ಮಥುರಾ[ಡಿ.29]: ಉತ್ತರ ಪ್ರದೇಶದಲ್ಲಿ ಈಗ ಮೈ ಕೊರೆಯುವ ಚಳಿ. ಹೀಗಾಗಿ ಎಲ್ಲರೂ ದಪ್ಪನೆಯು ಉಡುಗೆಯ ಮೊರೆಹೋಗುತ್ತಿದ್ದಾರೆ. ಈ ಮಧ್ಯೆ ಚಳಿಯಿಂದ ಆನೆಯನ್ನು ರಕ್ಷಿಸಲು ಅದಕ್ಕೆ ಸ್ವೆಟರ್‌ ಮತ್ತು ಬಟ್ಟೆಯನ್ನು ಹೊದೆಸಿದ ಚಿತ್ರವೊಂದು ಭಾರೀ ವೈರಲ್‌ ಆಗಿದೆ.

ಮಥುರಾದ ಗ್ರಾಮವೊಂದರಲ್ಲಿ ಕಂಡು ಬಂದ ಈ ದೃಶ್ಯವನ್ನು ಐಎಫ್‌ಎಸ್‌ ಅಧಿಕಾರಿ ಪವೀರ್‍ನ್‌ ಕಾಸ್ವಾನ್‌ ಎನ್ನುವವರು ಟ್ವೀಟ್‌ ಮಾಡಿದ್ದಾರೆ. ಇದರಲ್ಲಿ ಉಣ್ಣೆಯ ಹೊದಿಕೆ ಹಾಗೂ ಬೆಚ್ಚನೆಯ ಬಟ್ಟೆಧರಿಸಿದ ಆನೆಯ ಮುಂದೆ ಇಬ್ಬರು ಮಹಿಳೆಯರು ನಿಂತಿರುವುದನ್ನು ಕಾಣಬಹುದಾಗಿದೆ.

ಮಥುರಾ ಹಾಗೂ ಉತ್ತರ ಪ್ರದೇಶದ ಬಹುತೇಕ ಕಡೆಗಳಲ್ಲಿ ತಾಪಮಾನ ಶೂನ್ಯ ಡಿಗ್ರಿಗೆ ಸಮೀಪಿಸಿದೆ. ಹೀಗಾಗಿ ಮಥುರಾದ ಗ್ರಾಮಗಳಲ್ಲಿ ಪ್ರಾಣಿಗಳಿಗೂ ಸ್ವೆಟರ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಗ್ರಾಮಸ್ಥರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.