ಜೇಬಲ್ಲೇ ರಾಜೀನಾಮೆ ಪತ್ರ ಇಟ್ಟುಕೊಂಡು ಮೌನದಿಂದಲೇ ಜಗತ್ತು ಗೆದ್ದ ಮನಮೋಹನ ಸಿಂಗ್!
80 ರ ದಶಕದಲ್ಲಿ ನಡೆದ ಕೊಲ್ಲಿ ಯುದ್ಧದ ಕಾರಣದಿಂದ ಮತ್ತು ವಿದೇಶಿ ಬ್ಯಾಂಕ್ ಗಳಿಂದ ವಿಪರೀತ ಸಾಲಗಳನ್ನು ತೆಗೆದು ಕೊಂಡ ಕಾರಣದಿಂದ ಭಾರತದ ವಿದೇಶಿ ವಿನಿಮಯ ಸಾಮರ್ಥ್ಯ 1 ಬಿಲಿಯನ್ ಡಾಲರ್ ಗಿಂತ ಕಡಿಮೆ ಬಂದಿತ್ತು.
ಪ್ರಶಾಂತ್ ನಾತು, ಇಂಡಿಯಾ ಗೇಟ್ ಅಂಕಣ
ಆರ್ಥಿಕವಾಗಿ ಭಾರತ ಕುಸಿತದ ಸ್ಥಿತಿಯಲ್ಲಿ ಇದ್ದಾಗ ಒಬ್ಬ ರಾಜಕಾರಣಿ ಹಣಕಾಸು ನಿರ್ವಹಣೆ ಮಾಡುವುದ್ದಕ್ಕಿಂತ ಒಬ್ಬ ಅರ್ಥಶಾಸ್ತ್ರೀಯನ ಕೈಗೆ ಕೊಟ್ಟರೆ ಹೆಚ್ಚು ಕಠಿಣ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಪಿ.ವಿ.ನರಸಿಂಹ ರಾಯರಿಗೆ ಮನವರಿಕೆ ಆಗಿರುತ್ತದೆ. ಇವತ್ತು ನಾವೇನು 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಬಗ್ಗೆ ಮಾತನಾಡು ತ್ತಿದ್ದೇವೆಯೋ ಅದರ ಅಡಿಪಾಯ ಇಟ್ಟವರೇ ಪಿ.ವಿ.ನರಸಿಂಹ ರಾಯರು ಮತ್ತು ಡಾ| ಮನಮೋಹನ್ ಸಿಂಗ್ ಜೋಡಿ.
ರಾಜಕಾರಣಿಗಳಲ್ಲಿ ವಿರಳ ಅರ್ಥ ಕಾರಣಿ
1991 ಜೂನ್ ತಿಂಗಳು ರಾಜೀವ್ ಗಾಂಧಿ ಹತ್ಯೆ ನಡೆದು ಪಿ ವಿ ನರಸಿಂಹ ರಾಯರು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕಾಲ ಘಟ್ಟ. ಇನ್ನು ಚುನಾವಣಗಳ ಫಲಿತಾಂಶ ಬಂದಿರಲಿಲ್ಲ. ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ಅಧ್ಯಕ್ಷ ಮನಮೋಹನ ಸಿಂಗ್ ಬಂದು ಪಿವಿ ನರಸಿಂಹ ರಾಯರನ್ನು ಬಂದು ಭೇಟಿಯಾಗಿ ಚಂದ್ರಶೇಖರ ಅವರು ನನ್ನನ್ನು ನೇಮಿಸಿದ್ದಾರೆ ಆದರೆ ಹೊಸ ಪ್ರಧಾನಿ ಬಂದ ಮೇಲೆ ತೆಗೆದು ಹಾಕಿದರೆ ಆಗ ನಂಗೆ ದಿಲ್ಲಿಯಲ್ಲಿ ಇರಲು ಬೇರೆ ಮನೆ ಕೂಡ ಇಲ್ಲ ಅಂದಾಗ ಪಿವಿಏನ್ " ಯಾರೇ ಪ್ರಧಾನಿ ಆದರು ನಾನು ಹೇಳುತ್ತೇನೆ ಚಿಂತೆ ಮಾಡಬೇಡಿ " ಎಂದು ಹೇಳುತ್ತಾ ನಾವು ಬಂಗಾರದ ಮೇಲೆ ಬಂಗಾರ ವನ್ನು ಜಪಾನ್ ಮತ್ತು ಲಂಡನ್ ಬ್ಯಾಂಕ್ ಗಳಲ್ಲಿ ಇಟ್ಟು ಸಾಲ ತರುತ್ತಿದ್ದೇವೆ ಇದಕ್ಕೆ ಪರಿಹಾರ ಏನೂ ಎಂದು ಕೇಳಿದಾಗ ಮನಮೋಹನ ಸಿಂಗ್ " ರೂಪಾಯಿ ಅಪಮೌಲ್ಯ ವ್ಯಾಪಾರ ಮತ್ತು ಕೈಗಾರಿಕಾ ನಿಯಮಗಳಲ್ಲಿ ಸರ್ಕಾರಿ ಕಪಿ ಮುಷ್ಠಿ ಕೊನೆಗಾಣಿಸುವುದು" ಸೇರಿದಂತೆ ಅನೇಕ ಸಲಹೆ ಗಳನ್ನು ನೀಡುತ್ತಾರೆ. ಯಾವಾಗ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಪಿವಿ ನರಸಿಂಹ ರಾಯರನ್ನು ಆಯ್ಕೆ ಮಾಡಲಾಗುತ್ತೋ ಆಗ ಸೋನಿಯಾ ಆಪ್ತ ಕ್ಯಾಪ್ಟನ್ ಸತೀಶ್ ಶರ್ಮಾ ನರಸಿಂಹರಾಯರನ್ನು ಭೇಟಿಯಾಗಿ ಯಾರು ಮುಂದಿನ ಹಣಕಾಸು ಮಂತ್ರಿ ಅಂತ ಕೇಳಿದಾಗ ಪಿವಿಏನ್ " ವೃತ್ತಿಪರ ರಾಜಕಾರಣಿ ಅಂತೂ ಖಂಡಿತ ಅಲ್ಲ " ಅನ್ನುತ್ತಾರೆ. ತನ್ನ ಪರಮಾಪ್ತ ಅಧಿಕಾರಿ ಪಿ ಸಿ ಅಲೆಕ್ಸ0ಡಾರ ರನ್ನು ಡಾ ಮನಮೋಹನ ಸಿಂಗ್ ರ ಬಳಿಗೆ ಕಳುಹಿಸಿ ಡಾ ಸಿಂಗ್ ಒಪ್ಪಿದ ನಂತರ ರಾಷ್ಟ್ರಪತಿ ಆರ್ ವೆಂಕಟರಾಮನ ಬಳಿಗೆ ಇವರ ಹೆಸರು ಹೋದಾಗ ಕಾಂಗ್ರೆಸ್ ನಾಯಕರೇ ಹೌ ಹಾರುತ್ತಾರೆ. ಆದರೆ ಆರ್ಥಿಕವಾಗಿ ಭಾರತ ಕುಸಿತದ ಸ್ಥಿತಿಯಲ್ಲಿ ಇದ್ದಾಗ ಒಬ್ಬ ರಾಜಕಾರಣಿ ಹಣಕಾಸು ನಿರ್ವಹಣೆ ಮಾಡುವುದ್ದಕ್ಕಿಂತ ಒಬ್ಬ ಅರ್ಥ ಶಾಸ್ತ್ರೀಯ ಕೈಗೆ ಕೊಟ್ಟರೆ ಹೆಚ್ಚು ಕಠಿಣ ನಿರ್ಧಾರ ತೆಗೆದು ಕೊಳ್ಳಬಹುದು ಎಂದು ಪಿ ವಿ ನರಸಿಂಹ ರಾಯರಿಗೆ ಮನವರಿಕೆ ಆಗಿರುತ್ತದೆ.ಇವತ್ತು ನಾವೇನು 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಬಗ್ಗೆ ಮಾತನಾಡುತ್ತಿದೆಯೋ ಅದರ ಅಡಿಪಾಯ ಇಟ್ಟವರೇ ಪಿ ವಿ ನರಸಿಂಹ ರಾಯರು ಮತ್ತು ಡಾ ಮನಮೋಹನ ಸಿಂಗ್ ರ ಜೋಡಿ.ಡಾ ಮನಮೋಹನ್ ಸಿಂಗ್ ಅವರೇ ಪಿ ವಿ ನರಸಿಂಹ ರಾಯರನ್ನು ನನ್ನ ರಾಜಕೀಯ ಗುರು ಎಂದು ಹೇಳಿ ಕಾಲು ಮುಟ್ಟಿ ನಮಸ್ಕಾರ ಮಾಡುತ್ತಿದ್ದರು ಅಂತೆ.
1991 ರ ಆರ್ಥಿಕ ಪರಿಸ್ಥಿತಿ ಹೇಗಿತ್ತು ?
80 ರ ದಶಕದಲ್ಲಿ ನಡೆದ ಕೊಲ್ಲಿ ಯುದ್ಧದ ಕಾರಣದಿಂದ ಮತ್ತು ವಿದೇಶಿ ಬ್ಯಾಂಕ್ ಗಳಿಂದ ವಿಪರೀತ ಸಾಲಗಳನ್ನು ತೆಗೆದು ಕೊಂಡ ಕಾರಣದಿಂದ ಭಾರತದ ವಿದೇಶಿ ವಿನಿಮಯ ಸಾಮರ್ಥ್ಯ 1 ಬಿಲಿಯನ್ ಡಾಲರ್ ಗಿಂತ ಕಡಿಮೆ ಬಂದಿತ್ತು. 3 ವಾರ ಕಳೆದರೆ ನಮ್ಮ ಬಳಿ ಆಮದು ಮಾಡಿಕೊಳ್ಳಲು ಕೂಡ ದುಡ್ಡು ಇರಲಿಲ್ಲ. ಬ್ರಿಟನ್ ಜಪಾನ್ ನೆದರ್ ಲ್ಯಾ0ಡ್ ಜರ್ಮನಿ ಬಳಿ ನಾವು ಸಾಲದ ಮೇಲೆ ಸಾಲ ಕೇಳಿದರು ಕೂಡ ಕೊಡುವವರು ಗತಿ ಇರಲಿಲ್ಲ.