Asianet Suvarna News Asianet Suvarna News

Delhi Fire ದಿಲ್ಲಿಯಲ್ಲಿ ಮತ್ತೊಂದು ಮಹಾ ದುರಂತ, ಅಗ್ನಿ ಅವಘಡಕ್ಕೆ 27 ಜನ ಸಜೀವ ಬಲಿ!

- 3 ಮಹಡಿ ವಾಣಿಜ್ಯ ಕಟ್ಟಡದಲ್ಲಿ ಬೆಂಕಿ
- 70 ಜನರ ರಕ್ಷಣೆ, 40 ಜನರಿಗೆ ಗಾಯ
- ಮೆಟ್ರೋ ನಿಲ್ದಾಣದ ಸಮೀಪದಲ್ಲೇ ಇರುವ ಕಟ್ಟಡಕ್ಕೆ ಬೆಂಕಿ

Massive fire at an office complex in Mundka delhi 27 Dead 40 Hospitalised ckm
Author
Bengaluru, First Published May 14, 2022, 4:45 AM IST | Last Updated May 14, 2022, 4:45 AM IST

ನವದೆಹಲಿ(ಮೇ.14): ರಾಜಧಾನಿ ನವದೆಹಲಿಯ ಮೂರು ಮಹಡಿಯ ವಾಣಿಜ್ಯ ಕಟ್ಟಡವೊಂದರಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 27 ಜನರು ಸಜೀವವಾಗಿ ದಹನವಾಗಿದ್ದಾರೆ. ಘಟನೆಯಲ್ಲಿ 70 ಜನರನ್ನು ರಕ್ಷಿಸಲಾಗಿದ್ದು, 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಪೈಕಿ 10 ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮುಂಡ್ಕಾ ಮೆಟ್ರೋ ನಿಲ್ದಾಣದ ಸಮೀಪದಲ್ಲೇ ಇರುವ ಕಟ್ಟಡಕ್ಕೆ ಬೆಂಕಿ ಬಿದ್ದ ಬಗ್ಗೆ ಸಂಜೆ 4.30ರ ವೇಳೆಗೆ ಅಗ್ನಿಶಾಮಕ ಕಚೇರಿಗೆ ಕರೆ ಬಂದಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ್ದ 30ಕ್ಕೂ ಹೆಚ್ಚು ಅಗ್ನಿಶಾಮಕ ತಂಡದ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸಕ್ಕೆ ಮುಂದಾದರು. ಆದರೆ ಬೆಂಕಿ ತಹಬದಿಗೆ ಬಂದು, ಸಿಬ್ಬಂದಿ ಕೆಲವು ಕೋಣೆಯೊಳಗೆ ಪ್ರವೇಶಿಸಿದ ವೇಳೆ 27 ಜನರ ಶವ ಸಿಕ್ಕಿದೆ. ಅಗ್ನಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ.

ವೈಷ್ಣೋ ದೇವಿ ಯಾತ್ರಾರ್ಥಿಗಳು ತೆರಳುತ್ತಿದ್ದ ಬಸ್‌ಗೆ ಬೆಂಕಿ, 4 ಸಾವು, 22 ಮಂದಿ ಗಂಭೀರ!

ದುರ್ಘಟನೆ ಬಗ್ಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮೊದಲಾದ ಗಣ್ಯರು ಕಂಬನಿ ಮಿಡಿದಿದ್ದಾರೆ. ಜೊತೆಗೆ ಘಟನೆಯಲ್ಲಿ ಮಡಿದವರ ಕುಟುಂಬಕ್ಕೆ ತಲಾ 2 ಲಕ್ಷ ರು. ಮತ್ತು ಗಾಯಾಳುಗಳ ಕುಟುಂಬಕ್ಕೆ ಪ್ರಧಾನಿ ಮೋದಿ ತಲಾ 50000 ರು. ಪರಿಹಾರ ಘೋಷಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕಟ್ಟಡದ ಮಾಲಿಕರಾದ ಹರೀಶ್‌ ಗೋಯಲ್‌ ಮತ್ತು ವರುಣ್‌ ಗೋಯಲ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಕಟ್ಟಡದಿಂದ ಹಾರಿ ಬಚಾವಾದರು
ಬೆಂಕಿ ಹಬ್ಬುತ್ತಲೇ ಕೆಳಗೆ ಬರಲು ದಾರಿ ಸಿಗದ ಕಾರಣ, ಹಲವಾರು ಜನರು 2 ಮತ್ತು 3ನೇ ಮಹಡಿಯಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡಿದ್ದಾರೆ. ಇನ್ನು ಕೆಲವರಿಗೆ ಇಂಥ ಯತ್ನದ ವೇಳೆ ಗಾಯಗಳಾಗಿದೆ.

