ಹುದ್ದೆ ಇಲ್ಲದಿದ್ದರೂ ದೇಶದ ಬಗ್ಗೆ ಚಿಂತಿಸುತ್ತಿದ್ದ ದಾರ್ಶನಿಕ ಮನಮೋಹನ್ ಸಿಂಗ್: ರಾಜೀವ್ ಚಂದ್ರಶೇಖರ್‌

ನಾನು ಕೆಲವೇ ಕೆಲವು ರಾಜಕಾರಣಿಗಳನ್ನು ಆ ದಶಕದಲ್ಲಿ ತಿಳಿದಿದ್ದೆ. ಡಾ.ಮನಮೋಹನ್ ಸಿಂಗ್ ಅವರು ನಾನು ಭೇಟಿ ಮಾಡಿ ಮಾತನಾಡುವ ವ್ಯಕ್ತಿಯಾಗಿ ಉಳಿದಿದ್ದರು. ಆಗಲೂ ಅವರು ರಾಜಕೀಯ ವರ್ಗದ ಇತರರಿಗಿಂತ ಭಿನ್ನವಾಗಿದ್ದರು. ವಿನಮ್ರರಾಗಿದ್ದರು.

Manmohan Singh was a visionary who cared about the country Says Rajeev Chandrasekhar gvd

ರಾಜೀವ್ ಚಂದ್ರಶೇಖರ್‌, ಮಾಜಿ ಕೇಂದ್ರ ಸಚಿವ

ಡಾ. ಮನಮೋಹನ್ ಸಿಂಗ್ ಮಾಜಿ ಪ್ರಧಾನಿ, ವಿತ್ತ ಸಚಿವ, ಆರ್‌ಬಿಐ ಗವರ್ನರ್‌, ಮುಖ್ಯ ಆರ್ಥಿಕ ಸಲಹೆಗಾರ.. ಹೀಗೆ ಹಲವು ವಿಚಾರಗಳು ನೆನಪಾಗುತ್ತದೆ. ಆಗ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾವ್ ಅವರ ಕಾಲದಲ್ಲಿ ಭಾರತದ ಆರ್ಥಿಕ ನೀತಿಯ ಸುಧಾರಣೆಯ ಶಿಲ್ಪಿಯಾಗಿದ್ದರು. ಭಾರತದಲ್ಲಿ ನಂಬಿಕೆಯುಳ್ಳವರು. ಆಕಸ್ಮಿಕವಾಗಿ ಪ್ರಧಾನಿಯಾಗಿದ್ದವರು.  ಹೀಗೆ ಸಾಮಾನ್ಯವಾಗಿ ಎಲ್ಲ ರಾಜಕಾರಣಿಗಳ ನಿಧನದ ನಂತರ ಹೇಗೆ ಬರೆಯಲಾಗುತ್ತಿತ್ತೋ ಅದೇ ರೀತಿ ಅವರ ಸಾವಿನ ನಂತರವೂ ಬರೆಯಲಾಗುತ್ತಿದೆ. ಆದರೆ ಸಿಂಗ್ ವಿಚಾರದಲ್ಲಿ ಅವೆಲ್ಲವೂ ನಿಜವಾಗಿರುತ್ತದೆ. ಅವರು ಮೊದಲುಸಂಭಾವಿತ ವ್ಯಕ್ತಿ. ಬಳಿಕ ಅರ್ಥಶಾಸ್ತ್ರಜ್ಞ. ಅನಂತರ ರಾಜಕಾರಣಿ.