ವಿಶ್ವ ಬ್ಯಾಂಕ್ ಆಯ್ ಎಂ ಎಫ್ ನಂಥ ಸಂಸ್ಥೆಗಳು ನಿಮಗೆ ಬಡ್ಡಿ ತುಂಬಲು ಆಗುತ್ತಿಲ್ಲ ಇನ್ನು ಹೊಸ ಸಾಲ ಕೊಡುವುದು ಹೇಗೆ ಅನ್ನುವ ಪ್ರಶ್ನೆ ಕೇಳಿ ನಿಮ್ಮ ಮಾರುಕಟ್ಟೆ ಯನ್ನು ಮುಕ್ತ ಗೊಳಿಸಿ ಹೊಸ ಸಾಲ ತೆಗೆದು ಕೊಂಡು ಹೋಗಿ ಅನ್ನುತ್ತಿದ್ದವು. ಆದರೆ ಪಂಡಿತ ನೆಹರು ಕಾಲದಿಂದಲೂ "ಮಾರ್ಕೆಟ್ " ಎಂದರೆ ಕೆಟ್ಟ ಪದ ಅನ್ನುವ ರೀತಿ ಬೆಳೆದ ಎಡ ಬಲ ಸಮಾಜವಾದಿ ಮತ್ತು ಮೂಲ ಕಾಂಗ್ರೆಸ್ಸಿಗರಿಗೆ ಮುಕ್ತ ಮಾರುಕಟ್ಟೆ ಎಂದ ಕೂಡಲೇ ವಿದೇಶಿ ಬಂಡ ವಾಳ ಶಾಹಿ ಗಳಿಗೆ ದೇಶವನ್ನು ಅಡವು ಇಟ್ಟಂತೆ ಎಂಬ ಪಟ್ಟ ಕಟ್ಟ ಲಾಗುತ್ತಿತ್ತು. ಆದರೆ 1989 ರಿಂದ 1991 ರ ವರೆಗೆ 2 ವರ್ಷದಲ್ಲಿ 5 ಕ್ಕಿಂತ ಹೆಚ್ಚು ಬಾರಿ ರಹಸ್ಯವಾಗಿ ಲಂಡನ್ ಸ್ವಿಸ್ ಜಪಾನ್ ಬ್ಯಾಂಕ್ ಗಳಿಗೆ 67 ಟನ್ ಗಿಂತ ಹೆಚ್ಚು ಬಂಗಾರವನ್ನು ಸಾಗಿಸಿ 200 ರಿಂದ 300 ಮಿಲಿಯನ್ ಸಾಲ ಮಾಡುವ ಪರಿಸ್ಥಿತಿಗೆ ಬಂದು ಮುಟ್ಟಿತ್ತು ನಮ್ಮ ಭಾರತ. ಜಾಗತಿಕ ವಾಗಿ ನೋಡಿದಾಗ ಕೂಡ ಎರಡು ಧ್ರುವಗಳ ನಡುವೆ ಹಂಚಿ ಹೋಗಿದ್ದ ಪ್ರಪಂಚದ ರಾಜಕಾರಣ ಸೋವಿಯತ್ ಯೂನಿಯನ್ ನ ವಿಘಟನೆಯ ನಂತರ ಅಮೇರಿಕಾದತ್ತ ಏಕ ಮುಖವಾಗಿ ನೋಡುವ ಸ್ಥಿತಿ ಬಂದಿತ್ತು. ಭಾರತದ ರಾಜಕಾರಣಿಗಳಿಗೆ ಕೂಡ ಇದು ಅರ್ಥ ಆಗತೊಡಗಿತ್ತು. ಆದರೆ ರಾಜೀವ್ ಗಾಂಧಿ ವಿ ಪಿ ಸಿಂಗ್ ಅಥವಾ ಚಂದ್ರ ಶೇಖರ್ ಗೆ ಆಗಲಿ ಕಠಿಣ ನಿರ್ಣಯ ತೆಗೆದು ಕೊಳ್ಳುವ ರಾಜಕೀಯ ಇಚ್ಚಾ ಶಕ್ತಿ ಪ್ರದರ್ಶಿಸಲಿಲ್ಲ . ಆದರೆ ಆ ಕಠಿಣ ಪರಿಸ್ಥಿತಿಯಲ್ಲಿ 1991 ರ ಜುಲೈ 24 ಕ್ಕೆ ಮನಮೋಹನ ಸಿಂಗ್ ಮಂಡಿಸಿದ ಮುಂಗಡ ಪತ್ರದಲ್ಲಿ ಭಾರತದ ಬಾಗಿಲು ಗಳನ್ನು ವಿಶ್ವಕ್ಕೆ ತೆರೆಯುವ ಸಾಹಸ ಕ್ಕೆ ಕೈ ಹಾಕಿದರು. ಆಗ ಡಾ ಮನಮೋಹನ ಸಿಂಗ್ ರನ್ನು ಸಿ ಆಯ್ ಏ ಎಜೇಂಟು ಭಾರತ ಮಾತೆಯನ್ನು ಮಾರಿದವರು ಎಂದು ಬಯ್ದವರು ಕೂಡ ಇಂದು ಮುಕ್ತ ಮಾರುಕಟ್ಟೆ ತಂದ ಲಾಭ ವನ್ನು ಕೊ0ಡಾಡುತ್ತಿದ್ದಾರೆ ಅದು ಮನಮೋಹನ ಸಿಂಗ್ ಅವರ ಜೀವಮಾನದ ಸಾಧನೆ.
ನಮ್ ದೇಶಕ್ಕೊಬ್ಬರೇ ರೀ.. ಅಟಲ್ ಬಿಹಾರೀ..: 10 ಘಟನೆಗಳೊಂದಿಗೆ ಅಜಾತಶತ್ರು ಸ್ಮರಿಸುವ ಹೊತ್ತು!
