ನವದೆಹಲಿ (ಮೇ.07): ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ದೇಶಾದ್ಯಂತ ಕಠಿಣ ಲಾಕ್‌ಡೌನ್‌ ಜಾರಿ ಮಾಡಬೇಕೆಂಬ ಕೂಗು ಎದ್ದಿದೆ. ಆದರೆ ವೈರಸ್‌ ನಿಗ್ರಹಕ್ಕಾಗಿ ದೇಶದ ಹಲವು ಭಾಗಗಳಲ್ಲಿ ಈಗಾಗಲೇ ಲಾಕ್‌ಡೌನ್‌, ರಾತ್ರಿ ಕರ್ಫ್ಯೂ ಸೇರಿದಂತೆ ಇನ್ನಿತರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ಬದಲಾಗಿ ಬಹುತೇಕ ರಾಜ್ಯಗಳೇ ಇಂಥ ಘೋಷಣೆ ಮಾಡಿರುವ ಕಾರಣ ಒಂದು ರೀತಿಯಲ್ಲಿ ದೇಶವ್ಯಾಪಿ ಅಘೋಷಿತ ಲಾಕ್ಡೌನ್‌ ಜಾರಿಯಲ್ಲಿದೆ.

ದೆಹಲಿ: ದೆಹಲಿಯಲ್ಲಿ ಏ.19ರಿಂದ ಲಾಕ್‌ಡೌನ್‌ ಹೇರಲಾಗಿದ್ದು, ಇದು ಮೇ 10ರವರೆಗೆ ಜಾರಿಯಲ್ಲಿರಲಿದೆ.

ಹರಾರ‍ಯಣ: ಮೇ 3ರಿಂದ ಒಂದು ವಾರ ಕಾಲ ಲಾಕ್‌ಡೌನ್‌ ಜಾರಿಯಲ್ಲಿದೆ. ಇದಕ್ಕೂ ಮುನ್ನ 9 ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಅನುಷ್ಟಾನ.

ಬಿಹಾರ: ಮೇ 4ರಿಂದ ಮೇ 15ರವರೆಗೆ ಲಾಕ್‌ಡೌನ್‌

ಒಡಿಶಾ: ಮೇ 4ರಿಂದ ಮೇ 19ರವರೆಗೆ 14 ದಿನ ಲಾಕ್‌ಡೌನ್‌

ಕರ್ನಾಟಕ: ಏ.27ರಿಂದ ಮೇ 6ರವರೆಗೆ ಲಾಕ್‌ಡೌನ್‌ ರೀತಿಯ ನಿಯಂತ್ರಣಗಳು

ರಾಜಸ್ಥಾನ: ಮೇ 17ರವರೆಗೆ ಲಾಕ್‌ಡೌನ್‌ ರೀತಿಯ ನಿರ್ಬಂಧಗಳು

ಜಾರ್ಖಂಡ್‌: ಮೇ 6ರವರೆಗೆ ಲಾಕ್‌ಡೌನ್‌ ರೀತಿಯ ನಿರ್ಬಂಧಗಳು

ಛತ್ತೀಸ್‌ಗಢ: ಮೇ 15ರವರೆಗೆ ಲಾಕ್‌ಡೌನ್‌ ವಿಸ್ತರಿಸಲು ಜಿಲ್ಲಾಧಿಕಾರಿಗಳಿಗೆ ಸರ್ಕಾರ ಅಧಿಕಾರ

ಗುಜರಾತ್‌: 29 ನಗರಗಳಲ್ಲಿ ರಾತ್ರಿ ಕರ್ಫ್ಯೂ ಜೊತೆಗೆ ಸಾರ್ವಜನಿಕ ಸಮಾರಂಭ, ಇತರೆ ಚಟುವಟಿಕೆಗಳಿಗೆ ನಿಷೇಧ

ಜನತಾ ಕರ್ಫ್ಯೂಗೆ ಜನ ಡೋಂಟ್ ಕೇರ್, ಮೇ.12ರಿಂದ ಲಾಕ್‌ಡೌನ್ ಫಿಯರ್! .

ಮಧ್ಯಪ್ರದೇಶ: ಮೇ 7ರವರೆಗೆ ಕೊರೋನಾ ಕರ್ಫ್ಯೂ ಜಾರಿ, ತುರ್ತುಸೇವೆಗಳಿಗೆ ಮಾತ್ರವೇ ಅವಕಾಶ

ಮಹಾರಾಷ್ಟ್ರ: ಮೇ 15ರವರೆಗೆ ಲಾಕ್‌ಡೌನ್‌ ರೀತಿಯ ನಿರ್ಬಂಧಗಳ ವಿಸ್ತರಣೆ.

