ಮಣಿಪುರದ ಸ್ಥಳೀಯ ಹಾವೊಫಾ ಶ್ವಾನವೀಗ ದೇಶ ಸೇವೆಗೆ ಸಿದ್ಧಗೊಳ್ಳುತ್ತಿದ್ದು, ಅಸ್ಸಾಂ ರೈಫಲ್ಸ್ ವಿಭಾಗವನ್ನು ಸೇರಲಿದೆ. ಹಾವೊಫಾ ತಳಿಯ ಶ್ವಾನವು ಮಣಿಪುರ ತಂಗ್ಖುಲ್ ಪ್ರದೇಶದ ದೇಶಿಯ ತಳಿಯ ಶ್ವಾನವಾಗಿದೆ.
ಮಣಿಪುರದ ಸ್ಥಳೀಯ ಹಾವೊಫಾ ಶ್ವಾನವೀಗ ದೇಶ ಸೇವೆಗೆ ಸಿದ್ಧಗೊಳ್ಳುತ್ತಿದ್ದು, ಅಸ್ಸಾಂ ರೈಫಲ್ಸ್ ವಿಭಾಗವನ್ನು ಸೇರಲಿದೆ. ಹಾವೊಫಾ ತಳಿಯ ಶ್ವಾನವು ಮಣಿಪುರ ತಂಗ್ಖುಲ್ ಪ್ರದೇಶದ ದೇಶಿಯ ತಳಿಯ ಶ್ವಾನವಾಗಿದ್ದು, ಇದು ಮಣಿಪುರದ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ. ಅದರ ತೀಕ್ಷ್ಣವಾದ ಬೇಟೆಗೆ ಹಾಗೂ ಮತ್ತು ನಿಷ್ಠೆಗೆ ಹೆಸರುವಾಸಿಯಾಗಿದೆ.
ಒಂದು ಕಾಲದಲ್ಲಿ ಈ ಹಾವೊಫಾ ಶ್ವಾನಗಳು ತಂಗ್ಖುಲ್ ಬೇಟೆಗಾರರಿಗೆ ಪ್ರಮುಖ ಒಡನಾಡಿಗಳಾಗಿದ್ದವು, ಪ್ರತಿಯೊಂದು ಹಾವೊಫಾ ತಳಿಯ ಶ್ವಾನಗಳಿಗೆ ವಿಶಿಷ್ಟ ಹೆಸರನ್ನು ನೀಡಿ ತರಬೇತಿ ನೀಡಲಾಗುತ್ತದೆ.
ತಂಗ್ಖುಲ್ ಪ್ರದೇಶದಲ್ಲಿ ಎರಡು ವಿಧದ ಹಾವೊಫಾ ಶ್ವಾನಗಳಿವೆ. ಮೊದಲನೆಯದು ಸಣ್ಣ ಪ್ರಾಣಿಗಳ ಬೇಟೆಗೆ ಬಳಸುವ ಚಿಕ್ಕ ತಳಿಯ ಶ್ವಾನ ಹಾಗೂ , ಮತ್ತೊಂದು ಸಣ್ಣ ದಟ್ಟ ನೀಲಿಯಾದ ಕಪ್ಪು ಬಣ್ಣದ ಉದ್ದ ಮೂತಿ ಮತ್ತು ಕರಡಿಯನ್ನು ಹೋಲುವ ಅಗಲವಾದ ದವಡೆಗಳನ್ನು ಹೊಂದಿರುವ ದೊಡ್ಡ ತಳಿಯ ಶ್ವಾನಗಳಾಗಿವೆ.
ಹಾವೋಫಾ ತಂಗ್ಖುಲ್ ಸಮುದಾಯದ ಸ್ಥಳೀಯ ನಾಯಿ ತಳಿಯಾಗಿದೆ. ಇದು ಈ ಪ್ರದೇಶದಲ್ಲಿ ಮಾತ್ರ ಕಂಡುಬರುತ್ತದೆ ಮತ್ತು ಬೇರೆಲ್ಲಿಯೂ ಕಂಡುಬರುವುದಿಲ್ಲ. ಹಾವೋಫಾವನ್ನು ಕಾವಲು ನಾಯಿ ಮತ್ತು ಅತ್ಯುತ್ತಮ ಬೇಟೆ ನಾಯಿ ಎಂದು ಪರಿಗಣಿಸಲಾಗುತ್ತದೆ. ಇದರ ಬಲವಾದ ವಾಸನೆ ಪ್ರಜ್ಞೆಯು ಇದನ್ನು ಹೆಚ್ಚು ಬೇಡಿಕೆಯುಳ್ಳ ನಾಯಿಯನ್ನಾಗಿ ಮಾಡುತ್ತದೆ. ಎಂದು ಫುಂಗ್‌ಚಮ್ ಹಾವೋಫಾ ನಾಯಿ ಪ್ರೇಮಿಗಳ ಸಂಘದ ಅಧ್ಯಕ್ಷ ಟೆನ್ನೊ ಹೇಳಿದ್ದಾರೆ.
