಟ್ಟಿಯಾದ ಹಗ್ಗ ತಯಾರಿಸಿದರು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಅಮ್ಮನ ಅಜ್ಜಿಯ ಹಳೆಯ ಸೀರೆಗಳಿದ್ದರೆ ಅದನ್ನು ಮನೆಯಲ್ಲಿರುವ ಕಿರಿಯರು ಉಡುವುದು, ಅದರಿಂದ ಲಂಗ ರವಿಕೆ ಚೂಡಿದಾರ್ ಮುಂತಾದ ಬಟ್ಟೆಗಳನ್ನು ಹೊಲಿಸುವುದು. ಮ್ಯಾಟ್ ಮುಂತಾದವುಗಳನ್ನು ತಯಾರಿಸುವುದನ್ನು ನೀವು ನೋಡಿರಬಹುದು. ಆದರೆ ಇಲ್ಲಿಬ್ಬರು ಹಳೆಯ ಸೀರೆಯೊಂದರಲ್ಲಿ ಗಟ್ಟಿಯಾದ ಹಗ್ಗವನ್ನು ತಯಾರಿಸುತ್ತಿದ್ದಾರೆ. ಅದೂ ಕೂಡ ವಿಶೇಷ ತಂತ್ರದ ಮೂಲಕ ಇವರ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಧುನಿಕ ಜಗತ್ತಿನಲ್ಲಿ ಭೂಮಿಯನ್ನು ಮಾಲಿನ್ಯದಿಂದ ರಕ್ಷಿಸುವುದು ಮತ್ತು ಸಂರಕ್ಷಿಸುವುದು ಈ ಸಮಯದ ಅತ್ಯಂತ ಅಗತ್ಯತೆಯಾಗಿದೆ, ಅನೇಕರು ಮರುಬಳಕೆಯ ಧ್ಯೇಯವಾಕ್ಯಕ್ಕೆ ಒತ್ತು ನೀಡುತ್ತಾರೆ. ಜನರು ವಸ್ತುಗಳನ್ನು ಬೇರೆ ಬೇರೆ ರೀತಿಯಲ್ಲಿ ಮರುಬಳಕೆ ಮಾಡಲು ಪ್ರಯತ್ನಿಸುತ್ತಿರುವುದನ್ನು ತೋರಿಸುವ ಹಲವಾರು ವೀಡಿಯೊಗಳು ಇಂಟರ್ನೆಟ್‌ನಲ್ಲಿವೆ. ಭೂಮಿ ಮೇಲೆ ನಿರುಪಯೋಗಿ ತ್ಯಾಜ್ಯವಾಗುವ ಬದಲು ಒಂದು ಮರು ಬಳಕೆಯ ವಸ್ತುವಾದರೆ ನಮಗೂ ನಮ್ಮನ್ನು ಹೊತ್ತಿರುವ ಭೂಮಿಗೂ ಒಳ್ಳೆಯದು. ಹೀಗಾಗಿಯೇ ಇಬ್ಬರು ವ್ಯಕ್ತಿಗಳು ಹಳೆಯದಾದ ಸೀರೆಯೊಂದರಿಂದ ಹಗ್ಗ ತಯಾರಿಸಿದ್ದಾರೆ.
ಕಸದಿಂದ ರಸ ತೆಗೆಯಲಿದೆ ಇಸ್ರೋ: ಸತ್ತ ರಾಕೆಟ್‌ಗಳಿಗೆ ಮರುಜೀವ!
ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಉಡುಪುಗಳ ಮರು ಬಳಕೆಗೆ ತಯಾರದ ಅದ್ಭುತ ದೇಸಿ ಯಂತ್ರ ಇದಾಗಿದೆ. ನಮ್ಮ ಸುತ್ತಮುತ್ತ ಸಾಕಷ್ಟು ಇಂತಹ ಸ್ಥಳೀಯ ಪ್ರತಿಭೆಗಳಿವೆ. ನಾವು ಮಾಡಬೇಕಾಗಿರುವುದು ಈ ಪರಿಸರ ಯೋಧರನ್ನು ಬೆಂಬಲಿಸುವುದು ಮತ್ತು ಪ್ರೋತ್ಸಾಹಿಸುವುದು,ಎಂದು ಅವರು ವೀಡಿಯೊವನ್ನು ಪೋಸ್ಟ್ ಮಾಡುವಾಗ ಬರೆದಿದ್ದಾರೆ. ಅವರು #ReduceReuseRecycle ಎಂಬ ಹ್ಯಾಶ್‌ಟ್ಯಾಗ್ ಅನ್ನು ನೀಡಿದ್ದು, ಈ ವೀಡಿಯೊವನ್ನು ಯಾವಾಗ ಅಥವಾ ಎಲ್ಲಿ ಸೆರೆಹಿಡಿಯಲಾಗಿದೆ ಎಂಬುದು ತಿಳಿದಿಲ್ಲವಾಗಿದೆ. ಆದರೆ ಈ ವಿಡಿಯೋ 2019 ರಿಂದಲೂ ಚಲಾವಣೆಯಲ್ಲಿದೆ.
ಫಾರ್ಮುಲಾ ರೇಸರ್‌ಗೆ ಯಾವುದರಲ್ಲೂ ಕಡಿಮೆ ಇಲ್ಲ ಈ ಹಾಲು ಮಾರಾಟಗಾರ: video viral
ಪುರುಷರು ಹಳೆಯ ಸೀರೆಯನ್ನು ತುಂಡುಗಳಾಗಿ ಹರಿದು ನಂತರ ಹಗ್ಗವನ್ನು ರೂಪಿಸುವ ಮೂಲಕ ಅದನ್ನು ಹೇಗೆ ಮರುಬಳಕೆ ಮಾಡುತ್ತಾರೆ ಎಂಬುದನ್ನು ಈ ವೀಡಿಯೊ ಮೂಲಕ ನೋಡಬಹುದು.
ಕೆಲ ದಿನಗಳ ಹಿಂದೆ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ಪೋಸ್ಟ್ ಆದಾಗಿನಿಂದ 56,000 ಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ನೋಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದೊಂದು ಅದ್ಭುತವಾದ ವಿಡಿಯೋ. ದೇಶದಲ್ಲಿ ಇಂತಹ ಎಷ್ಟೋ ಪ್ರತಿಭೆಗಳಿದ್ದಾರೆ. ಇದೊಂದು ಸುಂದರ ಕಲ್ಪನೆ. ಅನೇಕ ವಸ್ತುಗಳನ್ನು ಮರುಬಳಕೆ ಮಾಡಿ. ಪರಿಸರ ಉಳಿಸಿ, ನಿಮ್ಮನ್ನು ಉಳಿಸಿ. ಇಂತಹ ಎಲ್ಲ ಜನರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು ಹೀಗೆ ಅನೇಕರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.
ಹೀಗ ಕಸದಿಂದ ರಸ ತಯಾರಿಸಲು ಈಗ ಇಸ್ರೋ ಕೂಡ ಮುಂದಾಗಿದೆ. ಬಾಹ್ಯಾಕಾಶದ ಕಸ ಎಂದೇ ಪರಿಗಣಿಸಲಾಗುವ ನಿರ್ಜಿವ ರಾಕೆಟ್‌ಗಳಿಗೆ ಜೀವ ಕೊಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಧೆ ಮುಂದಾಗಿದ್ದು, ಈ ಮೂಲಕ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಬಾಹ್ಯಾಕಾಶದ ಕಸವಾಗಿ ಉಳಿಯುವ ಈ ರಾಕೆಟ್ ಭಾಗಕ್ಕೆ ಮರುಜೀವ ಕೊಟ್ಟು ಅದನ್ನು ಪುನಃ ಬಳಸುವ ಹೊಸ ಯೋಜನೆಯೊಂದನ್ನು ಇಸ್ರೋ ಕೈಗೆತ್ತಿಕೊಂಡಿದ್ದು, ಇದರಲ್ಲಿ ಯಶಸ್ವಿಯಾಗುವ ಭರವಸೆ ವ್ಯಕ್ತಪಡಿಸಿದೆ.