ಕಷ್ಟದಲ್ಲಿರುವವರಿಗೆ 200 ಮನೆ ಕಟ್ಟಿಕೊಟ್ಟ ನಿವೃತ್ತ ಉಪನ್ಯಾಸಕಿ
- ಇತರರಿಗೆ ನೆರವಾಗಲು, ಸಮಾಜಸೇವೆ ಮಾಡಲು ಪದವಿ, ಸ್ಥಾನಗಳೇ ಬೇಕಾಗಿಲ್ಲ
- ನಿವೃತ್ತ ಉಪನ್ಯಾಸಕಿಯ ಕೆಲಸ ಎಂಥವರಿಗೂ ಪ್ರೇರಣೆ
- ಈಕೆ ಕಟ್ಟಿಕೊಟ್ಟಿದ್ದು ಒಂದೆರಡು ಮನೆಯಲ್ಲ, ಬರೋಬ್ಬರಿ 200 ಮನೆಗಳು
ತಿರುವನಂತಪುರಂ(ಜೂ.01): ನೆರೆಯಲ್ಲಿ ಮನೆ ಕಳೆದುಕೊಂಡರವಿಗೋ, ನಿರ್ಗತಿಕರಿಗೋ ಮನೆ ಕಟ್ಟಿಕೊಡಲು ಸರ್ಕಾರ ತೆಗೆದುಕೊಳ್ಳೋ ಸಮಯದ ಬಗ್ಗೆ ಹೇಳಬೇಕಾಗಿಲ್ಲ. ಸೂರು ಆಶ್ವಾಸನೆ ಸಿಕ್ಕಿ ಮತ್ತೆಷ್ಟು ವರ್ಷದ ನಂತರ ಮನೆ ಸಿದ್ಧವಾಗುವುದೋ.. ಹಾಗಿರುವಾಗ ಈ ಉಪನ್ಯಾಸಕಿ ಬರೋಬ್ಬರಿ 200 ಕುಟುಂಬಕ್ಕೆ ಮನೆ ಕಟ್ಟಿಕೊಟ್ಟಿದ್ದಾರೆ. ಇದೇನು ಸಣ್ಣ ವಿಷ್ಯಾನಾ ?
ಸುನಿಲ್ ಎಂಎಸ್ ನಿವೃತ್ತ ಪ್ರಾಣಿಶಾಸ್ತ್ರ ಉಪನ್ಯಾಸಕಿ. ಈಕೆ ಕೇರಳಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಭರವಸೆಯಾಗುತ್ತಿದ್ದಾರೆ. 5 ಜಿಲ್ಲೆಗಳಲ್ಲಿ ಸುಮಾರು 200 ಮನೆ ಕಟ್ಟಲು ನೆರವಾಗಿದ್ದಾರೆ ಈಕೆ. 2006ರಿಂದ ಈ ಕೆಲಸಲ್ಲಿ ತೊಡಗಿದ್ದಾರೆ ಈಕೆ.
ಹಸ್ತವನ್ನೇ ದೇಹವಾಗಿಸಿದ ನೃತ್ಯ ಈಗ ವೈರಲ್! ನಾಜೂಕಾಗಿ ಆಡಿದ ಕೈಗಳ ಒಡತಿ ಇವರು...