ಅವರು ಅನೇಕ ಜನರ ಮೇಲೆ ಆಳವಾದ ಅಳಿಸಲಾಗದ ಪ್ರಭಾವವನ್ನು ಬೀರಿದ್ದರು. ಅದು ಸಮಕಾಲೀನ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲು. ನರಸಿಂಹ ರಾವ್ ಕಾಲದಲ್ಲಿ ಹಣಕಾಸು ಸಚಿವರಾಗಿ ನಡೆಸಿದ ಅಧಿಕಾರ ಸದಾ ನೆನಪಿನಲ್ಲಿ ಉಳಿಯುತ್ತಾರೆ. ಆರ್ಥಿಕತೆಯ ಮುಕ್ತತೆಯನ್ನು ಪ್ರಾರಂಭಿಸಿದರು. 5 ದಶಕಗಳ ಹಾದಿ ತಪ್ಪಿದ್ದ ಸಮಾಜವಾದದ ಅಂತ್ಯಕ್ಕೆ ಕಾರಣವಾಯಿತು.  ಮುಕ್ತ ಮಾರುಕಟ್ಟೆಗಳು, ಖಾಸಗಿ ಹೂಡಿಕೆಗಳು, ಉದ್ಯಮಗಳೊಂದಿಗೆ ಪ್ರಯೋಗಗಳು ಆರಂಭವಾಯಿತು. ಸಿಂಗ್ ಅವರಿಂದ ಬದಲಾದ ಅಸಂಖ್ಯಾತರನ್ನು ಬಿಟ್ಟು ಹೋಗಿದ್ದಾರೆ. ನಾನು ಕೂಡ ಅದರಲ್ಲಿದ್ದೇನೆ. ನನ್ನ ಜೀವನದ ಅನೇಕ ಹಂತಗಳಲ್ಲಿ ಅವರೊಂದಿಗೆ ಎಂದಿಗೂ ಬೇರ್ಪಡಿಸಲಾಗದ ಆಳವಾದ ಸಂಬಂಧವಿದೆ. ಮೂರು ದಶಕಗಳ ಕಾಲ ಅವರೊಂದಿಗೆ ಫ್ಯಾನ್ ಬಾಯ್‌ ಕ್ಷಣವನ್ನು ಆನಂದಿಸಿದ್ದೇನೆ.

ಜೇಬಲ್ಲೇ ರಾಜೀನಾಮೆ ಪತ್ರ ಇಟ್ಟುಕೊಂಡು ಮೌನದಿಂದಲೇ ಜಗತ್ತು ಗೆದ್ದ ಮನಮೋಹನ ಸಿಂಗ್!

ತಾಳ್ಮೆಯಿಂದ ಎಲ್ಲವನ್ನೂ ಆಲಿಸುತ್ತಿದ್ದ ಸಂಭಾವಿತ: ಅವರ ಸುಧಾರಣೆಗಳು, ಟೆಲಿಕಾಂ ಕ್ಷೇತ್ರದ ಪ್ರಾರಂಭವು ನನ್ನ ಜೀವನದಲ್ಲಿ ಪರಿಣಾಮ ಬೀರಿತು. ನನ್ನ ಜೀವನವನ್ನು ಸಿಲಿಕಾನ್ ವ್ಯಾಲಿಯಲ್ಲಿ ಗೀಕಿ ಚಿಪ್ ಡಿಸೈನರ್‌ನಿಂದ ಹಿಡಿದು ಉದ್ಯಮ ಆರಂಭಿಸುವ ತನಕ ಬದಲಾಯಿಸಿತು. ಆ 15 ವರ್ಷಗಳಲ್ಲಿ 1996ರಿಂದ 2006ರವರೆಗೆ ಅವರು ನನ್ನ ಜೀವನದಲ್ಲಿ ನಿರಂತರ ಉಪಸ್ಥಿತಿಯನ್ನು ಉಳಿಸಿಕೊಂಡರು. ಹಲವು ವಿಧಾನಗಳಲ್ಲಿ ನನ್ನನ್ನು ಪ್ರೋತ್ಸಾಹಿಸುತ್ತಿದ್ದರು. ಬೆಂಬಲ ನೀಡುತ್ತಿದ್ದರು. ವ್ಯವಸ್ಥೆಯ ಬಗ್ಗೆ ನನ್ನ ದೂರುಗಳನ್ನು ತಾಳ್ಮೆಯಿಂದ ಕೇಳುವುದರಿಂದ ಹಿಡಿದು ಎಲ್ಲವನ್ನು ಆಲಿಸುತ್ತಿದ್ದರು.1991ರಲ್ಲಿ ನಾನು 26 ವರ್ಷದವನಿದ್ದಾಗ ಅವರನ್ನು ಮೊದಲ ಸಲ ಭೇಟಿಯಾದೆ. ಅದು ಸಂಕ್ಷಿಪ್ತ ಭೇಟಿಯಾಗಿತ್ತು. ಆದರೆ ಭಾರತದಲ್ಲಿ ನಾನು ಉಳಿಯಲು ಮತ್ತು ಇಂಟೆಲ್‌ನಲ್ಲಿ ನನ್ನ ವೃತ್ತಿ ಜೀವನವನ್ನು ತೊರೆಯಲು ನಿರ್ಣಾಯಕ ಪಾತ್ರವನ್ನು ವಹಿಸಿತು.

ನಿರಂತರ ಸಂಪರ್ಕ: ನಾನು ಕೆಲವೇ ಕೆಲವು ರಾಜಕಾರಣಿಗಳನ್ನು ಆ ದಶಕದಲ್ಲಿ ತಿಳಿದಿದ್ದೆ. ಡಾ.ಮನಮೋಹನ್ ಸಿಂಗ್ ಅವರು ನಾನು ಭೇಟಿ ಮಾಡಿ ಮಾತನಾಡುವ ವ್ಯಕ್ತಿಯಾಗಿ ಉಳಿದಿದ್ದರು. ಆಗಲೂ ಅವರು ರಾಜಕೀಯ ವರ್ಗದ ಇತರರಿಗಿಂತ ಭಿನ್ನವಾಗಿದ್ದರು. ವಿನಮ್ರರಾಗಿದ್ದರು. ಕೇಳುಗನಾಗಿದ್ದರು. ಬುದ್ಧಿವಂತರಾಗಿದ್ದರು. ರಾಜಕೀಯ ವ್ಯವಸ್ಥೆಯಲ್ಲಿ ಇತರರು ಸುಲಭವಾಗಿ ತಿಳಿಯಲು ಸಾಧ್ಯವಾಗದ , ಅರ್ಥ ಮಾಡಿಕೊಳ್ಳಲಾಗದ ಭಾರತದ ಬಗ್ಗೆಗಿನ ದೂರದೃಷ್ಟಿತ್ವವನ್ನು ಹೊಂದಿದ್ದರು.  1999ರಲ್ಲಿ ಅಟಲ್ ಜೀಯವರ ರಾಷ್ಟ್ರೀಯ ಟೆಲಿಕಾಂ ನೀತಿಗಳು ಮತ್ತು ಸೆಲ್ಯೂಲರ್ ಉದ್ಯಮ ಪ್ರಬುದ್ಧವಾಗಿ ಬೆಳೆದ ಕಾಲಘಟ್ಟದಲ್ಲಿ ಕೆಲವೊಮ್ಮೆ ಭಾರತದ ದೊಡ್ಡ ದೊಡ್ಡ ಕಾರ್ಪೋರೆಟ್‌ ಸಂಸ್ಥೆಗಳ ಹಿಂಬಾಗಿಲ ಪ್ರವೇಶದ ಭೀತಿಯನ್ನು ಎದುರಿಸಿದ್ದೇವೆ. ಅದು ಮಾಧ್ಯಮ ಮತ್ತು ನ್ಯಾಯಾಲಯಗಳಲ್ಲಿ ನಡೆದ ದೊಡ್ಡ ಯುದ್ಧವಾಗಿತ್ತು. 