ಬೆಂಕಿ ಹಬ್ಬಿದ್ದು ಹೇಗೆ?
ಸಿಸಿಟೀವಿ ಮತ್ತು ರೂಟರ್‌ಗಳನ್ನು ಉತ್ಪಾದಿಸುವ ಕಂಪನಿಯೊಂದರ ಕಚೇರಿ ಕಟ್ಟಡದ ಮೊದಲ ಮಹಡಿಯಲ್ಲಿದೆ. ಅಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಎಲ್ಲಾ ಮಹಡಿಗಳಿಗೂ ಹಬ್ಬಿ ಭಾರೀ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಸದ ರಾಶಿಯಿಂದ ವ್ಯಾಪಿಸಿದ ಬೆಂಕಿ : ದೆಹಲಿಯಲ್ಲಿ ಶಾಲೆ ಬಂದ್‌

ಉರುಳಿ ಬಿದ್ದ ಲೈಟಿಂಗ್‌ ಟ್ರಸ್‌: ಅಪಾಯದಿಂದ ರಾಜ್ಯಸಭಾ ಸದಸ್ಯ ಕಡಾಡಿ ಪಾರು
ಬೆಳಗಾವಿ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ಗುರುವಾರ ರಾತ್ರಿ ಚೂನಮ್ಮದೇವಿ ಜಾತ್ರೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಲೈಟಿಂಗ್‌ ಟ್ರಸ್‌ ಉರುಳಿಬಿದ್ದಿದ್ದು, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವೇದಿಕೆ ಮೇಲೆ ಈರಣ್ಣ ಕಡಾಡಿ ಸೇರಿದಂತೆ 20 ಗಣ್ಯರು ಕುಳಿತಿದ್ದರು. ವೇದಿಕೆಯ ಪಕ್ಕದಲ್ಲಿಯೇ ಅಳವಡಿಸಿದ್ದ ಲೈಟಿಂಗ್‌ ಟ್ರಸ್‌ ಕಂಬ ಉರುಳಿ ಬಿದ್ದ ಪರಿಣಾಮ ಇಬ್ಬರಿಗೆ ಸಣ್ಣಪುಟ್ಟಗಾಯಗಳಾಗಿವೆ.

ಚೂನಮ್ಮದೇವಿ ಜಾತ್ರೆ ಹಿನ್ನೆಲೆಯಲ್ಲಿ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಲೈಟಿಂಗ್‌ ಸಿಸ್ಟಮ್‌ಗೆ ಅಳವಡಿಸಿದ್ದ ಕಂಬ ವೇದಿಕೆ ಮೇಲೆ ಆಕಸ್ಮಿಕ ಉರುಳಿ ಬಿದ್ದು ಈ ಅವಘಡ ಸಂಭವಸಿದೆ. ವಿದ್ಯುತ್‌ ಅವಘಡಸಂಭವಿಸುವ ಸಾಧ್ಯತೆ ಇತ್ತು. ಚೂನಮ್ಮದೇವಿಯ ಆರ್ಶೀವಾದದಿಂದ ನಾವೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದೇವೆ ಎಂದು ರಾಜ್ಯಸಭಾಸದಸ್ಯ ಈರಣ್ಣ ಕಡಾಡಿ ಪ್ರತಿಕ್ರಿಯಿಸಿದ್ದಾರೆ.
 

Latest Videos
Follow Us:
Download App:
  • android
  • ios