ನವದೆಹಲಿ(ಮೇ10): ಕೊರೋನಾ ವೈರಸ್‌ ದೇಶದಲ್ಲಿ ತೀವ್ರಗೊಂಡಿರುವ ಈ ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸುತ್ತಿರುವ ಮುಖ್ಯಮಂತ್ರಿಗಳಲ್ಲಿ ಕರ್ನಾಟಕದ ಬಿ.ಎಸ್‌. ಯಡಿಯೂರಪ್ಪ ದೇಶದಲ್ಲೇ 2ನೇ ಸ್ಥಾನ ಗಳಿಸಿದ್ದಾರೆ. ದಿಲ್ಲಿಯ ಅರವಿಂದ ಕೇಜ್ರಿವಾಲ್‌ ಮೊದಲ ಸ್ಥಾನದಲ್ಲಿದ್ದರೆ, ತೆಲಂಗಾಣದ ಕೆ. ಚಂದ್ರಶೇಖರ ರಾವ್‌ 3ನೇ ಸ್ಥಾನ ಪಡೆದಿದ್ದಾರೆ.

ಟೈಮ್ಸ್‌ ನೌ ಸುದ್ದಿವಾಹಿನಿ ಹಾಗೂ ಒಆರ್‌ಮ್ಯಾಕ್ಸ್‌ ಜಂಟಿಯಾಗಿ ಬೆಂಗಳೂರು, ದಿಲ್ಲಿ, ಮುಂಬೈ, ಹೈದರಾಬಾದ್‌, ಕೋಲ್ಕತಾ ಹಾಗೂ ಚೆನ್ನೈಗಳಲ್ಲಿ ಈ ಸಮೀಕ್ಷೆ ನಡೆಸಿವೆ.

ನೇಕಾರರಿಗೆ ಸಿಎಂ BSY ವಿಶೇಷ ಪ್ಯಾಕೇಜ್‌ ಘೋಷಣೆ: ಕೆಲ​ವ​ರಿಗೆ ಮಾತ್ರ ಸೀಮಿ​ತ..!

ಇದರಲ್ಲಿ ಯಡಿಯೂರಪ್ಪ ಅವರ ಪರ ಬೆಂಗಳೂರಿನ ಶೇ.56 ಜನರು ಕರ್ನಾಟಕದಲ್ಲಿನ ಕೊರೋನಾ ಪರಿಸ್ಥಿತಿ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು, ದಿಲ್ಲಿ, ತೆಲಂಗಾಣಕ್ಕೆ ಹೋಲಿಸಿದರೆ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆ ಆಗಿದ್ದು, ಬಿಎಸ್‌ವೈ ಬಗ್ಗೆ ಜನರು ಮೆಚ್ಚಲು ಕಾರಣವಾಗಿದೆ.

"

ಸಂಕಷ್ಟದ ನಡುವೆ ದೇಶಕ್ಕೇ ಮಾದರಿ ಆಗುವ ಕೆಲಸ: ಬಿಎಸ್‌ವೈ ಹೊಗಳಿದ ಸಿದ್ದು, ಡಿಕೆಶಿ!

ಕೊರೋನಾ ನಿರ್ವಹಣೆ; ಯಾರಿಗೆ ಎಷ್ಟು ಮತ?

1. ದಿಲ್ಲಿ- ಅರವಿಂದ ಕೇಜ್ರಿವಾಲ್‌| ಶೇ.65

2. ಕರ್ನಾಟಕ- ಬಿ.ಎಸ್‌. ಯಡಿಯೂರಪ್ಪ| ಶೇ.56

3. ತೆಲಂಗಾಣ- ಕೆ. ಚಂದ್ರಶೇಖರರಾವ್‌| ಶೇ.49

4. ತಮಿಳುನಾಡು- ಎಡಪ್ಪಾಡಿ ಪಳನಿಸ್ವಾಮಿ| ಶೇ.40

5. ಮಹಾರಾಷ್ಟ್ರ- ಉದ್ಧವ ಠಾಕ್ರೆ| ಶೇ.35

6. ಪ.ಬಂಗಾಳ- ಮಮತಾ ಬ್ಯಾನರ್ಜಿ| ಶೇ.6