ವಿರೋಧ ಪಕ್ಷದ ನಾಯಕನಾಗಿ ಅವರು ನನಗೆ ಮತ್ತು ಬಹಳ ಪ್ರಯತ್ನದಿಂದ ನಿರ್ಮಿಸಲಾದ ನವೋದ್ಯಮಕ್ಕೆ ಬೆಂಬಲಿಸಿದ್ದರು. ಅಂತಹ ಕರಾಳ ಸಂದರ್ಭದಲ್ಲಿಯೂ ಅವರು ನನ್ನ ಪರವಾಗಿ ಮತ್ತು ಉದ್ಯಮದ ಪರವಾಗಿ ನಿಂತಿದ್ದರು. ಕಾಂಗ್ರೆಸ್‌ನ ಅನೇಕರು ಈ ವಿವಾದದಿಂದ ಹಿಂದೆ ಸರಿಯಲು ನಿರ್ಧರಿಸಿದಾಗಲೂ ಅವರ ದೃಢವಾಗಿದ್ದರು. ಕೆಲವರು ವ್ಯವಸ್ಥೆಯನ್ನು ಹೇಗೆ ದುರುಪಯೋಪಡಿಸಿಕೊಳ್ಳುತ್ತಿದ್ದಾರೆ ಎಂದು ಕಟುವಾಗಿ ದೂರಿದ್ದರು. 2005ರಲ್ಲಿ ನಾನು ನನ್ನ ಟೆಲಿಕಾಂ ಸಂಸ್ಥೆಯನ್ನು ಮಾರಾಟ ಮಾಡಿದಾಗ, ಅವರು ಆದಾಗಲೇ ಪ್ರಧಾನಿಯಾಗಿದ್ದರು. ನಾನು ನನ್ನ ನಿರ್ಗಮನದ ಬಗ್ಗೆ ಬರೆದ ಮತ್ತು ನಾನು ಕರೆ ಮಾಡಿದ ಹೇಳಿದ ಮೊದಲ ವ್ಯಕ್ತಿ ಅವರಾಗಿದ್ದರು. ಅವರು ಪ್ರೀತಿಯಿಂದ ಪ್ರತಿಕ್ರಿಯಿಸಿ ನನಗೆ ಶುಭ ಕೋರಿ ಪತ್ರ ಬರೆದಿದ್ದರು. ನನಗೆ ಆ ಪತ್ರ ಒಂದು ರೀತಿಯಲ್ಲಿ ಆಸ್ತಿಯಿದ್ದಂತೆ. 2006ರಲ್ಲಿ ನನಗೆ ಸಂಸತ್ತಿನಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿತು. ಆಗ ನಾವು ಬೇರೆ ಪಕ್ಷದಲ್ಲಿದ್ದರೂ ಸಂವಹನ ನಡೆಸುತ್ತಿದ್ದೆವು. 

ಕೆಲವು ವಿಷಯಗಳು ಎಂದಿಗೂ ಬದಲಾಗದು: ವಿರೋಧ ಪಕ್ಷದ ಸಂಸದನಾಗಿ 2ಜಿ ಹಂಚಿಕೆ, ಒಂದು ಶ್ರೇಣಿ ಒಂದು ಪಿಂಚಣಿ , ರಾಷ್ಟ್ರೀಯ ಯುದ್ಧ ಸ್ಮಾರಕ, ಎನ್‌ಪಿಎಗಳು ಮತ್ತು ಇತರ ಹಲವು ಸಮಸ್ಯೆಗಳನ್ನು ನಾನು ಸಂಸತ್ತಿನಲ್ಲಿ ಗಟ್ಟಿಧ್ವನಿಯಲ್ಲಿ ಪ್ರಸ್ತಾಪಿಸಿದ್ದೇನೆ. ಜತೆಗೆ ಪತ್ರಗಳ ಮೂಲಕ ಧ್ವನಿ ಎತ್ತಿದ್ದೇನೆ. ಇದು ಆದರೆ ನನ್ನೊಂದಿಗಿನ ಅವರ ಸಂಬಂಧವನ್ನು ಎಂದಿಗೂ ಬದಲಾಯಿಸಲಿಲ್ಲ. ನಾನು ರಾಜಾ ಅವರ ಹಗರಣಗಳನ್ನು ಮತ್ತು ಸಿಬಲ್ , ಮಾಂಟೆಕ್ ಅವರು ಸಮರ್ಥಿಸಿಕೊಳ್ಳುತ್ತಿದ್ದನ್ನು ಕೋಪದಿಂದ ಬಹಿರಂಗಪಡಿಸುತ್ತಿದ್ದ ಸಮಯದಲ್ಲಿಯೂ ಅವರು ಆಗಾಗ ಭೇಟಿಯಾಗುತ್ತಿದ್ದರು. ಯಾವತ್ತೂ ನನ್ನ ವಿರುದ್ಧ ಯಾವುದೇ ಕೋಪ ಅಥವಾ ಆಕ್ರೋಶವನ್ನು ತೋರಿಸಲಿಲ್ಲ.

