ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ನವದೆಹಲಿ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ. ಬಿಜೆಪಿ 48 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, 27 ವರ್ಷಗಳ ಬಳಿಕ ಅಧಿಕಾರಕ್ಕೆ ಮರಳುವ ಸೂಚನೆ ನೀಡಿದೆ.

ನವದೆಹಲಿ (ಫೆ.8): ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಪ್‌ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿಯ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹೀನಾಯ ಸೋಲು ಕಂಡಿದ್ದಾರೆ. ಮೂರು ಬಾರಿ ಗೆಲುವು ಕಂಡಿದ್ದ ನವದೆಹಲಿ ವಿಧಾನಸಭಾ ಕ್ಷೇತ್ರದಿಂದಲೇ ಅವರು ಸೋಲು ಕಂಡಿದ್ದಾರೆ. ಬಿಜೆಪಿಯ ಪರ್ವೇಶ್‌ ವರ್ಮಾ ಈ ಕ್ಷೇತ್ರದಲ್ಲಿ 3182 ಮತಗಳಿಂದ ಗೆಲುವು ಕಂಡಿದ್ದಾರೆ. ವಿಧಾನಸಭೆ ಚುನಾವಣೆಗೂ ಮುನ್ನ ಅಕ್ರಮ ಮದ್ಯ ಹಗರಣ, ಭ್ರಷ್ಟಾಚಾರ ಆರೋಪಕ್ಕಾಗಿ ಜೈಲು ಸೇರಿದ್ದ ಅರವಿಂದ್ ಕೇಜ್ರಿವಾಲ್‌, ಜೈಲಿನಿಂದ ಜಾಮೀನು ಪಡೆದು ಹೊರಬಂದ ಬಳಿಕ ಸಿಎಂ ಸ್ಥಾನವನ್ನು ಆತಿಶಿ ಮರ್ಲೆನಾಗೆ ನೀಡಿದ್ದರು. ಈಗ ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷ ಮಾತ್ರವಲ್ಲ ಅರವಿಂದ್‌ ಕೇಜ್ರಿವಾಲ್‌ ಕೂಡ ಸೋಲು ಕಂಡಿದ್ದಾರೆ. ಈ ಜನ್ಮದಲ್ಲಿ ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷವನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕಿದ್ದ ಅರವಿಂದ್‌ ಕೇಜ್ರಿವಾಲ್‌ಗೆ ದೆಹಲಿಯ ಮತದಾರರೇ ಉತ್ತರ ನೀಡಿದ್ದಾರೆ. 

Delhi Election 2025 Results Live : ಬಿಜೆಪಿಗೆ 46, ಆಪ್‌ಗೆ 25 ಕ್ಷೇತ್ರಗಳಲ್ಲಿ ಮುನ್ನಡೆ

ಪ್ರಸ್ತುತ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 48 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ, ಆಪ್‌ 22 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 70 ವಿಧಾನಸಭಾ ಕ್ಷೇತ್ರವಿರುವ ದೆಹಲಿಯಲ್ಲಿ 36 ಬಹುಮತದ ಮಾರ್ಕ್‌ ಆಗಿದೆ. ಇದರೊಂದಿಗೆ ಬಿಜೆಪಿ 27 ವರ್ಷಗಳ ಬಳಿಕ ದೆಹಲಿಯಲ್ಲಿ ಅಧಿಕಾರಕ್ಕೆ ಏರಲು ಸಜ್ಜಾಗಿದೆ.

ಸಾರಾಯಿಯಿಂದಲೇ ಅರವಿಂದ್‌ ಕೇಜ್ರಿವಾಲ್‌ಗೆ ಸೋಲು ಎಂದ ಅಣ್ಣಾ ಹಜಾರೆ!

ಇನ್ನೊಂದೆಡೆ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಜಂಗ್‌ಪುರ ಸ್ಥಾನದಿಂದ 600 ಮತಗಳಿಂದ ಸೋಲು ಕಂಡಿದ್ದಾರೆ. ನಾವು ಕಷ್ಟಪಟ್ಟು ಕೆಲಸ ಮಾಡಿದ್ದೇವೆ, ಆದರೆ ಸಾರ್ವಜನಿಕರ ನಿರ್ಧಾರ ನಮ್ಮ ಪರವಾಗಿ ಬರಲಿಲ್ಲ ಎಂದು ಅವರು ಹೇಳಿದರು. ಅವರ ನಿರ್ಧಾರವನ್ನು ನಾವು ಸ್ವೀಕರಿಸುತ್ತೇವೆ ಎಂದಿದ್ದಾರೆ.