2004 ರಲ್ಲಿ " accidental " ಪ್ರಧಾನ ಮಂತ್ರಿ
16 ಮೇ 2004 ಲೋಕಸಭೆಯಲ್ಲಿ ಭರ್ಜರಿ ಜಯ ಗಳಿಸಿದ ಯು ಪಿ ಏ ನಾಯಕಿ ಸೋನಿಯಾ ಗಾಂಧೀ ಅವರನ್ನು ಎಡ ಪಾರ್ಟಿಗಳು ಸೇರಿದಂತೆ ಮಿತ್ರ ಪಾರ್ಟಿಗಳು ಅಧಿಕೃತ ವಾಗಿ ತಮ್ಮ ನಾಯಕಿ ಎಂದು ಪತ್ರ ನೀಡುತ್ತವೆ.ಆದರೆ ಮೇ 16 ರ ಸಂಜೆ ಇಂದಲೇ ಸುಷ್ಮಾ ಸ್ವರಾಜ್ ಉಮಾ ಭಾರತಿ ಯಂಥ ಬಿಜೆಪಿ ನಾಯಕಿಯರು ವಿದೇಶಿ ಸೋನಿಯಾ ಪ್ರಧಾನಿ ಆದರೆ ತಲೆ ಬೋಳಿಸಿ ಕೊಳ್ಳುತ್ತೇವೆ ಎಂದೆಲ್ಲ ಮಾತಾಡಲು ಶುರು ಮಾಡುತ್ತಾರೆ. ಏಕಾ ಏಕೀ 17 ರ ಮಧ್ಯಾಹ್ನ ಸೋನಿಯಾ ಪ್ರಿಯಾಂಕಾ ರಾಹುಲ್ ಗಾಂಧಿ ಮತ್ತು ರಾಬರ್ಟ್ ವಾದ್ರಾ ಪಾಲ್ಗೊಂಡಿದ್ದ ಕುಟುಂಬ ಸಭೆಗೆ ಮನಮೋಹನ ಸಿಂಗ್ ಮತ್ತು ರಾಜೀವ್ ಮಿತ್ರ ಸುಮನ ದುಬೆ ರನ್ನು ಕರೆಯ ಲಾಗುತ್ತದೆ. ಸೋನಿಯಾ ತುಂಬಾ ನಂಬುತ್ತಿದ್ದ ನಟವರ್ ಸಿಂಗ್ ಅಲ್ಲಿಗೆ ಹೋದಾಗ ರಾಹುಲ್ ಗಾಂಧಿ " ಮಮ್ಮಿ ನೀನು ಪ್ರಧಾನಿ ಆದರೆ ಅಜ್ಜಿ ಮತ್ತು ಅಪ್ಪ ನನ್ನು ಕೊಂದು ಹಾಕಿದಂತೆ ನಿನ್ನನ್ನು ಕೂಡ ಮುಗಿಸುತ್ತಾರೆ ನಾನು ಯಾವುದೇ ಕಾರಣಕ್ಕೂ ಪ್ರಧಾನಿ ಆಗಲು ಬಿಡುವುದಿಲ್ಲ " ಎಂದು ಕೂಗುತ್ತಾ ಇರುತ್ತಾರೆ. ಪ್ರಿಯಾಂಕಾ ಮನಮೋಹನ ಸುಮನ್ ದುಬೆ ಮೌನದಲ್ಲಿ ಶಾಕ್ ಆಗಿ ಕುಳಿತಿದ್ದರೆ ಸೋನಿಯಾ ಮಗ ಹಾಕಿದ ಗೆರೆ ದಾಟಬೇಕಾ ಬೇಡವಾ ಎಂಬ ದ್ವಂದ್ವ ದಲ್ಲಿ ಬಿದ್ದ ಟಿಫಿಕಲ್ ತಾಯಿಯ ಥರ ಆ ಕಡೆ ಒಮ್ಮೆ ಈ ಕಡೆ ಒಮ್ಮೆ ನೋಡುತ್ತಾ ಇರುತ್ತಾರೆ. ಆಗ ಏನೋ ನಿರ್ಧಾರ ಮಾಡಿದವರಂತೆ ಪ್ರಣಬ್ ಮುಖರ್ಜಿ ಶಿವರಾಜ್ ಪಾಟೀಲ್ ಎಂ ಎಲ್ ಪೋತೆದಾರ ಏ ಕೆ ಅಂತೋನಿ ಗುಲಾಮ ನಬಿ ಅಜಾದ್ ಮತ್ತು ಅಹ್ಮದ ಪಟೇಲರನ್ನು ಕರೆಸಿ ಕೊಂಡು " ನಾನು ನಿರ್ಧಾರ ಮಾಡಿದ್ದೇನೆ ಡಾ ಮನಮೋಹನ ಸಿಂಗ್ ಮುಂದಿನ ಪ್ರಧಾನಿ ಆಗುತ್ತಾರೆ " ಎಂದಾಗ ಕೂಡಲೇ ಡಾ ಸಿಂಗ್ " ನಾನು ಅಭಾರಿ ಆದರೆ ನನ್ನ ಒಪ್ಪಿಗೆ ಇಲ್ಲ ನಾನು ಚುನಾವಣೆ ಗೆದ್ದಿಲ್ಲ " ಎಂದಾಗ ಸೋನಿಯಾ ರ ಮೂಡ್ ಏನೂ ಎಂದು ಒಳಗೆ ನೋಡಿದ್ದ ನಟವರ್ ಸಿಂಗ್ " ಸೋನಿಯಾ ನಿರ್ಧಾರ ಅಂತಿಮ ಡಾ ಸಿಂಗ್ ರಿಗೆ ನಿರಾಕರಿಸುವ ಅಧಿಕಾರ ಇಲ್ಲ " ಎಂದು ಹೇಳಿದಾಗ ಸ್ವತಃ ನಟವರ್ ಸಿಂಗ್ ಹೇಳಿಕೊಂಡಿರುವ ಪ್ರಕಾರ ಪ್ರಣಬ್ ಮುಖರ್ಜಿ ಸಿಟ್ಟಿನಿಂದ ಕುದಿಯುತ್ತಾ ನೋಡುತ್ತಿರುತ್ತಾರೆ. ನಂತರ ರಾಷ್ಟ್ರಪತಿ ಭವನಕ್ಕೆ ಡಾ ಅಬ್ದುಲ್ ಕಲಾಂ ಬಳಿ ಹೋದಾಗ ಸೋನಿಯಾ ರನ್ನು ಕೂರಿಸಿಕೊಂಡ ಡಾ ಕಲಾಂ " ಮೇಡಂ ಸೋನಿಯಾ ನೀವು ಯಾವಾಗ ಪ್ರಮಾಣ ವಚನ ಸ್ವೀಕಾರ ಮಾಡುತ್ತೀರಿ " ಎಂದಾಗ ನಾನಲ್ಲ ಡಾ ಮನಮೋಹನ್ ಸಿಂಗ್ ಪ್ರಧಾನಿ ಆಗುತ್ತಾರೆ ಎಂದು ಹೇಳಿದಾಗ ಡಾ ಅಬ್ದುಲ್ ಕಲಾಂ ಸೋನಿಯಾ ಹೆಸರಿಗೆ ಸರ್ಕಾರ ರಚಿಸಲು ಆಹ್ವಾನ ನೀಡುವ ಪತ್ರವನ್ನು ಬದಲಾಯಿಸಿ ಮನಮೋಹನ ಸಿಂಗ್ ರಿಗೆ ಪ್ರಮಾಣ ವಚನಕ್ಕೆ ಆಹ್ವಾನ ಕೊಡುತ್ತಾರೆ. ಬಹುತೇಕ ಪ್ರಪಂಚದ ರಾಜಕಾರಣದಲ್ಲಿ ಒಂದು ನೇರವಾದ ಚುನಾವಣೆ ಕೂಡ ಗೆಲ್ಲದೆ ಪ್ರಧಾನಿ ಮತ್ತು ಹಣಕಾಸು ಸಚಿವರಾದ ವ್ಯಕ್ತಿ ಅಂದರೆ ಡಾ ಮನಮೋಹನ್ ಸಿಂಗ್ ಮಾತ್ರ