ಮಹಾಮೌನಿ ಸಾಧಕನಿಗೆ ಎದುರಾಗಿದ್ದ ಅವಮಾನ ಎಂಥದ್ದು?: ಶಾಂತಿಪ್ರಿಯ ಸಿಂಗ್‌ರಲ್ಲಿ ಒಬ್ಬ ಸುಂದರ ಕವಿಯೂ ಇದ್ದ

ಸದಾ ಆರ್ಥಿಕತೆ ಬಗ್ಗೆ ಯೋಚಿಸುತ್ತಿದ್ದ ಸಿಂಗ್: 2014ರ ನಂತರ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ಬಳಿಕವೂ ಆಗಾಗ ಅವರನ್ನು ನಾನು ಭೇಟಿಯಾಗುತ್ತಿದ್ದೆ. ಆಗ ಅವರು ಮೃದುವಾದ ರೀತಿಯಲ್ಲಿ ಹೊಸ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಸುಧಾರಣೆಗಳನ್ನು ಕೈಗೊಳ್ಳಲು ಸೂಚಿಸುವಂತೆ ನನಗೆ ಹೇಳುತ್ತಿದ್ದರು. ಪ್ರಧಾನಿಯಾಗದೇ ಇದ್ದರೂ ಕೂಡ ಭಾರತದ ಆರ್ಥಿಕ ಭವಿಷ್ಯದ ಬಗ್ಗೆ ಅವರು ಆಳವಾಗಿ ಯೋಚಿಸುತ್ತಿದ್ದರು. ನಾನು ಅದೃಷ್ಟವಂತ ವ್ಯಕ್ತಿ. ಇತರರಿಗೆ ಹೋಲಿಸಿದರೆ ಒಂದು ಕೈ ಹೆಚ್ಚೇ ಅದೃಷ್ಟವಂತ ಎನ್ನಬಹುದು. ಏಕೆಂದರೆ ನನಗೆ ಹಲವು ಮಹಾನ್‌ ವ್ಯಕ್ತಿಗಳನ್ನು ಭೇಟಿಯಾಗುವ ಮತ್ತು ಅವರೊಂದಿಗೆ ಹೆಜ್ಜೆ ಹಾಕುವ ಅವಕಾಶ ಸಿಕ್ಕಿದೆ. ದೇವರು ಕೊಟ್ಟ ಈ ವರಕ್ಕಾಗಿ ನಾನು ಆಬಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಅವರ ಬಗ್ಗೆ ಇನ್ನಷ್ಟು ಜನರು ಹೆಚ್ಚು ಹೆಚ್ಚು ಬರೆಯಬಹುದು, ಇನ್ನಷ್ಟು ಹೇಳಬಹುದು. ಬಳಿಕ ಜೀವನ ಮುಂದುವರಿಯುತ್ತದೆ. ಆದರೆ ನನ್ನಂತ ಅನೇಕರಿಗೆ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತಾರೆ. ನೀವು ನಮ್ಮೊಂದಿಗೆ ಕಳೆದ ಎಲ್ಲ ಸಮಯಕ್ಕಾಗಿ ಧನ್ಯವಾದಗಳು ಸಾರ್.. ಗುಡ್‌ ಬೈ.

Latest Videos
Follow Us:
Download App:
  • android
  • ios