Manamohan singh death: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನವನ್ನು 'ವೈಯಕ್ತಿಕ ನಷ್ಟ' ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬಣ್ಣಿಸಿದ್ದಾರೆ. ದೇಶಕ್ಕೆ ಹೃದಯಪೂರ್ವಕವಾಗಿ ಸೇವೆ ಸಲ್ಲಿಸಿದ ನಾಯಕನನ್ನು ಕಳೆದುಕೊಂಡಿದ್ದೇವೆ, ಅವರ ದೂರದೃಷ್ಟಿಯಿಂದಾಗಿ ಲಕ್ಷಾಂತರ ಭಾರತೀಯರ ಜೀವನ ಬದಲಾಗಿದೆ ಎಂದಿದ್ದಾರೆ.
ದೆಹಲಿ (ಡಿ.27): 'ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನ ವೈಯಕ್ತಿಕವಾಗಿ ನಷ್ಟ, ನಾನು ಒಬ್ಬ ಗೆಳೆಯ, ಮಾರ್ಗದರ್ಶಕ, ತತ್ವಜ್ಞಾನಿಯನ್ನ ಕಳೆದುಕೊಂಡಿದ್ದೇನೆ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಧ್ಯಕ್ಷೆ ಹಾಗೂ ರಾಜ್ಯಸಭಾ ಸಂಸದೆ ಸೋನಿಯಾಗಾಂಧಿ ಬಣ್ಣಿಸಿದ್ದಾರೆ.
ಮನಮೋಹನ್ ಸಿಂಗ್ ನಿಧನ ಹಿನ್ನೆಲೆ ಸಂದೇಶ ಹೊರಡಿಸಿರುವ ಅವರು, ನಮ್ಮ ದೇಶಕ್ಕೆ ಹೃದಯಪೂರ್ವಕವಾಗಿ ಸೇವೆ ಸಲ್ಲಿಸಿದ ಒಬ್ಬ ಬುದ್ಧಿವಂತಿಕೆ, ಉದಾತ್ತತೆ ಮತ್ತು ನಮ್ರತೆಯ ಪ್ರತಿರೂಪವಾಗಿದ್ದ ನಾಯಕನನ್ನು ಕಳೆದುಕೊಂಡಿದ್ದೇವೆ. ಮನಮೋಹನ್ ಸಿಂಗ್ ಅವರ ದೂರದೃಷ್ಟಿಯಿಂದಾಗಿ ಲಕ್ಷಾಂತರ ಭಾರತೀಯರ ಜೀವನ ಬದಲಾಗಿದೆ ಮತ್ತು ಸಬಲೀಕರಣಗೊಂಡಿದೆ ಎಂದು ಬರೆದುಕೊಂಡಿದ್ದಾರೆ.
ಮನಮೋಹನ್ ಸಿಂಗ್ ಅವರ ಈ ವಸ್ತುಗಳನ್ನು ಪಾಕಿಸ್ತಾನ ಇಂದಿಗೂ ಉಳಿಸಿಕೊಂಡಿದೆ!
ಮನಮೋಹನ್ ಸಿಂಗ್ ಅವರು ಕಾಂಗ್ರೆಸ್ ಪಕ್ಷಕ್ಕೆ ಮಾರ್ಗದರ್ಶಕರಾಗಿದ್ದರು. ಅವರ ಸಹಾನುಭೂತಿ ಮತ್ತು ದೂರದೃಷ್ಟಿ ಲಕ್ಷಾಂತರ ಭಾರತೀಯರ ಜೀವನವನ್ನು ಪರಿವರ್ತಿಸಿತು. ಅದರಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಅವರ ಶುದ್ಧ ಹೃದಯ ಮತ್ತು ತೀಕ್ಷ್ಣ ಮನಸಿಗೆ ಭಾರತೀಯರು ಪ್ರೀತಿಸಿದರು, ಮೆಚ್ಚಿದರು.
ಮಾಜಿ ಪ್ರಧಾನಿ ಗೌರವಾರ್ಥ ಕೈಗೆ ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದ ಟೀಂ ಇಂಡಿಯಾ
ಅವರ ನಿಧನ ನನಗೆ ವೈಯಕ್ತಿಕ ನಷ್ಟ:ಸೋನಿಯಾ ಗಾಂಧಿ
ಡಾ. ಮನಮೋಹನ್ ಸಿಂಗ್ ಅವರ ನಿಧನವು ನನಗೆ ವೈಯಕ್ತಿಕ ತೀವ್ರ ನಷ್ಟವಾಗಿದೆ. ಅವರು ನನ್ನ ಸ್ನೇಹಿತ, ತತ್ವಜ್ಞಾನಿ ಮತ್ತು ಮಾರ್ಗದರ್ಶಕರಾಗಿದ್ದರು. ಅವರು ತಮ್ಮ ಮಾರ್ಗದಲ್ಲಿ ತುಂಬಾ ಸೌಮ್ಯರಾಗಿದ್ದರು ಆದರೆ ಅವರ ನಂಬಿಕೆಗಳಲ್ಲಿ ತುಂಬಾ ದೃಢವಾಗಿದ್ದರು. ಸಾಮಾಜಿಕ ನ್ಯಾಯ , ಜಾತ್ಯತೀತತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಅವರ ಬದ್ಧತೆ ಅಚಲವಾಗಿತ್ತು. ಅವರ ನಿಧನ ನಮ್ಮ ರಾಷ್ಟ್ರ ರಾಜಕಾರಣ, ನಮ್ಮ ಜೀವನದಲ್ಲಿ ಎಂದಿಗೂ ತುಂಬಲಾರದ ನಷ್ಟವಾಗಿದೆ ಎಂದು ಸೋನಿಯಾ ಗಾಂಧಿ ಅವರು ಭಾವುಕರಾಗಿ ಬರೆದುಕೊಂಡಿದ್ದಾರೆ.
