* ಗಂಡ-ಹೆಂಡತಿ ಜಗಳದ ಪ್ರಕರಣ* ವಿಶೇಷ ಟಿಪ್ಪಣಿ ಮಾಡಿದ ಬಾಂಬೆ ಕೋರ್ಟ್* ಮದುವೆ ಅನ್ನೋದು ಸ್ವರ್ಗದಲ್ಲಿ ಅಲ್ಲ ನರಕದಲ್ಲಿ ನಿಶ್ಚಿತವಾಗುತ್ತವೆ * ಪರಸ್ಪರ ಆರೋಪ ಮತ್ತು ದೂರಿನ ಸುರಿಮಳೆ
ಮುಂಬೈ(ಫೆ. 01) ಕೌಟುಂಬಿಕ ವಿವಾದ (Domestic violence) ವಿವಾದ ಪ್ರಕರಣವೊಂದನ್ನು ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ (The Bombay High Court) ಮಹತ್ವದ ಮಾತೊಂದನ್ನು ಹೇಳಿದೆ. ಈ ಪ್ರಕರಣದಲ್ಲಿ ಪತಿ-ಪತ್ನಿ ಪರಸ್ಪರರ ಮೇಲೆ ಮಾಡಿರುವ ಆರೋಪಗಳ ಪಟ್ಟಿ ನೋಡಿದರೆ, 'ಮದುವೆ ಅನ್ನೋದು ಸ್ವರ್ಗದಲ್ಲಿ ಅಲ್ಲ ನರಕದಲ್ಲಿ ನಿಶ್ಚಿತವಾಗುತ್ತವೆ (marriages are not made in heaven, they are made in hell) ಎಂಬಂತೆ ತೋರುತ್ತಿದೆ' ಎಂದಿದೆ.
ಈ ಪ್ರಕರಣದಲ್ಲಿ ಆರೋಪಿ ಪತಿ (Husband) ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನೂ ನ್ಯಾಯಾಲಯ ಪುರಸ್ಕರಿಸುವ ಸಂದರ್ಭದಲ್ಲಿ ಈ ಮಾತು ಹೇಳಿದೆ.
Woman Suicide : ವಸತಿ ಗೃಹದಲ್ಲೇ ಕಾನ್ಸ್ಟೇಬಲ್ ಪತ್ನಿ ಸುಸೈಡ್, ಕಾರಣ ನಿಗೂಢ!
ಗಂಡ-ಹೆಂಡತಿ (Husband-Wife) ಪರಸ್ಪರರ ಮೇಲೆ ಆರೋಪಗಳ ಸುರಿಮಳೆ ಮಾಡಿ ದೂರು ಸಲ್ಲಿಸಿದ್ದರು. ಪತಿ ಮತ್ತು ಅತ್ತೆಯ ವಿರುದ್ಧ ಕೌಟುಂಬಿಕ ದೌರ್ಜನ್ಯ, ಕಿರುಕುಳ ಮತ್ತು ವರದಕ್ಷಿಣೆ ಪ್ರಕರಣವನ್ನು ಮಹಿಳೆ (Woman) ದಾಖಲಿಸಿದ್ದರು. ಮದುವೆಯ ಸಂದರ್ಭದಲ್ಲಿ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೂ ಚಿನ್ನದ ನಾಣ್ಯಕ್ಕೆ ಬೇಡಿಕೆ ಇಡಲಾಗಿತ್ತು ಎಂದು ಮಹಿಳೆ ಆರೋಪಿಸಿದ್ದರು.
ಪ್ರಕರಣದಲ್ಲಿ ಪತಿಯನ್ನು ಬಂಧನ ಮಾಡಿ ಇಡುವುದರಿಂದ ಯಾವ ಪ್ರಯೋಜನ ಇಲ್ಲ ಎಂದ ನ್ಯಾಯಾಲಯ ಮೂವತ್ತು ಸಾವಿರ ರೂ. ಬಾಂಡ್ ಮತ್ತು ಶ್ಯೂರಿಟಿ ಆಧಾರದಲ್ಲಿ ನಿರೀಕ್ಷಣಾ ಜಾಮೀನು ನೀಡಿತು.
ಜೋಡಿ 2017 ರಲ್ಲಿ ದಾಂಪತ್ಯಕ್ಕೆ ಕಾಲಿರಿಸಿದ್ದರು. ಮೂರು ವರ್ಷದ ಮಗು ಸಹ ಇದೆ. ಮದುವೆ ಸಂದರ್ಭ ಎಲ್ಲರಿಗೂ ಚಿನ್ನದ ನಾಣ್ಯ ನೀಡಲು ವರನ ಕಡೆಯವರು ಬೇಡಿಕೆ ಇಟ್ಟಿದ್ದರು ಎನ್ನುವುದು ಮಹಿಳೆಯ ಪ್ರಮುಖ ಆರೋಪ. ಇದೇ ಕಾರಣಕ್ಕೆ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿದ್ದರು.
