ಮನಮೋಹನ್ ಸಿಂಗ್ ಅವರ ಈ ವಸ್ತುಗಳನ್ನು ಪಾಕಿಸ್ತಾನ ಇಂದಿಗೂ ಉಳಿಸಿಕೊಂಡಿದೆ!
Manmohan Singh PassedAway: ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನಕ್ಕೆ ಪಾಕಿಸ್ತಾನದ ಈ ಗ್ರಾಮ ಕಂಬನಿ ಮಿಡಿದಿದೆ. ಮನಮೋಹನ್ ಸಿಂಗ್ ಅವರಿಗೆ ಸಂಬಂಧಿಸಿದ ಈ ವಸ್ತುಗಳು ಇಂದಿಗೂ ಪಾಕಿಸ್ತಾನದಲ್ಲಿ ಸಂರಕ್ಷಿಡಲಾಗಿದೆ ಏಕೆ ಗೊತ್ತಾ? ಇಲ್ಲಿದೆ ಪೂರ್ಣ ವಿವರ.
ಭಾರತದ ಮಾಜಿ ಪ್ರಧಾನಿ, ವಿಶ್ವದ ಶ್ರೇಷ್ಠ ಅರ್ಥಶಾಸ್ತ್ರ ಪಂಡಿತರೆನಿಸಿದ್ದ ಮನಮೋಹನ್ ಸಿಂಗ್ ವಯೋಸಹಜ ಅನಾರೋಗ್ಯದಿಂದ ಇಹಲೋಕಕ್ಕೆ ವಿದಾಯ ಹೇಳಿದ್ದಾರೆ.
ಡಿಸೆಂಬರ್ 26 ರ ರಾತ್ರಿ ದೆಹಲಿಯ AIIMS ನಲ್ಲಿ ಕೊನೆಯುಸಿರೆಳೆದ ಮನಮಹೋನ್ ಸಿಂಗ್ ಅವರಿಗೆ 92 ವರ್ಷ ವಯಸ್ಸಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಮನಮೋಹನ್ ಸಿಂಗ್ ಅವರು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದರು. ಬಳಿಕ ದೇಶ ವಿಭಜನೆ ಸಮಯದಲ್ಲಿ ಅವರ ಕುಟುಂಬ ಅಮೃತಸರಕ್ಕೆ ಬರಬೇಕಾಯಿತು. ಆದಾಗ್ಯೂ, ಪಾಕಿಸ್ತಾನವು ಇದುವರೆಗೆ ಅವರ ಅನೇಕ ವಸ್ತುಗಳನ್ನು ಸಂರಕ್ಷಿಸಿದೆ. ಅಲ್ಲದೆ, ಅವರ ಹೆಸರಿನಲ್ಲಿ ಒಂದು ಕಟ್ಟಡಕ್ಕೂ ಹೆಸರಿಡಲಾಗಿದೆ ಎಂಬುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಅಂತಹ ವಸ್ತುಗಳ, ಕಟ್ಟಡ ವಿವರದ ಇಲ್ಲಿ ತಿಳಿಯೋಣ.
ಮನಮೋಹನ್ ಸಿಂಗ್ ಅವರು 2004 ರಲ್ಲಿ ಭಾರತದ ಮೊದಲ ಹಿಂದೂಯೇತರ ಪ್ರಧಾನಿಯಾದರು. ಅನಂತರವೇ ಅವರ ಜೀವನ ಪರಿಚಯ ವರದಿಗಳಲ್ಲಿ ಪಾಕಿಸ್ತಾನದ ಅವರ ಹುಟ್ಟೂರು ಗಾಹ್ ಗ್ರಾಮವು ಬೆಳಕಿಗೆ ಬಂದಿತು. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಪಂಜಾಬ್ ಸರ್ಕಾರ 2007ರಲ್ಲಿ ಗಾಹ್ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡುವುದಾಗಿ ಘೋಷಿಸಿತ್ತು. ಅದೇ ಸಮಯದಲ್ಲಿ, ಮನಮೋಹನ್ ಸಿಂಗ್ ಅವರು ಓದಿದ ಶಾಲೆಗೆ ಮನಮೋಹನ್ ಸಿಂಗ್ ಸರ್ಕಾರಿ ಬಾಲಕರ ಪ್ರಾಥಮಿಕ ಶಾಲೆ ಎಂದು ಹೆಸರಿಡಲಾಯಿತು. ಈ ಶಾಲೆಯಲ್ಲಿ ಮನಮೋಹನ್ ಸಿಂಗ್ ಅವರ ನೋಂದಣಿ ದಾಖಲೆಗಳಿಂದ ಫಲಿತಾಂಶದವರೆಗಿನ ದಾಖಲೆಗಳನ್ನು ಇಂದಿಗೂ ಸಂರಕ್ಷಿಸಿಡಲಾಗಿದೆ ಎಂದು ಹೇಳಲಾಗುತ್ತದೆ.