ಸಿಂಗ್ is ಕಿಂಗ್
2004 ರಲ್ಲಿ ಪ್ರಧಾನಿ ಆದ ಡಾ ಮನಮೋಹನ ಸಿಂಗ್ ರನ್ನು ಜಿ 7 ದೇಶಗಳ ಸಮ್ಮೇಳನ ದಲ್ಲಿ ಸ್ಕಾಟ್ ಲ್ಯಾ0ಡ್ ನಲ್ಲಿ ಭೇಟಿ ಆಗುವ ಅಮೇರಿಕಾದ ಅಧ್ಯಕ್ಷ ಜಾರ್ಜ್ ಬುಷ್ " ಡಾ ಸಿಂಗ್ ನಿಮಗೆ ಏನು ಕೊಡಬಹುದು " ಎಂದು ಕೇಳಿದಾಗ "1974 ಮತ್ತು 1998 ರ ಪೋಖರಾನ್ ಅಣು ಪರೀಕ್ಷೆಗಳ ನಂತರ ನಮ್ಮ ನಾಗರಿಕ ಅಣು ಶಕ್ತಿ ಉಪಯೋಗಕ್ಕೂ ಎಂದು ಪ್ರತಿಭ0ಧ ಹಾಕಿದ್ದೀರಿ ಅದನ್ನು ತೆಗೆಯಿರಿ " ಎಂದು ಹೇಳಿದಾಗ ಬುಷ್" ಹಾಗಾದರೆ ನೀವು ನಿಮ್ಮ ಕೆಲ ಅಣು ರಿಯಾಕ್ಟರ್ ಗಳನ್ನು ತಪಾಸಣೆ ಮಾಡಲು ಅನುಮತಿ ಕೊಡಬೇಕು " ಎಂದು ಕೇಳುತ್ತಾರೆ. ಈ ವಿಷಯ ಭಾರತದಲ್ಲಿ ವಿರೋಧದ ಅಲೆ ಗಳನ್ನು ಎಬ್ಬಿಸುತ್ತದೆ. ಸ್ವತಃ ಬೇಸರ ಗೊಳ್ಳುವ ಸೋನಿಯಾ ಗಾಂಧಿ ವಿದೇಶ ಸಚಿವ ನಟವರ್ ಸಿಂಗ್ ರನ್ನು ಕರೆದು " ನಟವರ್ ಏನು ಭಾರತವನ್ನು ಅಮೇರಿಕ ದ ವಸಾಹತು ಮಾಡಲು ಹೊರಟಿದ್ದೀರಾ " ಎಂದು ತರಾಟೆಗೆ ತೆಗೆದು ಕೊಳ್ಳುತ್ತಾರೆ. ಆಗ ಮತ್ತೊಮ್ಮೆ ಬುಷ್ ಭೇಟಿಗೆ ಅಮೇರಿಕಕ್ಕೆ ತೆರಳುವ ಮನಮೋಹನ ಸಿಂಗ್ ಬುಷ್ ಗೆ ನೇರವಾಗಿ " 22 ರಿಯಾಕ್ಟರ್ ಗಳಲ್ಲಿ ಯಾವುದನ್ನು ತಪಾಸಣೆಗೆ ಕೊಡಬೇಕು ಅನ್ನೋದನ್ನು ಭಾರತ ವೇ ನಿರ್ಧರಿಸಲು ಅವಕಾಶ ಕೊಟ್ಟರೆ ಮಾತ್ರ ಕರಾರಿಗೆ ಸಹಿ ಇಲ್ಲದಿದ್ದರೆ ಬೇಡ " ಎಂದಾಗ ಚೀನಾ ಅನ್ನು ಆರ್ಥಿಕವಾಗಿ ಮತ್ತು ಸಾಮರಿಕವಾಗಿ ಎದುರಿಸುವ ಶಕ್ತಿ ಇರೋದು ಭಾರತಕ್ಕೆ ಮಾತ್ರ ಹೀಗಾಗಿ ಮೈತ್ರಿ ಮಾಡಿಕೊಳ್ಳಲೇ ಬೇಕು ಎಂದು ಬುಷ್ ಮನಮೋಹನ ಇಟ್ಟ ಪ್ರಸ್ತಾವನೆಗೂ ಒಪ್ಪಿಗೆ ಕೊಡುತ್ತಾರೆ. ಇದಕ್ಕೂ ಎಡ ಪಾರ್ಟಿ ಗಳು ತಕರಾರು ತೆಗೆದಾಗ ದಿಲ್ಲಿ ಸಂಸತ್ ಭವನದ ಕಚೇರಿಯಲ್ಲಿ ಕೋಲ್ಕತ್ತಾದ ಟೆಲಿಗ್ರಾಫ್ ಪತ್ರಿಕೆ ಸಂಪಾದಕಿ ಮಾನಿನಿ ಚಟರ್ಜಿ ಯನ್ನು ಕರೆಸಿ ಕೊಂಡ ಮನಮೋಹನ ಸಿಂಗ್ " ಪರಮಾಣು ಕರಾರು ವಿಚಾರದಲ್ಲಿ ಇಟ್ಟ ಹೆಜ್ಜೆ ಹಿಂದೆ ತೆಗೆದು ಕೊಳ್ಳುವುದಿಲ್ಲ ಎಡ ಪಾರ್ಟಿಗಳು ಬೆಂಬಲ ಹಿಂದೆ ತೆಗೆದುಕೊಳ್ಳೋದಾದರೆ ಸರಿ ಬಿಡಿ " ಎಂದು ಹೇಳಿಕೆ ಕೊಟ್ಟು ಕಳುಹಿಸುತ್ತಾರೆ.ಆಮೇಲೆ ಡಾ ಅಬ್ದುಲ್ ಕಲಾಂ ರಿಂದ ಮುಲಾಯಂ ಸಿಂಗ್ ಯಾದವ ಮತ್ತು ಅಮರ್ ಸಿಂಗ್ ರನ್ನು ಸಂಪರ್ಕಿಸಿ ಬೆಂಬಲ ತೆಗೆದು ಕೊಂಡು ಸರ್ಕಾರ ಉಳಿಸುತ್ತಾರೆ. ಅಷ್ಟೇ ಅಲ್ಲ 2009 ರ ಚುನಾವಣೆಯಲ್ಲಿ ಅಡ್ವಾಣಿ ಅವರನ್ನು ಸೋಲಿಸಿ ಕಾಂಗ್ರೆಸ್ ಸೀಟು ಗಳನ್ನು 138 ರಿಂದ 206 ಕ್ಕೆ ಏರಿಸಿ ಕೊಳ್ಳುತ್ತಾರೆ. ಆಗ ಇಂಡಿಯಾ ಟುಡೇ ಕೊಟ್ಟ ಶೀರ್ಷಿಕೆಯೇ ಸಿಂಗ್ is ಕಿಂಗ್.