ನಾನು ಚಿಕ್ಕವಳಿದ್ದಾಗ ನನ್ನ ಪೋಷಕರು ಆಸುಪಾಸಿನ ಬಡ ಜನರಿಗೆ, ಮನೆ ಕೆಲಸದವರಿಗೆ, ತೋಟದ ಕೃಷಿಕರಿಗೆ ನೆರವಾಗುವುದನ್ನು ನೋಡಿದ್ದೆ. ನಾನು ಎರಡನೇ ಬಾರಿಗೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಯಾಗಿದ್ದಾಗ, 2006 ರಲ್ಲಿ, ವಿಶ್ವವಿದ್ಯಾನಿಲಯವು ಮನೆಯಿಲ್ಲದವರಿಗೆ ಮನೆಗಳನ್ನು ನಿರ್ಮಿಸುವ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಸುರಕ್ಷಿತ ಸ್ಥಳವಿಲ್ಲದ ಯಾವುದೇ ವಿದ್ಯಾರ್ಥಿ ನಮ್ಮನ್ನು ಸಂಪರ್ಕಿಸಬಹುದು ಎಂದು ನಾವು ಘೋಷಿಸಿದ್ದರೂ, ಯಾರೂ ಮುಂದೆ ಬರಲಿಲ್ಲ. ನನ್ನ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಸಜಿನಿ, ಸ್ನಾತಕೋತ್ತರ ವಿದ್ಯಾರ್ಥಿನಿ ಆಶಾ ಅಂತಹ ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದ್ದರು ಎಂದಿದ್ದಾರೆ ಈಕೆ.
ಆಶಾ ಮತ್ತು ಅವಳ ಕುಟುಂಬ ಪ್ಲಾಸ್ಟಿಕ್‌ನಿಂದ ಮಾಡಿದ ಸಣ್ಣ ಶೆಡ್‌ನಲ್ಲಿ ವಾಸಿಸುತ್ತಿತ್ತು. ಅವಳ ಸಲ್ವಾರ್ ಕಮೀಜ್‌ನ ಶಾಲು ಮನೆಯ ಬಾಗಿಲಾಗಿತ್ತು, ಅವಳು ಅದನ್ನೇ ಕಾಲೇಜಿಗೆ ಧರಿಸುತ್ತಿದ್ದಳು. ಆಕೆಗಾಗಿ ನಾವು 1.19 ಲಕ್ಷ ರೂಪಾಯಿಯ ಮನೆ ಕಟ್ಟಿಕೊಟ್ಟೆವು. 98,000 ರೂಪಾಯಿ ಸಂಗ್ರಹವಾದರೆ ಉಳಿದ ಹಣವನ್ನು ನನ್ನ ಉಳಿತಾಯದಿಂದ ಸೇರಿಸಿದೆ. ಆಶಾಳ ಸಂತೋಷವನ್ನು ನೋಡಿ, ಮನೆಯಿಲ್ಲದವರಿಗಾಗಿ ನಾನು ಏನಾದರೂ ಮಾಡಬೇಕೆಂದು ನಿರ್ಧರಿಸಿದೆ ಎಂದಿದ್ದಾರೆ ಸುನಿಲ್.
ಬೆಂಗ್ಳೂರು ತಲುಪಿದ 7ನೇ ಆಕ್ಸಿಜನ್ ಎಕ್ಸ್‌ಪ್ರೆಸ್: ಮಹಿಳೆಯರದೇ ಸಾರಥ್ಯ..
ಪತ್ತನಂತಿಟ್ಟದ ಕಥೋಲಿಕೇಟ್ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಈಕೆ 1995ರಲ್ಲಿ ಉಪನ್ಯಾಸಕಿಯಾಗಿ ಸೇರಿದ್ದರು. ಈಕೆ ಕಷ್ಟದಲ್ಲಿರುವ ಬಹಳಷ್ಟು ಜನರಿಗೆ ನೆರವಾಗಿ ಅವರಿಗೊಂದು ಸ್ವಂತ ಸೂರು ನಿರ್ಮಿಸಿಕೊಡುವ ಕಾಯಕವನ್ನು ಮುಂದುವರಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲ 2018 ರಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಭಾರತದ ರಾಷ್ಟ್ರಪತಿಗಳು ಪ್ರಶಸ್ತಿ ನೀಡಿ ಗೌರವಿಸಿದ್ದರು.. ಈ ಪ್ರಶಸ್ತಿ ಭಾರತದಲ್ಲಿ ಮಹಿಳೆಯರಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿ.