Asianet Suvarna News Asianet Suvarna News

ವರ್ಷಗಳ ಹಿಂದೆಯೇ ಮಲಯಾಳಕ್ಕೆ ಬದಲಾಗಿದೆ ಕೇರಳದ ಕನ್ನಡ ಊರುಗಳ ಹೆಸರು

  • ವರ್ಷಗಳ ಹಿಂದೆಯೇ ಮಲಯಾಳಕ್ಕೆ ಬದಲಾಗಿದೆ ಕೇರಳದ ಕನ್ನಡ ಊರುಗಳ ಹೆಸರು
  • ಲೋಕೋಪಯೋಗಿ ಇಲಾಖೆ ಬೋರ್ಡ್ ಗಳಲ್ಲಿ ಸ್ಥಳನಾಮ ಮಲಯಾಳೀಕರಣ
  • ಕಾಸರಗೋಡು ಜಿಲ್ಲೆಯ ಹಲವೆಡೆ ವರ್ಷಗಳ ಹಿಂದೆಯೇ ‌ ಮಲಯಾಳಿ ಹೆಸರಿನ ಬೋರ್ಡ್ ಗಳು ರಾರಾಜಿಸುತ್ತಿವೆ
Many kannada villages Name changed  One year Back in kasaragod snr
Author
Bengaluru, First Published Jun 30, 2021, 3:19 PM IST

ಬೆಂಗಳೂರು (ಜೂ.30):  ವರ್ಷಗಳ ಹಿಂದೆಯೇ ಮಲಯಾಳಕ್ಕೆ ಬದಲಾಗಿದೆ ಕೇರಳದ ಕನ್ನಡ ಊರುಗಳ ಹೆಸರು!  ರಾಷ್ಟ್ರೀಯ ಹೆದ್ದಾರಿಯ ಲೋಕೋಪಯೋಗಿ ಇಲಾಖೆ ಬೋರ್ಡ್ ಗಳಲ್ಲಿ ಸ್ಥಳನಾಮ ಮಲಯಾಳೀಕರಣವಾಗಿರುವುದು ಕಂಡು ಬಂದಿದೆ. 

ಕಾಸರಗೋಡು ಜಿಲ್ಲೆಯ ಹಲವೆಡೆ ವರ್ಷಗಳ ಹಿಂದೆಯೇ ‌ ಮಲಯಾಳಿ ಹೆಸರಿನ ಬೋರ್ಡ್ ಗಳು ರಾರಾಜಿಸುತ್ತಿವೆ.  ಕಂದಾಯ ಇಲಾಖೆ, ಪ್ರವಾಸೋದ್ಯಮ ಇಲಾಖೆ ಗುರುತಿಸಿದ ಸ್ಥಳನಾಮಗಳೂ‌ ಮಲಯಾಳೀಕರಣ ಮಾಡಲಾಗಿದೆ. 

ಕಾಸರಗೋಡು ಗ್ರಾಮಗಳಿಗೆ ಮಲಯಾಳಂ ಹೆಸರು: ವಿರೋಧ ...

ಮಂಜೇಶ್ವರವನ್ನ ಮಂಜೇಶ್ವರಂ, ಕುಂಬ್ಲೆಯನ್ನ ಕುಂಬ್ಲಾ ಎಂದು ಹಲವು ಊರುಗಳ ಹೆಸರಲ್ಲಿ ಬದಲಾವಣೆ ತರಲಾಗಿದೆ.  ಕನ್ನಡ ಊರುಗಳ ಹೆಸರು ಬದಲಿಸಿಲ್ಲ ಎಂದು ಕೇರಳ ಸರ್ಕಾರ ಹೇಳಿದರೂ ಕಾಸರಗೋಡಿನ ರಸ್ತೆಗಳಲ್ಲೇ ಇದಕ್ಕೆ ಸಾಕ್ಷ್ಯ ಸಿಗುತ್ತಿದೆ.

ರೈಲ್ವೇ ಸ್ಟೇಷನ್ ಬೋರ್ಡ್, ಬ್ಯಾಂಕ್ ನಾಮಫಲಕ ಸೇರಿ ಹಲವೆಡೆ ಮಲಯಾಳಂ ಬೋರ್ಡ್ ಕಂಡು ಬರುತ್ತಿದ್ದು,  ಹೆಸರು ಬದಲಾಗಿ ವರ್ಷಗಳ ಬಳಿಕ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಗಮನಕ್ಕೆ ಬಂದಂತಿದೆ.  ಕಾಸರಗೋಡು ಜಿಲ್ಲೆಯ ಹಲವು ಊರುಗಳ ಹೆಸರು ಅಧಿಕೃತವಾಗಿ ಮಲೆಯಾಳಕ್ಕೆ ಬದಲು ಮಾಡಲಾಗಿದೆ. 

2013ರಲ್ಲೇ ಮಂಜೇಶ್ವರಂ ಎಂಬ ಮಲಯಾಳಂ ಹೆಸರು ಬದಲಾಯಿಸಿರೋ ಕೇರಳ ಸರ್ಕಾರದ ಕಂದಾಯ ಇಲಾಖೆ ಪ್ರತಿ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ. 

Follow Us:
Download App:
  • android
  • ios