ಮನ ಮೋಹನರ" ರಾಜೀನಾಮೆ " ಪತ್ರಗಳು
ಡಾ ಮನಮೋಹನ ಸಿಂಗ್ ಸಾರ್ವಜನಿಕ ವಾಗಿ ಮೃದು ವಾಗಿ ಕಂಡರೂ ಕೂಡ ಸ್ವಲ್ಪ ಬೇಸರ ಆದರು ಸಾಕು ಜೇಬಿನಲ್ಲಿ ಸದಾ ಇಟ್ಟುಕೊಂಡಿರುತ್ತಿದ್ದ ರಾಜೀನಾಮೆ ಪತ್ರವನ್ನು ಕೊಟ್ಟು ಬರುವುದು ರೂಢಿ. 1971 ರಲ್ಲಿ ಇಂದಿರಾ ಕ್ಯಾಬಿನೆಟ್ ನಲ್ಲಿ ವಾಣಿಜ್ಯ ಸಚಿವರಾಗಿದ್ದ ಲಲಿತ್ ನಾರಾಯಣ ಮಿಶ್ರ ಗೆ ಸಲಹೆ ಗಾರರಾಗಿದ್ದರು. ಆದರೆ ಯಾವಾಗ ಒಂದು ಕ್ಯಾಬಿನೆಟ್ ಟಿಪ್ಪಣಿಗಾಗಿ ಮಿಶ್ರ ಮತ್ತು ಡಾ ಸಿಂಗ್ ನಡುವೆ ತಿಕ್ಕಾಟ ಶುರು ಆಯಿತೋ ಅಲ್ಲೇ ಸ್ಥಳದಲ್ಲಿಯೇ ರಾಜೀನಾಮೆ ಕೊಟ್ಟು ವಿಷಯ ಇಂದಿರಾ ಗೆ ತಲುಪಿ ಅವರ ಪ್ರಿನ್ಸಿಪಲ್ ಸೇಕ್ರೆಟರಿ ಪಿ ಏನ್ ಹಕ್ಸರ್ ಬಂದು ಡಾ ಸಿಂಗ್ ರನ್ನು ಸಮಾಧಾನ ಪಡೆಸಿ ಹಣಕಾಸು ಇಲಾಖೆಗೆ ಸಲಹೆ ಗಾರರಾಗಿ ನೇಮಿಸುತ್ತಾರೆ. ಮುಂದೆ ರಾಜೀವ್ ಗಾಂಧಿ ಪ್ರಧಾನಿ ಆದಾಗ ಯೋಜನಾ ಆಯೋಗದಲ್ಲಿದ್ದ ಡಾ ಸಿಂಗ್ ರಿಗೂ ರಾಜೀವ್ ಗೂ ಪಂಚ ವಾರ್ಷಿಕ ಕುರಿತಾದ ಸಭೆಯಲ್ಲಿ ಮಾತಿಗೆ ಮಾತು ಬೆಳೆಯುತ್ತದೆ. ಪ್ರಧಾನಿ ಹೊರಗೆ ಬಂದು ಯೋಜನಾ ಆಯೋಗದಲ್ಲಿ " ಬಂಚ್ of ಜೋಕರ್ಸ್ " ಗಳಿದ್ದಾರೆ ಎಂದಾಗ ಮನ ನೊಂದು ಡಾ ಸಿಂಗ್ ರಾಜೀನಾಮೆ ಬಿಸಾಕಿ ಬರುತ್ತಾರೆ. ಆದರೆ ಮರಳಿ ಅಧಿಕಾರಿಗಳು ಸಮಾಧಾನ ಮಾಡುತ್ತಾರೆ. ಮುಂದೆ ಪಿ ವಿ ನರಸಿಂಹರಾಯರಿಗೂ ಹರ್ಷದ ಮೆಹತಾ ಪ್ರಕರಣದ ನಂತರ ರಾಜೀನಾಮೆ ಕೊಡುತ್ತಾರೆ. ಆದರೆ ಮನಮೋಹನರೇ ಹೇಳಿಕೊಂಡ ಪ್ರಕಾರ ಪಿವಿಏನ್ " ಒಂದು ವಾರ ಪತ್ರ ಇಟ್ಟುಕೊಂಡು ಚೆನ್ನಾಗಿ ಬರೆದಿದ್ದೀರಾ ಆದರೆ ಈಗ ಹೋಗು ಕೆಲಸ ಮಾಡಿ " ಎಂದು ಕಳುಹಿಸುತ್ತಾರೆ. ಡಾ ಸಿಂಗ್ ಪರಮಾಣು ಕರಾರು ವಿಷಯದಲ್ಲಿ ಮೂರು ಬಾರಿ ಸೋನಿಯಾ ಬಳಿ ಹೋಗಿ ರಾಜೀನಾಮೆ ಪ್ರಸ್ತಾವನೆ ಇಟ್ಟು ಬಂದಿದ್ದರು. ಆದರೆ ಡಾ ಸಿಂಗ್ ರನ್ನು ತೆಗೆದರೆ ಎಲ್ಲಿ ಪ್ರಣಬ್ ಮುಖರ್ಜಿ ಅವರನ್ನು ಪ್ರಧಾನಿ ಮಾಡಬೇಕು ಆಗುತ್ತದೆ ಎಂದು ಸೋನಿಯಾ ಡಾ ಸಿಂಗ್ ಅವರೇ ಇರುವುದು ಒಳ್ಳೆಯದು ಎಂದು ಆಗಾಗ ಅಹ್ಮದ್ ಪಟೇಲ್ ಮತ್ತು ಅಂಬಿಕಾ ಸೋನಿ ಬಳಿ ಹೇಳಿಕೊಳ್ಳುತ್ತಿದ್ದರಂತೆ.
2009 ಸಮಸ್ಯೆಗಳ ಆರಂಭ
2009 ರ ಚುನಾವಣೆ ನಂತರ ಪ್ರಧಾನಿ ಕಾರ್ಯಲಯದ ಮಂತ್ರಿಯಾಗಿ ಹರೀಶ್ ರಾವತ್ ಹೆಸರನ್ನು ಮನಮೋಹನ ಸಿಂಗ್ ರಾಷ್ಟ್ರಪತಿಗಳಿಗೆ ಕಳುಹಿಸುವ ಪತ್ರದಲ್ಲಿ ಟೈಪ್ ಮಾಡಿಸಿದ್ದಾರೂ ಕೂಡ ಅಹ್ಮದ್ ಪಟೇಲ್ ಕೊನೆಗೆ ಬಂದು ಅದಕ್ಕೆ ಬಿಳಿ ಬಣ್ಣ ಹಚ್ಚಿ ಸುಬ್ಬರಾಮಿ ರೆಡ್ಡಿ ಹೆಸರು ಹಾಕಿದ್ದು ಮನಮೋಹನರಿಗೆ ಅಹ್ಮದ್ ಪಟೇಲ್ ಗೂ ತಿಕ್ಕಾಟ ಶುರು ಆಗಲು ಒಂದು ನೆಪ ಆಯಿತು. ಪ್ರಧಾನಿ ಗಳ ಪ್ರಿನ್ಸಿಪಲ್ ಸೆಕ್ರೆಟರಿ ಪುಲೋಕ್ ಚಟರ್ಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ ಕೆ ನಾರಾಯಣನ್ ಮತ್ತು ಬಹುತೇಕ ಪ್ರಧಾನಿ ಕಾರ್ಯಲಯದ ಅಧಿಕಾರಿಗಳು ಸೋನಿಯಾ ನಿಷ್ಠ ರಾಗಿದ್ದು ತನ್ನ ಪರಮಾಪ್ತ ಪತ್ರಕರ್ತ ಸಂಜಯ ಬಾರು ರನ್ನು 2009 ರಲ್ಲಿ ಮಾಧ್ಯಮ ಸಲಹೆಗಾರ ರಾಗಿ ನೇಮಕ ಮಾಡಲು ಅಹ್ಮದ್ ಪಟೇಲ್ ಒಪ್ಪದೇ ಇದ್ದಾಗ ಡಾ ಸಿಂಗ್ ಬೇಸರ ಗೊಂಡಿದ್ದರು. ಯಾವಾಗ ನರೇಗಾ ಬಗ್ಗೆ ಮಾಧ್ಯಮ ಗಳಲ್ಲಿ ಡಾ ಸಿಂಗ್ ಬಗ್ಗೆ ಹೊಗಳಿಕೆ ಗಳು ಬಂದವೋ ಅದಕ್ಕೂ ಅಹ್ಮದ ಪಟೇಲ್ ಅಕ್ಷಪೀಸ ತೊಡಗಿದಾಗ ತಮ್ಮ ಅಧಿಕಾರಿಗಳನ್ನೇ ಕರೆದು ಡಾ ಸಿಂಗ್ " ಕ್ರೆಡಿಟ್ ರಾಹುಲ್ ರಿಗೆ ಕೊಡಿ ನಮಗೆ ಬೇಡ ಸಮಸ್ಯೆ ಸ್ರಷ್ಟಿ ಆಗುತ್ತದೆ " ಎಂದು ಹೇಳಿದರು ಎಂದು ಸಂಜಯ ಬಾರು ನಂತರ ಬರೆದು ಕೊಂಡಿದ್ದರು. ಡಾ ರಾಜಾ ದಯಾನಿಧಿ ಮಾರನ್ ಗೆ ಕೊಟ್ಟಿರುವ ಖಾತೆ ಗಳು ನಿಮಗೆ ಸಮಸ್ಯೆ ತರುತ್ತವೆ ಎಂದು ರತನ್ ಟಾಟಾ ಮೊದಲೇ ಬಂದು ಪ್ರಧಾನಿ ಕಿವಿಗೆ ಹಾಕಿದ್ದರು ಕೂಡ ಕರುಣಾ ನಿಧಿ ರಂಪ ತೆಗೆಯಬಹುದು ಏನು ಮಾಡಲು ಆಗುವುದಿಲ್ಲ ಎಂದು ಸೂಚನೆ 10 ಜನ ಪಥ್ ನಿಂದ ಬಂದಿದ್ದರಿಂದ ಡಾ ಮನಮೋಹನ್ ಸಿಂಗ್ ಏನು ಮಾಡಲು ಸಾಧ್ಯ ಆಗಲಿಲ್ಲ. ಕೊನೆಗೆ ಲಾಲು ಪ್ರಸಾದ ಯಾದವ ರನ್ನು ಅನರ್ಹತೆ ಇಂದ ಬಚಾವು ಮಾಡಲು ಹೋಗಿ ಸೋನಿಯಾ ಒತ್ತಡದಿಂದ ಸುಗ್ರೀವಾಜ್ಞೆ ತಂದಿದ್ದ ಡಾ ಮನಮೋಹನ ಸಿಂಗ್ ಆ ಕರಡನ್ನು