Asianet Suvarna News Asianet Suvarna News

ಅಮೃತಸರ ಔಷಧ ಕಾರ್ಖಾನೆಯಲ್ಲಿ ಭೀಕರ ಅಗ್ನಿ ದುರಂತ, 4 ಸಾವು, ಹಲವರು ನಾಪತ್ತೆ.

ಅಮೃತಸರದ ಮಜಿತಾ ರಸ್ತೆಯಲ್ಲಿರುವ ಫಾರ್ಮಾಸ್ಯುಟಿಕಲ್ ಕಾರ್ಖಾನೆಯಲ್ಲಿ ಗುರುವಾರ ರಾತ್ರಿ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡು ಓರ್ವ ಮಹಿಳೆ ಸೇರಿ ಕನಿಷ್ಠ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.

massive fire breaks at Amritsar pharmaceutical factory many dead gow
Author
First Published Oct 6, 2023, 10:36 AM IST

ಪಂಜಾಬ್‌ (ಅ.6): ಅಮೃತಸರದ ಮಜಿತಾ ರಸ್ತೆಯಲ್ಲಿರುವ ಫಾರ್ಮಾಸ್ಯುಟಿಕಲ್ ಕಾರ್ಖಾನೆಯಲ್ಲಿ ಗುರುವಾರ ರಾತ್ರಿ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡು ಓರ್ವ ಮಹಿಳೆ ಸೇರಿ ಕನಿಷ್ಠ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಸುಮಾರು ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರ್ಖಾನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕಗಳು ಸಂಗ್ರಹ ಮಾಡಿಟ್ಟಿದ್ದರು. ಈ ಹಿನ್ನೆಲೆ ದುರಂತ  ಹೆಚ್ಚಾಗಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಘಟನೆಗೆ ನಿಖರ ಕಾರಣವೇನು ಎಂಬುದರ ಬಗ್ಗೆ ಅಧಿಕೃತ ದೃಢೀಕರಣವಿಲ್ಲ. ದುರ್ಘಟನೆ ನಡೆದಾಗ ಕಾರ್ಖಾನೆಯಲ್ಲಿ ಕೆಲವು ಕೆಲಸಗಳು ನಡೆಯುತ್ತಿದ್ದು, ಬೆಂಕಿ ಹೊತ್ತಿಕೊಂಡಾಗ ಕಾರ್ಮಿಕರು ಒಳಗೆ ಇದ್ದರು.

ಮುಂಬೈನಲ್ಲಿ ಭೀಕರ ಬೆಂಕಿ ದುರಂತ ಕನಿಷ್ಠ 7 ಮಂದಿ ಸಾವು, 51ಕ್ಕೂ

 ನಿನ್ನೆ ತಡರಾತ್ರಿಯಿಂದ ನಿರಂತರವಾಗಿ ಬೆಂಕಿ ನಂದಿಸಲು ಪ್ರಯತ್ನ ನಡೆಸಲಾಗಿದ್ದು, ಇಂದು ಬೆಳಗಿನ ಜಾವ 3:30ರ ಸುಮಾರಿಗೆ ಬೆಂಕಿಯನ್ನು ಸಂಪೂರ್ಣವಾಗಿ ಶಮನ ಮಾಡಲಾಗಿದೆ. ಸುಮಾರು 13 ಅಗ್ನಿ ಶಾಮಕ ವಾಹನಗಳನ್ನು ಬಳಸಿ ಬೆಂಕಿಯನ್ನು ಹತೋಟಿಗೆ ತರಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ಹೇಳಿದ್ದಾರೆ.

ಅಮೃತಸರ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ದಿಲ್ಬಾಗ್ ಸಿಂಗ್ ಪ್ರಕಾರ, ಮಧ್ಯಾಹ್ನ 3:30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಡ್ರಮ್‌ಗಳಲ್ಲಿ ಆಲ್ಕೋಹಾಲ್ ಸಂಗ್ರಹಿಸಿದ್ದರಿಂದ ಕಾರ್ಖಾನೆಯೊಳಗೆ ಸ್ಫೋಟಗಳು ಸಂಭವಿಸಿವೆ. ಸುಮಾರು 14 ಅಗ್ನಿಶಾಮಕ ಟೆಂಡರ್‌ಗಳನ್ನು ಕಾರ್ಯಾಚರಣೆಗೆ ಇಳಿಸಲಾಯಿತು ಮತ್ತು ಬೆಂಕಿಯನ್ನು ನಂದಿಸಲು ಸುಮಾರು 4 ಗಂಟೆಗಳ ಕಾಲ ಸಮಯ ಹಿಡಿಯಿತು. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ  ಎಂದು ಹೇಳಿದ್ದಾರೆ.

ಸಿಕ್ಕಿಂ ಪ್ರವಾಹ: 14 ಸಾವು, 102 ಜನ ನಾಪತ್ತೆ: ಕಣ್ಮರೆಯಾದ 22

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಲಾಗಿದೆ.ಶವಗಳನ್ನು ಇನ್ನೂ ಗುರುತಿಸಬೇಕಾಗಿದೆ.  ಈ ಘಟನೆಗೆ ಬೆಂಕಿಯ ಕಾರಣ ಮತ್ತು ಅದರಿಂದ ಉಂಟಾದ ಹಾನಿಯನ್ನು ಕಂಡುಹಿಡಿಯಲು ಪೊಲೀಸ್ ತಂಡಗಳು ತನಿಖೆ ನಡೆಸುತ್ತಿವೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.
 

Follow Us:
Download App:
  • android
  • ios