ಗಾಹ್ ಹಳ್ಳಿಯ ಜನರು ಈಗಲೂ ಮನಮೋಹನ್ ಸಿಂಗ್ ಅವರನ್ನೂ ತುಂಬಾ ನೆನಪಿಸಿಕೊಳ್ಳುತ್ತಾರೆ ಎಂಬುದು ಗೊತ್ತೇ? ಹೌದು ಅವರ ನಿಧನದ ಮಾಹಿತಿ ತಿಳಿದು ಪಾಕಿಸ್ತಾನದ ಈ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಮನಮೋಹನ್ ಸಿಂಗ್ ಅವರಿಂದಾಗಿ ತಮ್ಮ ಗ್ರಾಮವು ಮಾದರಿ ಗ್ರಾಮಗಳ ಪಟ್ಟಿಯಲ್ಲಿ ಬರಲು ಮತ್ತು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಗ್ರಾಮದ ಜನರು ಹೇಳುತ್ತ ಕಂಬನಿ ಮಿಡಿದಿದ್ದಾರೆ.
ಎಲ್ಲಿದೆ ಗ್ರಾಮ?
ಮನಮೋಹನ್ ಸಿಂಗ್ ಅವರು ಪಂಜಾಬ್ ಪ್ರಾಂತ್ಯದ ಚಕ್ವಾಲ್ ಜಿಲ್ಲೆಯ ಗಾಹ್ ಗ್ರಾಮದಲ್ಲಿ 26 ಸೆಪ್ಟೆಂಬರ್ 1932 ರಂದು ಜನಿಸಿದರೆಂದು ಹೇಳಲಾಗುತ್ತೆ. ಬಾಲ್ಯ ಅದೇ ಗ್ರಾಮದಲ್ಲಿ ಕಳೆದ ಮನಮೋಹನ ಸಿಂಗ್. ಮುಂದೆ ಭಾರತ-ಪಾಕಿಸ್ತಾನ ದೇಶ ವಿಭಜನೆಯಾದಾಗ ಈ ಭಾಗ ಪಾಕಿಸ್ತಾನಕ್ಕೆ ಸೇರಿತು ಅಲ್ಲದೇ ಮನಮೋಹನ್ ಸಿಂಗ್ ಕುಟುಂಬ ಪಾಕಿಸ್ತಾನದ ಗ್ರಾಮದಲ್ಲಿ ತಮ್ಮ ಮನೆ ಆಸ್ತಿಯೆಲ್ಲ ತೊರೆದು ಭಾರತಕ್ಕೆ ಬಂದರು. ಅದಕ್ಕೂ ಮೊದಲು ಅಂದರೆ, 1937 ರಿಂದ 1941 ರವರೆಗೆ ಮನಮೋಹನ್ ಸಿಂಗ್ ಈ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದರು.
ಭಾರತದ ಪ್ರಧಾನಿಯಾದಾಗ, ಅವರು ಒಮ್ಮೆ ಪಾಕಿಸ್ತಾನಕ್ಕೆ ಹೋಗುವ ಬಯಕೆಯನ್ನು ವ್ಯಕ್ತಪಡಿಸಿದ್ದರಂತೆ, ಇದನ್ನು ರಾಜ್ಯಸಭಾ ಸಂಸದ ರಾಜೀವ್ ಶುಕ್ಲಾ ಅವರು ತಮ್ಮ Scars Of 1947: Real Partition Stories ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.