ರಾಹುಲ್ ಗಾಂಧಿ ದಿಲ್ಲಿ ಪ್ರೆಸ್ ಕ್ಲಬ್ ನಲ್ಲಿಕುಳಿತು ಹರಿದು ಹಾಕಿದಾಗ ಅತೀವ ಮುಜುಗರ ಅನುಭವಿಸಿದ್ದರಂತೆ. ಆದರೆ ಎಂದು ಡಾ ಮನಮೋಹನ ಸಿಂಗ್ ಪರಮಾಣು ಕರಾರು ವಿಷಯ ಬಿಟ್ಟರೆ ಯಾವ ವಿಷಯದಲ್ಲಿಯೂ ಸೋನಿಯಾ ಜೊತೆ ದನಿ ಎತ್ತರಿಸಿ ಮಾತನಾಡಲಿಲ್ಲ. ಬಹುಶ ಈ ಮೌನವೇ ಮನಮೋಹನ ರಿಗೆ ಪ್ರಧಾನಿ ಪಟ್ಟದಲ್ಲಿ ಕೂರಿಸಿತು ಮತ್ತು ಈ ಅತಿಯಾದ ಮೌನವೇ ಅವರನ್ನು ಹೆಚ್ಚು ಟೀಕೆಗೆ ಹೀಯಾಳಿಕೆಗೆ ಗುರಿಪಡಿಸಿತು. ಕೆಲವೊಮ್ಮೆ ಸಾಮರ್ಥ್ಯವೇ ದೌರ್ಬಲ್ಯ ಆಗುತ್ತದೆ
ಪಂಚಮಸಾಲಿ ಮೀಸಲಾತಿ ಸಾಧ್ಯವೇ?: ಸಮುದಾಯವರು ಅಧ್ಯಯನ ನಡೆಸಿದರೆ ತಲೆ ಬಿಸಿ ಏರುತ್ತಾ?
ಅನುಕರಣೀಯ ವ್ಯಕ್ತಿತ್ವದ ಮುಖಗಳು
ವಿಭಜನೆ ಪೂರ್ವದಲ್ಲಿ ಈಗಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಹುಟ್ಟಿದ ಡಾ ಮನಮೋಹನ ಸಿಂಗ್ ರ ಹಳ್ಳಿಯಲ್ಲಿ ವಿದ್ಯುತ್ತು ಪಕ್ಕಾ ರಸ್ತೆ ಶಾಲೆ ಆಸ್ಪತ್ರೆ ಯಾವುದು ಇರಲಿಲ್ಲ. ಆದರೆ ಮನಮೋಹನ ಸಿಂಗ್ ಆ ಜಾಗೆಯಿಂದ ಬಂದು ಬರೀ ಸ್ಕಾಲರ ಶಿಪ್ ಬಳಸಿಕೊಂಡು ಕೆಂಬ್ರಿಜು ಮತ್ತು ಒಕ್ಸಫರ್ಡ್ ಗಳಲ್ಲಿ ಉನ್ನತ ಶಿಕ್ಷಣ ಪಡೆದರು. ಯಾರದು ಕಾಲು ಹಿಡಿಯಲಿಲ್ಲ ಮರ್ಜಿ ಕಾಪಾಡಲಿಲ್ಲ ಚಮಚಗಿರಿ ನಡೆಸದೇ ಪ್ರಧಾನ ಮಂತ್ರಿಯು ಆದರು. ಜಾಗತೀಕರಣಕ್ಕೆ ಭಾರತದ ಬಾಗಿಲು ತೆಗೆದು ಪರಮಾಣು ಕರಾರು ಕೂಡ ಮಾಡಿದರು ಆದರೆ ನಯಾ ಪೈಸೆ ವೈಯಕ್ತಿಕ ಆರೋಪ ಇವರ ಮೇಲೆ ಹೊರಿಸಲು ಸಾಧ್ಯ ಆಗಲಿಲ್ಲ. ಅದೆಷ್ಟೇ ಪ್ರಸಂಗ ಬಂದರು ಕೂಡ ತನಗೆ ರಾಜಕೀಯ ಅಧಿಕಾರ ಕೊಟ್ಟ ಪಿ ವಿ ನರಸಿಂಹ ರಾಯರು ಮತ್ತು ಸೋನಿಯಾ ಗಾಂಧಿ ಅವರಿಗೆ ರಾಜಕೀಯ ವಾಗಿ " ಕೈ" ಕೊಡಲಿಲ್ಲ. ಡಾ ಸಿಂಗ್ ಸರ್ಕಾರದ ಮಂತ್ರಿಗಳು ಅನೇಕರು ಜೈಲಿಗೆ ಹೋದರು ಕೂಡ ಯಾವತ್ತಿಗೂ ವೈಯಕ್ತಿಕ ವಾಗಿ ಡಾ ಮನಮೋಹನ ಸಿಂಗ್ ರನ್ನು" ಭ್ರಷ್ಟ" ಎನ್ನಲು ಕಟು ಟೀಕಾಕಾರ ರಿಗೂ ಸಾಧ್ಯವು ಇರಲಿಲ್ಲ ಮಾಡಿದರೆ ದೇಶವು ಒಪ್ಪುತ್ತಿರಲಿಲ್ಲ.