ಇತ್ತೀಚೆಗೆ ಶುದ್ಧ ತಳಿಯ ಹಾವೊಫಾ ಶ್ವಾನಗಳ ಸಂಖ್ಯೆಯು ಸ್ಥಿರವಾಗಿ ಕ್ಷೀಣಿಸುತ್ತಿದೆ, ಇದರಿಂದಾಗಿ ಮೂಲ ವಂಶಾವಳಿಯ ನಾಯಿಗಳು ಸಿಗುವುದು ಬಹಳ ಅಪರೂಪವಾಗುತ್ತಿದೆ. ಆದರೂ ಉಖ್ರುಲ್ ಜಿಲ್ಲೆಯ ಫುಂಗ್‌ಚಮ್ ಗ್ರಾಮದಲ್ಲಿ ಈ ಹಾವೊಫಾ ಶ್ವಾನಗಳ ಅಧಿಕೃತ ತಳಿಯನ್ನು ಎಚ್ಚರಿಕೆಯಿಂದ ಸಂರಕ್ಷಿಸಲಾಗಿದೆ. ಅಲ್ಲಿ ಈ ಶ್ವಾನಗಳನ್ನು ಸಾಕುವ ಕೆಲವರು ಮೂಲ ತಳಿಯ ಆನುವಂಶಿಕ ಶುದ್ಧತೆಯನ್ನು ಕಾಪಾಡುವುಕ್ಕೆ ಬದ್ಧರಾಗಿದ್ದಾರೆ.
ತಂಗ್ಖುಲ್‌ನ ಸ್ಥಳೀಯ ಸಮುದಾಯಕ್ಕೆ, ಹಾವೊಫಾ ಶ್ವಾನಗಳು ನಾಯಿಗಿಂತಲೂ ಹೆಚ್ಚು, ಆ ಶ್ವಾನವು ಅವರ ಸಾಂಸ್ಕೃತಿಕ ಪರಂಪರೆಯ ಜೀವಂತ ಸಂಕೇತವಾಗಿದೆ. ಈ ತಳಿಯ ಬಗ್ಗೆ ಈಗ ಆಸಕ್ತಿ ಹೆಚ್ಚಾಗುತ್ತಿದ್ದು, ವಿಶೇಷವಾಗಿ ಅಸ್ಸಾಂ ರೈಫಲ್ಸ್ ಅಸ್ಸಾಂನ ಜೋರ್ಹತ್‌ನಲ್ಲಿರುವ ತಮ್ಮ ಶ್ವಾನ ತರಬೇತಿ ಕೇಂದ್ರಕ್ಕಾಗಿ ಹಾವೋಫಾ ನಾಯಿಗಳನ್ನು ಖರೀದಿಸಲು ಪ್ರಾರಂಭಿಸಿದ್ದಾರೆ. ಅವುಗಳ ಅಸಾಧಾರಣ ಸಾಮರ್ಥ್ಯ ಮತ್ತು ಸೇವಾ ಸಾಮರ್ಥ್ಯ ರಕ್ಷಣಾ ಪಡೆಯ ಗಮನಕ್ಕೂ ಬಂದಿದೆ.
ಮಣಿಪುರದ ಶ್ವಾನ ಪ್ರಿಯರಲ್ಲಿ ಒಬ್ಬರಾದ ಯಾಂಗ್ಪೆನ್ ಯಾಂಗ್ಯಾ ಅವರು ಈ ನಾಯಿ ನಮಗೆ ತುಂಬಾ ಒಳ್ಳೆಯದು. ಇದು ದೇಶದ ಭದ್ರತಾ ಪಡೆಗಳಲ್ಲಿಯೂ ಸೇವೆ ಸಲ್ಲಿಸಬಲ್ಲದು. ಇದರ ವಾಸನೆ ಗ್ರಹಿಕೆ ಅತ್ಯುತ್ತಮವಾಗಿದೆ. ದೆಹಲಿ ಮತ್ತು ಮುಂಬೈನಂತಹ ನಗರಗಳಲ್ಲಿ ಇದನ್ನು ಬಳಸಬಹುದು. ಇದು ತನ್ನ ಯಜಮಾನನಿಗೆ ಅತ್ಯಂತ ನಿಷ್ಠವಾಗಿದೆ ಮತ್ತು ಮಕ್ಕಳು ಮತ್ತು ವೃದ್ಧರಿಗೆ ಭದ್ರತೆಯನ್ನು ಒದಗಿಸಲು ಸಹ ಉತ್ತಮವಾಗಿದೆ ಎಂದು ಹೇಳಿದರು.