ತಮಿಳುನಾಡು: ಮೇ 20ರವರೆಗೆ ಎಲ್ಲಾ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ‍್ಯಕ್ರಮಗಳಿಗೆ ಬ್ರೇಕ್‌

ಕೇರಳ: ಮೇ 16ರವರೆಗೂ ಸಂಪೂರ್ಣ ಲಾಕ್ಡೌನ್‌ ಘೋಷಣೆ

ಬಂಗಾಳ: ಮುಂದಿನ ಆದೇಶದವರೆಗೂ ಜನತಾ ಕರ್ಫ್ಯೂ ಜಾರಿ.

ಹಿಮಾಚಲಪ್ರದೇಶ: ಮೇ 7ರಿಂದ 10 ದಿನಗಳ ಕಾಲ ಲಾಕ್ಡೌನ್‌ ಜಾರಿ

ಪುದುಚೇರಿ: ಮೇ 10ರವರೆಗೂ ಲಾಕ್ಡೌನ್‌ ಜಾರಿಯಲ್ಲಿ.

ನಾಗಾಲ್ಯಾಂಡ್‌: ಮೇ14ರವೆಗೂ ರಾಜ್ಯದಲ್ಲಿ ಭಾಗಶಃ ಕರ್ಫ್ಯೂ ಜಾರಿಯಲ್ಲಿ

ಮಿಜೋರಾಂ: ಮೇ 3ರಿಂದ 8 ದಿನಗಳ ಕಾಲ ಲಾಕ್ಡೌನ್‌ ಜಾರಿಯಲ್ಲಿ.

ಜಮ್ಮು ಮತ್ತು ಕಾಶ್ಮೀರ: ಎಲ್ಲಾ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ

ಉತ್ತರಾಖಂಡ: ರಾಜ್ಯದಲ್ಲಿ ಹಲವು ರೀತಿಯ ನಿರ್ಬಂಧ ಮತ್ತು ರಾತ್ರಿ ಕರ್ಫ್ಯೂ

ತೆಲಂಗಾಣದಲ್ಲಿ ರಾತ್ರಿ ಕರ್ಫ್ಯೂ, ಆಂಧ್ರಪ್ರದೇಶದಲ್ಲಿ ಭಾಗಶಃ ಕರ್ಫ್ಯೂ, ಅಸ್ಸಾಂನಲ್ಲಿ ರಾತ್ರಿ ಕರ್ಫ್ಯೂ

ದಾಖಲೆಯ 4.12 ಲಕ್ಷ ಕೇಸ್‌, 3980 ಸಾವು

-ಒಟ್ಟು ಸೋಂಕಿತರು 2.10ಕೋಟಿ

ಒಟ್ಟು ಸಾವು 2.30 ಲಕ್ಷ ಸಕ್ರಿಯ ಕೇಸ್‌ 35 ಲಕ್ಷ

 ದೇಶದಲ್ಲಿ ಕೊರೋನಾ ಸೋಂಕಿನ 2ನೇ ಅಲೆ ಆರ್ಭಟ ತೀವ್ರಗೊಂಡಿದ್ದು, ಗುರುವಾರ ಸೋಂಕು ಮತ್ತು ಸಾವು ಎರಡರಲ್ಲೂ ಮತ್ತೆ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. ಗುರುವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 4,12,262 ಹೊಸ ಪ್ರಕರಣಗಳು ದೃಢವಾಗಿವೆ ಮತ್ತು ದಾಖಲೆಯ 3980 ಸಾವು ಸಂಭವಿಸಿದೆ. ಈ ಮೂಲಕ ದೇಶದ ಒಟ್ಟು ಸೋಂಕಿತರ ಸಂಖ್ಯೆ 2.10 ಕೋಟಿಗೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 2,30,168ಕ್ಕೆ ತಲುಪಿದೆ.

ಮಿತಿ ಮೀರಿದ ಸೋಂಕು : 2 ವಾರ ಲಾಕ್ಡೌನ್‌ ಪಕ್ಕಾ! .

ಸೋಂಕಿನ ಸತತ ಏರುಗತಿಯ ಪರಿಣಾಮ ದೇಶದ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 35.66ಲಕ್ಷಕ್ಕೆ ಹೆಚ್ಚಿದೆ. ಚೇತರಿಕೆ ಪ್ರಮಾಣ ಶೇ.81.99ಕ್ಕೆ ಕುಸಿದಿದೆ. ಒಟ್ಟು ಸೋಂಕಿತರ ಪೈಕಿ 1.72 ಕೋಟಿ ಮಂದಿ ಗುಣಮುಖರಾಗಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona