Asianet Suvarna News Asianet Suvarna News

ಹಿಮಾಚಲ ಪ್ರದೇಶದಲ್ಲಿ ಭೂಕುಸಿತ: ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆ

ಪರ್ವತಗಳ ನಾಡು ಹಿಮಾಚಲ ಪ್ರದೇಶದ ಚಂಬಾದಲ್ಲಿ ಭೂಕುಸಿತ ಉಂಟಾಗಿದ್ದು, ಇದರ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಪರ್ವತವೊಂದು ಇದ್ದಕ್ಕಿದಂತೆ ಕುಸಿದು ರಸ್ತೆಯ ಮೇಲೆ ಬೀಳುತ್ತಿದೆ. ಸಮೀಪದಲ್ಲಿದ್ದ ಪ್ರವಾಸಿಗರು ಈ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ.

Massive landslide in Chamba, Himachal Pradesh  horrifying scene capture in camera akb
Author
Shimla, First Published Aug 4, 2022, 10:08 AM IST

ಶಿಮ್ಲಾ: ಪರ್ವತಗಳ ನಾಡು ಹಿಮಾಚಲ ಪ್ರದೇಶದ ಚಂಬಾದಲ್ಲಿ ಭೂಕುಸಿತ ಉಂಟಾಗಿದ್ದು, ಇದರ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಪರ್ವತವೊಂದು ಇದ್ದಕ್ಕಿದಂತೆ ಕುಸಿದು ರಸ್ತೆಯ ಮೇಲೆ ಬೀಳುತ್ತಿದೆ. ಸಮೀಪದಲ್ಲಿದ್ದ ಪ್ರವಾಸಿಗರು ಈ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ಹಿಮಾಚಲದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಪರ್ವತಗಳು ಕುಸಿಯುತ್ತಿವೆ. ಸುಂಡ್ಲ-ಭಾಳೇ ರಸ್ತೆಯ ಕೋಟಿ ಸೇತುವೆಗೆ ಹೊಂದಿಕೊಂಡಿರುವ ಗುಡ್ಡವೂ ಹೀಗೆ ದಿಢೀರ್ ಕುಸಿದು ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ಓಡಿ ಪ್ರಾಣ ಉಳಿಸಿಕೊಂಡ ಜನ
ಹಿಮಾಚಲ ಪ್ರದೇಶದಲ್ಲಿ ಮಳೆಗಾಲದಲ್ಲಿ ಭೂಕುಸಿತ ಸಾಮಾನ್ಯ. ಆದರೆ ಚಂಬಾದ ಈ ಭಯಾನಕ ಭೂಕುಸಿತವನ್ನು ಕಂಡು ಜನ ನಡುಗಿದ್ದಾರೆ. ಅಲ್ಲಿದ್ದವರು ಓಡಿ ಹೋಗಿ ಪ್ರಾಣ ಉಳಿಸಿಕೊಂಡರು. ಇಲ್ಲಿ ಬೆಟ್ಟವೇ ಬಿರುಕು ಬಿಟ್ಟಿದ್ದು, ಪ್ರಾಣ ಉಳಿಸಿಕೊಳ್ಳಲು ಜನರು ಓಡಬೇಕಾಯಿತು. ಗುಡ್ಡ ಕುಸಿದಿದ್ದರಿಂದ ಆ ಭಾಗದ ರಸ್ತೆ ಬಂದ್‌ ಆಗಿದೆ. ಮಂಗಳವಾರ ಸಂಜೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಘಟನೆ ನಡೆಯುವ ವೇಳೆ ಸಮೀಪದಲ್ಲೇ ಇದ್ದ ಪ್ರವಾಸಿಗರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

 

ಇದ್ದಕ್ಕಿದ್ದಂತೆ ಕುಸಿದ ಪರ್ವತ
ಪರ್ವತದ ಬಳಿ ನಿರ್ಮಿಸಲಾದ ಸೇತುವೆಯ ಮೇಲೆ ಜನರು ಚಲಿಸುತ್ತಿದ್ದರು. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಪರ್ವತದಲ್ಲಿ ಬಿರುಕು ಬಿಡತೊಡಗಿತು. ಶೀಘ್ರದಲ್ಲೇ ಪರ್ವತದ ದೊಡ್ಡ ಭಾಗವು ಕೆಳಗೆ ಬೀಳಲು ಪ್ರಾರಂಭಿಸಿತು. ಬಳಿಕ ಅಲ್ಲಿದ್ದವರು ಓಡಿಬಂದು ಪ್ರಾಣ ಉಳಿಸಿಕೊಂಡರು. ಪರ್ವತದ ಅವಶೇಷಗಳು ಜಲಾಶಯಕ್ಕೆ ಬಿದ್ದವು. ಇದರಿಂದಾಗಿ ಯಾವುದೇ ದೊಡ್ಡ ಅವಘಡ ಸಂಭವಿಸಿಲ್ಲ. ಭೂ ಕುಸಿತದ ನಂತರ ಛಂಬಾ ಜಿಲ್ಲಾ ಕೇಂದ್ರದಿಂದ ಸುಂಡ್ಲಾ-ಭಾಲೆ ಪ್ರದೇಶದ ನಡುವಿನ ಸಂಪರ್ಕ ಕಡಿತಗೊಂಡಿದೆ. ರಸ್ತೆಗೆ ಬಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ.

ಆ್ಯಂಬುಲೆನ್ಸ್‌ನಲ್ಲಿ ಮಗುವನ್ನು ಆಸ್ಪತ್ರೆ ಸಾಗಿಸುವ ವೇಳೆ ಭೂಕುಸಿತ, ನೆರವಿಗೆ ಧಾವಿಸಿದ ಭಾರತೀಯ ಸೇನೆ!

ಮಳೆ ಎಚ್ಚರಿಕೆ
ಹಿಮಾಚಲ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವು ನದಿಗಳು ಉಕ್ಕಿ ಹರಿಯುತ್ತಿವೆ. ಹವಾಮಾನ ಕೇಂದ್ರ ಶಿಮ್ಲಾ ಪ್ರಕಾರ, ಆಗಸ್ಟ್ 4 ರವರೆಗೆ ಅಂದರೆ ಇಂದಿನವರೆಗೆ ರಾಜ್ಯದ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ. ಇದೇ ವೇಳೆ ಮುಂದಿನ ದಿನಗಳಲ್ಲಿ ರಾಜ್ಯದ ಬಯಲು ಸೀಮೆಯಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆಯನ್ನೂ ನೀಡಲಾಗಿದೆ. ಹಿಮಾಚಲದಲ್ಲಿ ಮಳೆಯಿಂದಾಗಿ ಅನೇಕ ಜನರು ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ.

ಮಳೆ ನಿಂತರೂ ಅವಾಂತರ ನಿಂತಿಲ್ಲ: ಭೂಕುಸಿತದ ಭೀತಿಯಲ್ಲಿ ಕಾಫಿನಾಡಿನ ಜನ

Follow Us:
Download App:
  • android
  • ios