ಇನ್ನೊಂದು ಕಡೆ ಗಂಡ ಸಹ ತನ್ನ ವಾದ ಮುಂದೆ ಇಟ್ಟಿದ್ದಾರೆ. ಪತ್ನಿಗೆ ದುಬಾರಿ ಫೋನ್ ಉಡುಗೊರೆಯಾಗಿ ನೀಡಿದ್ದೇನೆ. ಕೇಳಿದ್ದನ್ನೆಲ್ಲ ಸಾಲ ಮಾಡಿ ತಂದು ಕೊಟ್ಟಿದ್ದೇನೆ. ಮದುವೆ ನಂತರ ವಿದೇಶಕ್ಕೆ ಕರೆದುಕೊಂಡು ಹೋಗಿದ್ದೆ. ಎಲ್ಲವನ್ನು ತ್ಯಾಗ ಮಾಡಿ ಆಕೆಯ ಒಳಿತಿಗೆ ಮುಂದಾಗಿದ್ದೆ ಎಂದಿದ್ದಾನೆ.
ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ಪತಿಯ ಪರವಾಗಿಯೂ ಅನೇಕ ಆರೋಪಗಳನ್ನು ಮಾಡಲಾಗಿದೆ. ಮನೆ ಖರೀದಿಸಲು ಸಾಲ ಮಾಡಿದ್ದು, ಮದುವೆಯಾದ ಬಳಿಕ ಪತ್ನಿಗೆ ದುಬಾರಿ ಬೆಲೆಯ ಸೆಲ್ ಫೋನ್ ಉಡುಗೊರೆಯಾಗಿ ನೀಡಿದ್ದಾಗಿಯೂ ಪತಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮದುವೆಯ ನಂತರ ಪತ್ನಿಯನ್ನು ಮಾರಿಷಸ್‌ಗೆ ಸುತ್ತಾಡಲು ಕರೆದುಕೊಂಡು ಹೋಗಿದ್ದ ಎಂದೂ ಪತಿ ಹೇಳಿದ್ದಾನೆ. ಪತ್ನಿಗಾಗಿ ಇಷ್ಟೊಂದು ತ್ಯಾಗ ಮಾಡಿದ್ದರೂ ಆಕೆಯೇ ಆರೋಪ ಮಾಡುತ್ತಿದ್ದಾಳೆ ಎಂದು ವಾದ ಮುಂದಿಟ್ಟಿದ್ದಾನೆ.
ಈ ಎಲ್ಲ ವಾದ ಮತ್ತು ಆರೋಪಗಳನ್ನು ಆಲಿಸಿದ ನ್ಯಾಯಮೂರ್ತಿ ಸಾರಂಗ್ ಕೊತ್ವಾಲ್, ಈ ಇಬ್ಬರೂ ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ ಎನ್ನುತ್ತ ' ಮದುವೆ ಸ್ವರ್ಗದಲ್ಲಿ ನಿಶ್ಚಿಯವಾಗುವುದಿಲ್ಲ, ನರಕದಲ್ಲಿ ನಿಶ್ಚಯವಾಗುವಂತೆ ಕಾಣುತ್ತದೆ ಎಂದು ಟಿಪ್ಪಣಿ ಮಾಡಿದ್ದಾರೆ.
ಪೊಲೀಸಪ್ಪನ ವಿರುದ್ಧ ಪ್ರತಿಭಟನೆ
ನಂಬಿಸಿ ಕೈಕೊಟ್ಟ ಪೊಲೀಸಪ್ಪನ ವಿರುದ್ಧ ಯುವತಿ ಧರಣಿ ಕುಳಿತುಕೊಂಡಿದ್ದ ಪ್ರಕರಣ ಟಿ ನರಸೀಪುರದಿಂದ ವರದಿಯಾಗಿತ್ತು. ಪೊಲೀಸ್ ಕಾನ್ಸ್‌ಟೇಬಲ್ ಮದುವೆಯಾಗುವುದಾಗಿ ನಂಬಿಸಿ ಕೈ ಕೊಟ್ಟಿರುವ ಆರೋಪ ಕೇಳಿ ಬಂದಿದೆ. ಟಿ.ನರಸೀಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರವಿ ವಿರುದ್ಧ ಆರೋಪ ಕೇಳಿಬಂದಿತ್ತು.
ಬೆಂಗಳೂರಿನ ನಿವಾಸಿ ಸಂತ್ರಸ್ತೆ ಯುವತಿ ಧರಣಿ ಆರಂಭಿಸಿದ್ದಾರೆ 2018ರಲ್ಲಿ ಫೇಸ್ಬುಕ್(Facebook) ಮೂಲಕ ಸ್ನೇಹ ಶುರುವಾಗಿತ್ತು. ಬಳಿಕ ಪ್ರೇಮಕ್ಕೆ ತಿರುಗಿದ ರವಿ ಮತ್ತು ಯುವತಿಯ ಸ್ನೇಹ ಇವತ್ತು ಈ ಹಂತಕ್ಕೆ ಬಂದು ನಿಂತಿದೆ. ದೈಹಿಕವಾಗಿ ಬಳಸಿಕೊಂಡಿರುವುದಾಗಿ ಯುವತಿ ಗಂಭೀರ ಆರೋಪ ಮಾಡಿದ್ದಳು.
